More

    ಜನರಿಗೆ ಕಾಂಗ್ರೆಸ್ ಅಗತ್ಯ ಮನವರಿಕೆ ಮಾಡಿಕೊಡಿ

    ಬ್ಯಾಕೋಡು: ಗ್ರಾಮೀಣ ಭಾಗದ ಜನರಿಗೆ ಕಾಂಗ್ರೆಸ್ ಅಗತ್ಯದ ಬಗ್ಗೆ ಅರಿವು ಮೂಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಲಹೆ ನೀಡಿದರು.
    ಶುಕ್ರವಾರ ಶರಾವತಿ ಹಿನ್ನೀರಿನ ತುಮರಿಯಲ್ಲಿ ಕರೂರು ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮೂಲಕ ಬಿಜೆಪಿ ಸರ್ಕಾರದ ಜನ ವಿರೋ„ ನೀತಿಯ ವಿರುದ್ಧ ಧ್ವನಿ ಎತ್ತಬೇಕು. ಜನರಿಗೆ ಭೂಮಿ ಹಕ್ಕು ನೀಡಿದ ಕಾಂಗ್ರೆಸ್ ಮೂಳಕ ಪ್ರಸಕ್ತ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು. ಕಾಂಗ್ರೆಸ್‍ನಿಂದ ಪಕ್ಷದಿಂದ ಒಮ್ಮತದಂತೆ ಗೋಪಾಲಕೃಷ್ಣ ಬೇಳೂರು ಅವರಿಗೆ ಪಕ್ಷದ ಟಿಕೆಟ್ ನೀಡಿದ್ದು ಜನರಿಗೆ ನ್ಯಾಯ ಒದಗಿಸಲು ಕಾಂಗ್ರೆಸ್ ಗೆಲುವಿಗೆ ಪಣ ತೊಡಬೇಕು ಎಂದರು.
    ಗೋಪಾಲಕೃಷ್ಣ ಬೇಳೂರು ಮಾತನಾಡಿ, ಶರಾವತಿ ಹಿನ್ನೀರಿನ ರೈತರನ್ನು ಅರಣ್ಯ, ಜೀವ ವೈವಿಧ್ಯ ಹೆಸರಿನಲ್ಲಿ ಕಿರುಕುಳ ನೀಡಿ ಒಕ್ಕಲೆಬ್ಬಿಸುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಆಯ್ಕೆಯಾದ ಸರ್ಕಾರಗಳ ಇಂತಹ ಜನ ವಿರೋ„ ನೀತಿ ಖಂಡನೀಯ. ಈ ಭಾಗದಲ್ಲಿ 2 ವರ್ಷದ ಹಿಂದೆ ನೆಡೆದ ವೃದ್ಧ ದಂಪತಿ ಹತ್ಯೆ ನೆಡೆದಿದ್ದರೂ ಈವರೆಗೂ ಆರೋಪಿಗಳ ಬಂಧನವಾಗಿಲ್ಲ. ಇದರಿಂದ ಈ ಭಾಗದ ಜನತೆ ಆತಂಕದಿಂದ ಜೀವನ ನಡೆಸುವಂತಾಗಿದೆ. ಕಳೆದ ಹಲವು ತಿಂಗಳಿಂದ ಈ ಭಾಗದಲ್ಲಿ ಎಲೆಚುಕ್ಕೆ ರೋಗದ ತೀವ್ರತೆ ಹೆಚ್ಚಾಗಿದ್ದು ಸಾವಿರಾರು ಎಕರೆ ನಾಶವಾಗಿದ್ದು ಯಾವುದೇ ಪರಿಹಾರ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉದ್ಯೋಗ ಸೃಷ್ಟಿ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಭೂಮಿ ಹಕ್ಕು ನೀಡಿದ ಕಾಂಗ್ರೆಸ್ ಪಕ್ಷವನ್ನು ಜನರು ಅ„ಕಾರಕ್ಕೆ ತರಲು ಶ್ರಮಿಸಬೇಕು ಎಂದರು.
    ಇದೇ ವೇಳೆ ನೆರೆದಿದ್ದ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಯಿತು. ಯುವ ಕಾಂಗ್ರೆಸ್ ಪದಾ„ಕಾರಿಗಳೊಂದಿಗೆ ಗೋಪಾಲಕೃಷ್ಣ ಬೇಳೂರು ಖುದ್ದು ಚರ್ಚೆ ನಡೆಸಿದರು. ತುಮರಿ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆ ನೆರವೇರಿಸಿದರು.
    ಕರೂರು ಹೋಬಳಿಯ ಚನ್ನಗೊಂಡ, ಎಸ್.ಎಸ್.ಭೋಗ್, ಕುದರೂರು, ತುಮರಿ ಗ್ರಾಮ ಪಂಚಾಯಿತಿ ಘಟಕದ ಪ್ರಮುಖರು, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಘಟಕದ ಪ್ರಮುಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts