More

    ಜನರಿಗೆ ಸಂವಿಧಾನದ ತಿಳಿವಳಿಕೆ ಅಗತ್ಯ

    ಧಾರವಾಡ: ಭಾರತೀಯ ಸಂವಿಧಾನ ಪ್ರಜಾಪ್ರಭುತ್ವದ ಹೃದಯದಂತೆ ಇದ್ದು, ಸಂವಿಧಾನದ ಆಂತರ್ಯ ರಕ್ಷಿಸಲು ನ್ಯಾಯಾಂಗ ಕಟಿಬದ್ಧವಾಗಿದೆ ಎಂದು ಹೈಕೋರ್ಟ್ ನ್ಯಾಯಾಧೀಶ ಕೃಷ್ಣಾ ದೀಕ್ಷಿತ ಹೇಳಿದರು.

    ಕರ್ನಾಟಕ ವಿಶ್ವ ವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ವತಿಯಿಂದ ಕವಿವಿ ಮಾನಸೋಲ್ಲಾಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಸಮಾರೋಪದಲ್ಲಿ ಅವರು ಮಾತನಾಡಿದರು. ದೇಶದ ಸುಪ್ರೀಂ ಕೋರ್ಟ್ ಹಾಗೂ

    ಹೈಕೋರ್ಟ್​ಗಳು ಸಂವಿಧಾನಾತ್ಮಕವಾಗಿ ಅನೇಕ ತೀರ್ಪಗಳನ್ನು ನೀಡಿ ಸಾಂವಿಧಾನಿಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಿದೆ. ಪ್ರಸ್ತುತ ಜನ ಸಮುದಾಯಕ್ಕೆ ಸಂವಿಧಾನ ಕುರಿತು ತಿಳಿವಳಿಕೆ ಮಟ್ಟ ಹೆಚ್ಚಿಸಬೇಕಿದೆ. ಸಂವಿಧಾನದಲ್ಲಿ ಏನಿದೆ..?, ಅದರ ರಚನೆಯಲ್ಲಿ ಡಾ.ಅಂಬೇಡ್ಕರ್ ಪಾತ್ರ? ಸಂವಿಧಾನದ ಮೂಲಕ ಅಂಬೇಡ್ಕರ್ ಜನರಿಗೆ ಏನು ಕೊಟ್ಟಿದ್ದಾರೆ? ಎಂಬುದರ ಕುರಿತು ತಿಳಿಸುವ ಅಗತ್ಯವಿದೆ ಎಂದು ಹೇಳಿದರು.

    ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ ಬಾಬು ಮಾತನಾಡಿ, ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಲು ಸಂವಿಧಾನ ಪೀಠಿಕೆಯ ಅನುಗುಣವಾಗಿ ಸರ್ಕಾರಗಳು ನಡೆದುಕೊಳ್ಳಬೇಕು. ಪ್ರಸ್ತುತ ರಾಜಕೀಯ ಪ್ರೇರಿತ ತಿದ್ದುಪಡಿ ಮಾಡುತ್ತಿರುವುದರಿಂದ ಜನರಲ್ಲಿ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳ ಮೇಲೆ ಅನುಮಾನ ಮೂಡುವ ಸಾಧ್ಯತೆ ಇದೆ. ನ್ಯಾಯಾಂಗ ನೀಡಿದ ಆದೇಶಗಳು ಸೇರಿ ಕಾರ್ಯಾಂಗ ಮತ್ತು ಶಾಸಕಾಂಗಗಳ ಮೂಲಕ ಪ್ರಜಾಸತ್ತಾತ್ಮಕ ಲೋಪಗಳಾಗುತ್ತಿರುವುದು ದುರದೃಷ್ಟಕರ. ರಾಜಕಾರಣಿಗಳನ್ನು ಬಹಳ ಎಚ್ಚರದಿಂದ ಆಯ್ಕೆ ಮಾಡಬೇಕು ಎಂದರು.

    ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಸಿ.ಬಿ. ಹೊನ್ನು ಸಿದ್ದಾರ್ಥ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎನ್.ಎಂ. ಸಾಲಿ, ಡಾ. ಎಂ. ಯರಿಸ್ವಾಮಿ, ಡಾ.ಬಿ.ಎಂ.ರತ್ನಾಕರ, ಡಾ. ಹರೀಶ ರಾಮಸ್ವಾಮಿ, ಡಾ. ಎಂ.ಜಿ. ಖಾನ್, ಡಾ. ಸಿ. ರಾಜಶೇಖರ, ಪ್ರೊ. ವಿಶ್ವನಾಥ, ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts