More

    ಜನರ ಪ್ರೀತಿ ಮರೆಯಲು ಸಾಧ್ಯವಿಲ್ಲ – ಎಡಿಜಿಪಿ ಅಲೋಕಕುಮಾರ

    ಯರಗಟ್ಟಿ: ಐಪಿಎಸ್​ ಮುಗಿಸಿದ ನಂತರ ಮೊದಲು ವೃತ್ತಿ ಅನುಭವ ನೀಡಿದ ಮತ್ತು ಅತ್ಯಂತ ಸಹಾಯ, ಸಹಕಾರ, ಪ್ರೀತಿ ತೋರಿದ ಬೈಲಹೊಂಗಲ, ಯರಗಟ್ಟಿ ಜನ ಹಾಗೂ ಇಲಾಖೆ ಸಿಬ್ಬಂದಿಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ ಅಲೋಕ ಕುಮಾರ ಹೇಳಿದರು.

    ಪಟ್ಟಣದ ಪೊಲೀಸ್​ ಉಪಠಾಣೆಗೆ ಇತ್ತೀಚೆಗೆ ಭೇಟಿ ನೀಡಿ, ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಕರ್ತವ್ಯದ ಸಂದರ್ಭದಲ್ಲಿ ಯರಗಟ್ಟಿ ಭಾಗದಲ್ಲಿ ನಡೆದ ಕೊಲೆ, ದರೋಡೆ ಪ್ರಕರಣಗಳ ತನಿಖೆ ನನ್ನ ವೃತ್ತಿಯುದ್ದಕ್ಕೂ ಬಹಳಷ್ಟು ಸಹಕಾರಿಯಾಗಿದೆ ಎಂದರು.

    ಯರಗಟ್ಟಿ ಉಪಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿವೆ. ಸಿಸಿ ಕ್ಯಾಮರಾ ಕಾರ್ಯನಿರ್ವಸುತ್ತಿಲ್ಲ. ಟ್ರಾಫಿಕ್​ ಸಮಸ್ಯೆ ಹೆಚ್ಚಾಗುತ್ತಿದೆ ಮತ್ತಿತ್ತರ ಸಮಸ್ಯೆಗಳನ್ನು ಜನರು ಎಡಿಜಿಪಿ ಅವರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಅಲೋಕ ಕುಮಾರ, ಈ ಭಾಗದಲ್ಲಿ ಮೊದಲಿನಿಂದಲೂ ಕೆಂ ಪ್ರಕರಣಗಳು ಹೆಚ್ಚು. ಯರಗಟ್ಟಿ ಸುತ್ತ ಗ್ರಾಮಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರತ್ಯೇಕ ಪೊಲೀಸ್​ ಠಾಣೆ ಮಂಜೂರಾಗಿಲ್ಲ. ಈ ಕುರಿತು ಚರ್ಚಿಸಲಾಗುತ್ತಿದೆ ಎಂದರು.

    ಉತ್ತರ ವಲಯ ಐಜಿಪಿ ಸತೀಶ ಕುಮಾರ, ಎಸ್ಪಿ ಸಂಜೀವ್​ ಪಾಟೀಲ, ಬಾಗಲಕೋಟೆ ಎಸ್ಪಿ ಜಯಪ್ರಕಾಶ ಪಾಟೀಲ, ಹೆಚ್ಚುವರಿ ವರಿಷ್ಠಾ-ಧಿಕಾರಿ ಎಂ.ಎ.ನಂದಗಾವಿ, ಡಿವೈಎಸ್​ಪಿ ರಾಮನಗೌಡ ಹಟ್ಟಿ, ಸಿಪಿಐ ಮೌನೇಶ ಮಾಲಿಪಾಟೀಲ, ಮಂಜುನಾಥ ನಡುವಿನಮನಿ ಮತ್ತಿತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts