More

    ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿ

    ಹುಕ್ಕೇರಿ: ಸರ್ಕಾರದ ಮೀಸಲಾತಿ ಗೊಂದಲದಿಂದ ಮೀಸಲಾತಿ ಸಿಗಬೇಕಾದವರಿಗೆ ಸಿಗುತ್ತಿಲ್ಲ. ಹಾಗಾಗಿ ಜನಸಂಖ್ಯೆಗೆ ಅನುಗುಣವಾಗಿ ಅರ್ಹ ವರ್ಗದವರಿಗೆ ಒಳ ಮೀಸಲಾತಿ ಕಲ್ಪಿಸಬೇಕೆಂದು ಎಸ್.ಸಿ ಮತ್ತು ಎಸ್ಟಿ ದೌರ್ಜನ್ಯ ತಡೆ ಜಿಲ್ಲಾ ಸದಸ್ಯ ಸುರೇಶ ತಳವಾರ ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ಶನಿವಾರ ಒಳಮೀಸಲಾತಿ ಹೋರಾಟದ ಸಭೆಯಲ್ಲಿ ಮಾತನಾಡಿದ ಅವರು. ನಮ್ಮ ದೇಶದ ಮೂಲ ನಿವಾಸಿಗಳು, ಅಸ್ಪೃಶ್ಯ ಜನಾಂಗದವರೆಂದು ಕರೆಸಿಕೊಳ್ಳುವ ಮಾದಿಗ, ಹರಿಜನ, ಡೋಹರ ಮತ್ತು ಸಮಗಾರ ಸಮಾಜ ಬಾಂಧವರಿಗೆ ಕಲ್ಪಿಸಬೇಕಾಗಿದ್ದ ಮೀಸಲಾತಿಯನ್ನು ಆರ್ಥಿಕವಾಗಿ ಬಲಿಷ್ಟ ಹೊಂದಿರುವ ವರ್ಗದವರಿಗೂ ಮೀಸಲಾತಿ ಘೋಷಿಸುವ ಮೂಲಕ ನಮ್ಮನ್ನು ಮತ್ತಷ್ಟು ತುಳಿತಕ್ಕೆ ಒಳ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಗೊಂದಲದ ಜತೆಗೆ ಮೀಸಲಾತಿ ಹೆಚ್ಚಿಸುವುದಾಗಿ ಹೇಳುತ್ತಿರುವುದು ಚುನಾವಣಾ ತಂತ್ರಗಾರಿಕೆಗೆ ಎಂದರು.

    ಪುರಸಭೆ ಮಾಜಿ ಅಧ್ಯಕ್ಷ ಉದಯ ಹುಕ್ಕೇರಿ, ಮಹೇಶ ಹಟ್ಟಿಹೊಳಿ, ದಿಲೀಪ ಕಾಂಬಳೆ, ಪ್ರಕಾಶ ಹೊಸಮನಿ ಮಾತನಾಡಿ, ಮಾದಿಗ ಸಮುದಾಯದವರು ಮಾತ್ರ ಒಳ ಮೀಸಲಾತಿಗೆ ಹೋರಾಟ ಮಾಡುತ್ತಿದ್ದಾರೆಂದು ವದಂತಿ ಹರಡುತ್ತಿರುವ ರಾಜಕೀಯ ನಾಯಕರ ಮಾತು ಹಾಸ್ಯಾಸ್ಪದವಾಗಿದೆ. ಮಾದಿಗ ಸಮಾಜದ ಜತೆಗೆ ಹರಿಜನ, ಡೋಹರ ಮತ್ತು ಸಮಗಾರರು ಸಹ ಹೋರಾಟಕ್ಕೆ ಬೆಂಬಲಿಸಿ ಕೈಜೋಡಿಸಿದ್ದಾರೆ. ಒಳ ಮೀಸಲಾತಿ ಹೋರಾಟ ಬೆಂಬಲಿಸಿ ಹಿಂದುಳಿದ ವರ್ಗದ ಜನರಲ್ಲಿ ಜಾಗೃತಿ ಮೂಡಿಸಲು ಡಿ.18 ರಂದು ಸ್ಥಳೀಯ ಕೋರ್ಟ್ ವೃತ್ತದಿಂದ ಅಡವಿಸಿದ್ಧೇಶ್ವರ ಮಠದವರೆಗೆ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

    ತಾಲೂಕು ಮಾದಿಗರ ಒಕ್ಕೂಟದ ತಾಲೂಕಾಧ್ಯಕ್ಷ ಶ್ರವಣಕುಮಾರ ಬೇವಿನಕಟ್ಟಿ, ಬಸವರಾಜ ಕೋಳಿ, ಸದಾಶಿವ ಬಿ.ಕೆ, ಕೆಂಪಣ್ಣಶಿರಹಟ್ಟಿ, ಕರೆಪ್ಪ ಗುಡೆನ್ನವರ, ಬಂಡೆಪ್ಪ ಮಾದರ, ಶಂಕರ ಕಟ್ಟಿ, ಮುತ್ತಪ್ಪ ಮಾದರ, ವಿಠ್ಠಲ ಮಾದರ, ಬಾವುಸಾಹೇಬ ಪಾಂಡ್ರೆ, ಬಸವರಾಜ ದೊಡಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts