More

    ಜನಪರ ಕಾರ್ಯಗಳ ಮೂಲಕ ಎತ್ತರಕ್ಕೆ ಬೆಳೆಯಿರಿ

    ಶಿಕಾರಿಪುರ: ವೀರಶೈವ ಸಮಾಜ ಸಮಾಜಮುಖಿ ಸಮಾಜ. ಮಠ ಮಂದಿರಗಳು ಅನ್ನ, ಅಕ್ಷರ ದಾಸೋಹ ಮಾಡುತ್ತಿವೆ. ಇಂದು ರಾಜಕೀಯದ ಅಂಗಳದಲ್ಲಿರುವ ನೀವು ಕೂಡ ಜನಪರ ಕಾರ್ಯಗಳ ಮೂಲಕ ಎತ್ತರಕ್ಕೆ ಬೆಳೆಯಬೇಕು ಎಂದು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎನ್.ವಿ.ಈರೇಶ್ ಸಲಹೆ ನೀಡಿದರು.

    ಪಟ್ಟಣದಲ್ಲಿ ಭಾನá-ವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ನಿಗಮಗಳಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದವರನ್ನು ಸನ್ಮಾನಿಸಿ ಮಾತನಾಡಿ, ನಮ್ಮ ಪ್ರಾಮಾಣಿಕ ಸೇವೆಯನ್ನು ಈ ಸಮಾಜ ಬಯಸುತ್ತದೆ. ನಿಮ್ಮ ಸಾಮಾಜಿಕ ಕಳಕಳಿ, ಜನಪರ ಚಿಂತನೆಗಳನ್ನು ಗುರುತಿಸಿ ನಿಮಗೆ ಅವಕಾಶ ನೀಡಲಾಗಿದೆ. ಇದು ನಮಗೆ ಮತ್ತು ವೀರಶೈವ ಸಮಾಜಕ್ಕೆ ಹೆಮ್ಮೆಯ ವಿಚಾರ ಎಂದರು.

    ಸಮಾಜದಿಂದ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಬರಗಾಲ, ಪ್ರವಾಹ ಮತ್ತು ಕರೊನಾ ಸಂಕಷ್ಟದ ಸಮಯದಲ್ಲಿ ಸಮಾಜದ ಬಂಧುಗಳಿಗೆ ಸಹಾಯಹಸ್ತ ನೀಡಲಾಗಿದೆ. ಪರಿಸರ, ಸ್ವಚ್ಛತೆ, ಶರಾವತಿ ಉಳಿಸಿ, ಪ್ಲಾಸ್ಟಿಕ್ ವಿರೋಧಿ ಆಂದೋಲನ, ಧಾರ್ವಿುಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು. ಪ್ರತಿ ಗ್ರಾಮಗಳಲ್ಲಿ ಆಶಕ್ತರಿಗೆ ಸಹಾಯ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದರು.

    ಭದ್ರಾ ಕಾಡಾ ನಿರ್ದೇಶಕ ರುದ್ರಮೂರ್ತಿ, ಕೆಡಿಪಿ ಸದಸ್ಯರಾದ ಚನ್ನಪ್ಪ ಮಾರವಳ್ಳಿ, ಜ್ಯೋತಿ ರಮೇಶ್ ಬಸವನಂದಿಹಳ್ಳಿ, ಮಲ್ಲೇಶಪ್ಪ ಅಂಬಾರಗೊಪ್ಪ ಮತ್ತು ಬಗರ್​ಹುಕುಂ ಸಾಗುವಳಿ ಸಮಿತಿ ಸದಸ್ಯೆ ರೇಖಾ ರಾಜಶೇಖರ್ ಸಾಲೂರು ಹಾಗೂ ಆಶ್ರಯ ಸಮಿತಿ ಸದಸ್ಯ ಗಿರೀಶ್ ಧಾರವಾಡದ ಅವರನ್ನು ಸನ್ಮಾನಿಸಲಾಯಿತು.

    ಜಿಲ್ಲಾ ಕಾರ್ಯದರ್ಶಿ ಸಿ.ಕೊಟ್ರೇಶ್ವರಪ್ಪ, ಉಪಾಧ್ಯಕ್ಷ ರಮೇಶ್, ನಗರ ಘಟಕದ ಅಧ್ಯಕ್ಷ ಗಿರೀಶ್ ಧಾರವಾಡ, ಯುವ ಘಟಕದ ಅಧ್ಯಕ್ಷ ವೀರಣ್ಣಗೌಡ, ಜಿಲ್ಲಾ ಸಮಿತಿ ಸದಸ್ಯರಾದ ಕುಮಾರಸ್ವಾಮಿ ಹಿರೇಮಠ ಮತ್ತು ಶಶಿಧರ ಚುರ್ಚಿಗುಂಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts