More

    ಜನಸಂದಣಿಯಾಗದಂತೆ ಕ್ರಮ ವಹಿಸಿ


    ಮುಂಡರಗಿ: ಕರೊನಾ ಸೋಂಕು ಶಂಕಿತರೆಂದು ಗುರುತಿಸಲ್ಪಟ್ಟವರು ಮನೆಯಿಂದ ಹೊರಗೆ ಓಡಾಡಿದರೆ ಅಂಥವರನ್ನು ಪೊಲೀಸರು ತಕ್ಷಣ ಬಂಧಿಸಬೇಕು. ಜನರು ಒಂದೆಡೆ ಸೇರದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ಆದೇಶವನ್ನು ಚಾಚು ತಪ್ಪದೇ ಶಿಸ್ತುಬದ್ಧವಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಕಳಕಪ್ಪ ಬಂಡಿ ಸೂಚಿಸಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಈ ವೇಳೆ ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಮಾತನಾಡಿ, ಪಟ್ಟಣದ ಪ್ರತಿ ವಾರ್ಡ್​ಗಳಿಗೆ ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಲಾಗುತ್ತಿದೆ. ದಿನಸಿ, ಹಾಲು ಅಂಗಡಿಗಳನ್ನು ಬೆಳಗ್ಗೆ 6ರಿಂದ ಬೆಳಗ್ಗೆ 10ರ ವರೆಗೆ ತೆರೆಯಲಾಗುತ್ತಿದೆ. ನಿಗದಿಪಡಿಸಿರುವ ಸಮಯ ಹೊರತುಪಡಿಸಿ ಜನರು ಮನೆಯಿಂದ ಹೊರಗೆ ಓಡಾಡದಂತೆ ಎಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

    ಬೇರೆ ಜಿಲ್ಲೆ ಮತ್ತು ಹೊರ ರಾಜ್ಯ, ವಿದೇಶಗಳಿಂದ ಬಂದವರ ಪೈಕಿ ಒಟ್ಟು 179 ಕರೊನಾ ಸೋಂಕು ಶಂಕಿತರೆಂದು ಗುರುತಿಸಲಾಗಿದ್ದು, ಅವರನ್ನು ಅವರವರ ಊರಿನ ಭಾಗದ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಇರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

    ಶಾಸಕರು ಮಾತನಾಡಿ, ನಿತ್ಯ ಬೆಳಗಿನಜಾವ ಸುಖಾಸುಮ್ಮನೆ ಓಡಾಡುವ ಜನರು ಹೆಚ್ಚಾಗಿದ್ದಾರೆ. ಆದ್ದರಿಂದ ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಸಮಯ ನಿಗದಿಪಡಿಸಬೇಕು. ಮಧ್ಯಾಹ್ನ ಸುಡು ಬಿಸಿಲಿನಲ್ಲಿ ಹೆಚ್ಚು ಜನರು ಓಡಾಡುವುದಿಲ್ಲ. ಅವಶ್ಯವಿರುವವರು ಮಾತ್ರ ಹೊರಗೆ ಬಂದು ಅಗತ್ಯ ವಸ್ತು ಖರೀದಿಸುತ್ತಾರೆ. ರೈತರ ಅನುಕೂಲಕ್ಕಾಗಿ ಆಗ್ರೋಗಳನ್ನು, ಜನರ ಅನುಕೂಲಕ್ಕಾಗಿ ದಿನಸಿ ಹಾಗೂ ತರಕಾರಿಯನ್ನು ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

    ಪ್ರತಿಕ್ರಿಯಿಸಿದ ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಅವರು, ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸಭೆಯ ಬಳಿಕ ಶಾಸಕ ಬಂಡಿ ತಾಲೂಕಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವೈದ್ಯರೊಂದಿಗೆ ರ್ಚಚಿಸಿದರು.

    ಮುಖಂಡರಾದ ಕರಬಸಪ್ಪ ಹಂಚಿನಾಳ, ಎಸ್.ವಿ. ಪಾಟೀಲ, ತಾಪಂ ಇಒ ಎಸ್.ಎಸ್. ಕಲ್ಮನಿ, ತಾಲೂಕು ವೈದ್ಯಾಧಿಕಾರಿ ಡಾ. ಬಸವರಾಜ ಕೆ., ಸಿಪಿಐ ಸುಧೀರಕುಮಾರ ಬೆಂಕಿ, ಎಸ್.ಎಚ್. ನಾಯ್ಕರ, ದೀಪಾ ಪಾಟೀಲ, ಡಾ. ಬಸವರಾಜ ಬಳ್ಳಾರಿ, ಶರಣಯ್ಯ ಕುಲಕರ್ಣಿ, ಇತರರು ಉಪಸ್ಥಿತರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts