More

    ಜನಪ್ರತಿನಿಧಿಗಳು ಸೌಲಭ್ಯ ತಲುಪಿಸುವ ರಾಯಭಾರಿಗಳು

    ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
    ನಾವು ಸರ್ಕಾರದಿಂದ ಜನರಿಗೆ ನೇರವಾಗಿ ಯೋಜನೆ ಹಾಗೂ ಸೌಲಭ್ಯಗಳನ್ನು ತಲುಪಿಸುವ ರಾಯಭಾರಿಗಳಾಗಿ ಕೆಲಸ ಮಾಡಲು ನಿಮ್ಮಿಂದ ನೇಮಕವಾಗಿದ್ದೇವೆ. ಅಭಿವೃದ್ದಿಯ ರಾಯಭಾರಿಗಳಾಗಿ ನಿಮ್ಮ ಸೇವೆ ಮಾಡುವ ಸೇವಕರು ನಾವು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
    ಹೋಬಳಿಯ ಗಿಡ್ಡಪ್ಪನಹಳ್ಳಿ ಗ್ರಾಪಂನ ವಿವಿಧ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
    ಬೆಂಡಿಗಾನಹಳ್ಳಿ ಕುಟುಂಬ ಮೈಸೂರು ಸಂಸ್ಥಾನದ ಕಾಲದಿಂದಲೂ ಸಾರ್ವಜನಿಕ ರಂಗದಲ್ಲಿ ಸೇವೆ ಸಲ್ಲಿಸಲು ಬಂದವವರೇ ವಿನಾ ರಾಜಕೀಯಕ್ಕಾಗಿ ಅಲ್ಲ. 4 ದಶಕಗಳ ಕಾಲ ರಾಜಕೀಯಲ್ಲಿದ್ದ ಬಚ್ಚೇಗೌಡರು ರಾಜ್ಯ ಸಚಿವರಾಗಿದ್ದವರು, ಎಂದಿಗೂ ಜಾತಿ ಎಂಬ ರೋಗ ಅಂಟಿಸಿದವರಲ್ಲ. ಯಾವುದೇ ಆಡಂಬರ ಅಬ್ಬರ ಮಾಡಿ ಚುನಾವಣೆ ಗೆದ್ದವರಲ್ಲ, ಮತದಾರರನ್ನು ಕೀಳಾಗಿ ಕಂಡವರಲ್ಲ. ಅಧಿಕಾರಿಗಳನ್ನು ಸಹ ಮುತುವರ್ಜಿಯಿಂದ ಸಂಬಾಳಿಸಿದವರು. ಇಂತಹ ಕುಟುಂಬದಿಂದ ಬಂದ ನಾನು ಸಹ ಅವರ ದಾರಿಯಲ್ಲಿಯೇ ಮುಂದುವರೆಯುತ್ತೇನೆ ಎಂದರು.
    ಗಿಡ್ಡಪ್ಪನಹಳ್ಳಿ ಗ್ರಾಪಂನ ನಲ್ಲಾಗನಹಳ್ಳಿಯಲ್ಲಿ ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಹೈಮಾಸ್ಟ್ ದೀಪ ಅಳವಡಿಕೆ ಕಾಮಗಾರಿ, ಅಂಕೋನಹಳ್ಳಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಹೈಮಾಸ್ಟ್ ದೀಪ, ಅರಸನಹಳ್ಳಿಯಲ್ಲಿ ಸಿಸಿ ರಸ್ತೆ, 10 ಲಕ್ಷ, ಅತ್ತಿಬೆಲೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಎತ್ತಿನಹೊಳೆ ಯೋಜನೆಯ ಅಡಿಯಲ್ಲಿ ಎಸ್‌ಸಿಪಿ 5 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ 20 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ, ಯನಗುಂಟೆಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಎಸ್‌ಸಿಪಿ ಯೋಜನೆಯಡಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ, ವಳಗೆರೆಪುರದಲ್ಲಿ ಜಲಸಂಪನ್ಮೂಲ ಇಲಾಖೆ ಎತ್ತಿನಹೊಳೆ ಯೋಜನೆಯ ಅನುದಾನದಲ್ಲಿ 8.20 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತದೆ ಎಂದು ವಿವರಿಸಿದರು.
    ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ನಾವು ಹೊಸಕೋಟೆಯ ಅಭಿವೃದ್ದಿಯ ಬಗ್ಗೆ ಕಾಳಜಿ ಮಾಡುತ್ತೇವೆ. ಸಾಮಾಜಿಕ ಕಾಳಜಿ ಹಾಗೂ ಜನಪರ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತೇವೆ. ಯಾವುದೇ ಜಾತಿ, ಧರ್ಮ ಸಂಘರ್ಷ ರಾಜಕೀಯ ಮಾಡಲು ನಮಗೆ ಸಮಯವಿಲ್ಲ. ರಾಜಕೀಯವನ್ನು ಸೇವೆಯಾಗಿ ಸ್ವೀಕಾರ ಮಾಡಬೇಕೇ ಹೊರತು ಓಲೈಕೆಗಾಗಿ ಅಲ್ಲ. ಜಾತಿ ಒಡೆಯುವ ಕೆಲಸ ಹೊಸಕೋಟೆಯಲ್ಲಿ ನಿಲ್ಲಬೇಕು ಎಂದು ಹೇಳಿದರು.
    ಎಸ್‌ಎಪ್‌ಸಿಎಸ್ ಮಾಜಿ ನಿರ್ದೇಶಕ ಸೋಮಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಕೆಂಪೇಗೌಡ, ಗ್ರಾಪಂ ಸದಸ್ಯ ನಾಗೇಶ್, ಬಸವರಾಜ್, ಮುಖಂಡರಾದ ಪ್ರಕಾಶ್, ಶಿವಣ್ಣ, ನಂಜೇಗೌಡ, ಅಣ್ಣೆಯಪ್ಪ, ರವಿಚಂದ್ರ, ಪ್ರಕಾಶ್,ನಾರಾಯಣಗೌಡ, ಸೊಣ್ಣಪ್ಪ, ನಾಗರಾಜ್, ಅನುರಾಜ್, ಮುನಿಶಾಮಿಗೌಡ, ಭರತ್,ವೀರೇಂದ್ರಗೌಡ, ಚಿಕ್ಕಹರಳಗೆರೆ ಮುನೇಗೌಡ, ಸಾದಪ್ಪನಹಳ್ಳಿ ಜಗದೀಶ್, ನವೀನ್, ಸುರೇಂದ್ರಕುಮಾರ್, ಈರಣ್ಣ, ರವಿ, ಚಿಕ್ಕಹರಳಗೆರೆ ಜಗದೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts