More

    ಜನರ ದುಡ್ಡು ಬ್ಯಾಂಕ್‌ಗೆ ಪಾವತಿಸದೆ ಮೋಸ : ಏಜೆಂಟ್ ವಿರುದ್ಧ ಲಾನುಭವಿಗಳಿಂದ ಠಾಣೆಯಲ್ಲಿ ದೂರು


    ಕೊಡಗು : ಬ್ಯಾಂಕ್‌ವೊಂದರಲ್ಲಿ ನಗರದ ಕೆಲವು ನಿವಾಸಿಗಳಿಗೆ ಸಾಲ ಕೊಡಿಸಿದ್ದ ಏಜೆಂಟ್‌ವೊಬ್ಬರು, ನಾವು ನೀಡಿದ ಹಣವನ್ನು ಬ್ಯಾಂಕ್‌ಗೆ ಪಾವತಿಸದೆ ಮೋಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ನಗರದ ನಿವಾಸಿಗಳಾದ ವಿಘ್ನೇಶ್, ಸುಕನ್ಯಾ ತಿಳಿಸಿದರು.


    ಮಡಿಕೇರಿ ನಗರದ ಮಖಾನ್ ಗಲ್ಲಿಯ ಮಹಿಳೆಯೊಬ್ಬರು, ಕಷ್ಟದಲ್ಲಿದ್ದ ಮಹಿಳೆಯರು, ಪುರುಷರಿಗೆ ಬ್ಯಾಂಕ್‌ನಲ್ಲಿ ಸಾಲ ಕೊಡಿಸುವುದಾಗಿ ದಾಖಲೆ ಪಡೆದುಕೊಂಡಿದ್ದರು. ಒಂದು ಗುಂಪಿನಲ್ಲಿ 10 ಜನರಂತೆ 27ಕ್ಕೂ ಅಕ ಗುಂಪುಗಳನ್ನು ನಿರ್ಮಿಸಿರುವ ಏಜೆಂಟ್, ಬ್ಯಾಂಕ್ ಮೂಲಕ ಸಾಲ ಕೊಡಿಸಿದರು.
    ಸಾಲ ಪಡೆದ ನಾವುಗಳು ತಿಂಗಳಿಗೆ 2000 ರೂ.ನಂತೆ ಏಜೆಂಟ್‌ಗೆ ಸಾಲ ಪಾವತಿ ಮಾಡಿದ್ದೇವೆ. ಆದರೆ, ಕೆಲವು ದಿನಗಳ ಹಿಂದೆ ನಮಗೆ ಬ್ಯಾಂಕ್‌ನಿಂದ ಸಾಲ ಪಾವತಿಸುವಂತೆ ನೋಟೀಸ್ ಬಂದಿದೆ. ಅನುಮಾನಗೊಂಡ ಗುಂಪಿನ ಸದಸ್ಯರು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಯಾವುದೇ ಕಂತುಗಳು ಪಾವತಿಯಾಗದಿರುವುದು ಪತ್ತೆಯಾಗಿದೆ.


    ಏಜೆಂಟರನ್ನು ದೂರವಾಣಿ ಕರೆ ಮೂಲಕ ವಿಚಾರಿಸಿದರೆ, ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ನ್ಯಾಯ ದೊರಕಿಸಿಕೊಡುವಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.


    ಇಬ್ಬರು ಮಹಿಳೆಯರಿಂದ ಬ್ಯಾಂಕ್ ಚೆಕ್ ಮತ್ತು ದಾಖಲೆಗಳನ್ನು ಪಡೆದು ಒಟ್ಟು 50,000 ಸಾವಿರ ರೂ. ಬ್ಯಾಂಕ್‌ನಿಂದ ಲೋನ್ ಪಡೆದು ಆ ಏಜೆಂಟ್ ಬಳಸಿಕೊಂಡಿದ್ದಾರೆ. ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಬ್ಯಾಂಕ್ ವ್ಯವಹಾರಗಳಲ್ಲಿ ಮಧ್ಯವರ್ತಿಗಳ ಸಹಾಯ ಪಡೆದು ಮೋಸ ಹೋಗುವ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.
    ನಿವಾಸಿಗಳಾದ ನಾಜ್ಹಿನಿ, ಭಗೀರಥಿ, ಹೇಮಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts