More

    ಜನಸಂಖ್ಯೆಗೆ ಅನುಗುಣ ಮೀಸಲಾತಿ ನೀಡಿ: ನಿವೃತ್ತ ನ್ಯಾಯಮೂತಿರ್ ನಾಗಮೋಹನ್​ದಾಸ್​ ಆಯೋಗದ ವರದಿ ಜಾರಿಗೆ ಒತ್ತಾಯ

    ಚಿಕ್ಕಬಳ್ಳಾಪುರ: ನಿವೃತ್ತ ನ್ಯಾಯಮೂತಿರ್ನಾಗಮೋಹನ್​ದಾಸ್​ ಆಯೋಗದ ವರದಿ ಜಾರಿಗೊಳಿಸಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಒದಗಿಸಲು ಒತ್ತಾಯಿಸಿ ಕರ್ನಾಟಕ ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.


    ಕದಸಂಸ ರಾಜ್ಯ ಸಂಚಾಲಕ ಸುಧಾ ವೆಂಕಟೇಶ್​ ಮಾತನಾಡಿ, ಸಮುದಾಯದ ಜನಪ್ರತಿನಿಧಿಗಳು ಜನಾಂಗದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ. ಇದರ ನಡುವೆ ನಾಗಮೋಹನ್​ದಾಸ್​ ಆಯೋಗದ ವರದಿ ಜಾರಿಗಾಗಿ ರಾಜ್ಯದ 31 ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಏಕಕಾಲದಲ್ಲಿ ಪ್ರತಿಭಟನೆ ನಡೆಸುತ್ತಿದ್ದು ನ್ಯಾಯಬದ್ಧವಾಗಿ ದಲಿತರಿಗೆ ಸಿಗಬೇಕಾದ ಸೌಲಭ್ಯಗಳಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಬೇಡಿಕೆ ಈಡೇರುವವರೆಗೆ ಹೋರಾಟವನ್ನು ಜನಾಂದೋಲನವಾಗಿಸಲಾಗುವುದು ಎಂದರು.


    ದಸಂಸ ರಾಜ್ಯ ಸಂಚಾಲಕ ಗಡ್ಡಂ ಎನ್​.ವೆಂಕಟೇಶ್​, ಸಂವಿಧಾನ ಅಡಿ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಗೆ ಶೇ.15 ರಿಂದ ಶೇ.17ಕ್ಕೆ ಪಂಗಡಕ್ಕೆ ಶೇ.3 ರಿಂದ ಶೇ.7ಕ್ಕೆ ಮೀಸಲಾತಿ ಪ್ರಮಾಣವನ್ನು ಏರಿಸಬೇಕು. ಇದಕ್ಕೆ ನಿರ್ಲಕ್ಷ$್ಯ ತೋರುತ್ತಿರುವ ಸರ್ಕಾರಗಳ ನೀತಿಯನ್ನು ಖಂಡಿಸಿ ಶ್ರೀವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಚಳವಳಿ ಕೈಗೊಂಡ ಸಂದರ್ಭದಲ್ಲಿ 15 ದಿನ ಕಾಲಾವಕಾಶ ಕೇಳಿದ ಸಿಎಂ ಇದುವರೆಗೂ ಬೇಡಿಕೆ ಈಡೇರಿಸಿಲ್ಲ. ಇದು ದಲಿತ ವಿರೋಧಿ ನೀತಿಗೆ ನಿದರ್ಶನ ಎಂದರು.
    ಜೈ ಭೀಮ್​ ಆಮಿರ್ ರಾಜ್ಯ ಸಂಚಾಲಕ ರಾಜಗೋಪಾಲ್​ ಮಾತನಾಡಿ, ಶೋಷಿತರಿಗೆ ಸಂವಿಧಾನ ಬದ್ಧವಾಗಿರುವ ಮೀಸಲಾತಿಯನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

    ಮುಖಂಡ ರಾದ ಬಿ.ಎನ್​. ಗಂಗಾಧರಪ್ಪ, ವಿ.ಮಂಜುನಾಥ್​, ಜಿ.ಸಿ.ವೆಂಕಟ ರವಣಪ್ಪ, ಎಂ.ವೇಣು, ಡಿ.ವಿ.ನಾರಾಯಣಸ್ವಾಮಿ, ಜೀವಿಕ ರತ್ನಮ್ಮ, ಗವಿರಾಯಪ್ಪ, ಕೆ.ವಿ.ವೆಂಕಟೇಶ್​, ಗಂಗಾಧರಪ್ಪ, ಡಿ.ವೆಂಕಟ್​, ಗಂಗರಾಜು, ಎಂ.ಕೇಶವ, ಗೊಲ್ಲಹಳ್ಳಿ ಶಿವಪ್ರಸಾದ್​ ಇದ್ದರು.


    ವಿವಿಧ ಬೇಡಿಕೆಗಳು: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ, ಅಂಬೇಡ್ಕರ್​ ಅವರನ್ನು ಅವಮಾನಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ಸೇವೆಯಿಂದ ವಜಾ, ರಾಜ್ಯದ 25 ಲಕ್ಷಕ್ಕೂ ಹೆಚ್ಚಿನ ಬಡ ಕುಟುಂಬಗಳಿಗೆ ಸಾಗುವಳಿ ಚೀಟಿ ವಿತರಣೆ, ಸರ್ಕಾರಿ ಜಮೀನುಗಳಲ್ಲಿ ಗುಡಿಸಲು ನಿಮಿರ್ಸಿಕೊಂಡು, ಹಲವು ವರ್ಷಗಳಿಂದ ವಾಸಿಸುತ್ತಿರುವ ಬಡವರಿಗೆ ಹಕ್ಕು ಪತ್ರ ನೀಡುವಿಕೆ ಸೇರಿ ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಆರ್​.ಲತಾ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.


    ಸಾಲುಗಟ್ಟಿ ನಿಂತ ವಾಹನಗಳು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ದಲಿತ ಸಂಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಹಿನ್ನೆಲೆ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಕೆಲ ಕಾಲ ಪ್ರತಿಭಟನಾಕಾರರು ಎಂ.ಜಿ ರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಡೆಸಿದರು. ಇದರಿಂದ ಸಂಚಾರ ಸಂರ್ಪೂಣವಾಗಿ ಸ್ಥಗಿತಗೊಂಡು ಕಿ.ಮೀ ಗಟ್ಟಲೆ ವಾಹನಗಳು ನಿಲ್ಲುವಂತಾಯಿತು. ಈ ವೇಳೆ ಸಿಪಿಐ ಪ್ರಶಾಂತ್​ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸುವಂತೆ ಪ್ರತಿಭಟನಾ ನಿರತರನ್ನು ಮನವೊಲಿಸುವ ಮೂಲಕ ರಸ್ತೆಯಿಂದ ಕಚೇರಿಯ ಆವರಣಕ್ಕೆ ಪ್ರತಿಭಟನೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts