More

    ಜಗದ್ಗುರುಗಳ ಆಶೀರ್ವಾದ ಪಡೆದ ಸಿದ್ದರಾಮಯ್ಯ

    ಶೃಂಗೇರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಪಟ್ಟಣಕ್ಕೆ ಭೇಟಿ ನೀಡಿದರು. ಶ್ರೀ ಶಾರದಾಂಬೆ ದೇಗುಲವನ್ನು ದರ್ಶಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಬಳಿಕ ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಅತಿವೃಷ್ಟಿಯಿಂದ ಕುಸಿತಗೊಳಗಾದ ನೇರಳಕೂಡಿಗೆ ರಸ್ತೆ ಕುಸಿತದ ಸ್ಥಳ ಪರಿಶೀಲಿಸಿದರು.

    ಬಾಳೆಹೊನ್ನೂರಿನಿಂದ ಶೃಂಗೇರಿಗೆ ಆಗಮಿಸುವಾಗ ಮೆಣಸೆ ಸಮೀಪ ಬಿಜೆಪಿ ಹಾಗೂ ಹಿಂದುಪರ ಸಂಘಟನೆ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ವೀರ ಸಾವರ್ಕರ್ ಫೋಟೋ ಹಿಡಿದು ಸಿದ್ದರಾಮಯ್ಯ ವಿರುದ್ಧ ಫೋಷಣೆ ಕೂಗಿದರು. ಸಿದ್ದರಾಮಯ್ಯ ಗೋ ಬ್ಯಾಕ್, ಸಾರ್ವಕರ್ ಅವರಿಗೆ ಜಯವಾಗಲಿ. ಹಿಂದು ವಿರೋಧಿ ನಾಯಕನಿಗೆ ಧಿಕ್ಕಾರ ಎಂದು ಕೂಗಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾದಾಗ ಬಿಗುವಿನ ವಾತಾವರಣ ಉಂಟಾಯಿತು.ಪೋಲಿಸರು ಎರಡು ಬಣಗಳ ಪ್ರತಿಭಟನೆ ಹತ್ತಿಕ್ಕಲು ಹರಸಾಹಸಪಟ್ಟರು. ಸಿದ್ದರಾಮಯ್ಯ ವಾಪಸ್ ಹೋಗುವ ಸಂದರ್ಭ ಮತ್ತೊಮ್ಮೆ ಬಿಗುವಿನ ವಾತಾವರಣ ಉಂಟಾಗದಿರಲೆಂದು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪಪಂ ಅಧ್ಯಕ್ಷ ಹರೀಶ್ ವಿ. ಶೆಟ್ಟಿ, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುನೀಲ್ ಸಂಪೇಕೊಳಲು, ಕೋಶಾಧ್ಯಕ್ಷ ಸಂದೇಶ್, ಹಿಂದು ಸಂಘಟನೆಯ ಪದಾಧಿಕಾರಿ ಆದರ್ಶ, ರಜತ್ ಅವರನ್ನು ಬಂಧಿಸಿ ಹರಿಹರಪುರ ಠಾಣೆಗೆ ಕೊಂಡೊಯ್ದು ಕಾರ್ಯಕ್ರಮ ಮುಗಿದ ಬಳಿಕ ಬಿಡುಗಡೆಗೊಳಿಸಿದರು.

    ತಾಲೂಕಿನ ಬೆಳೆ ಹಾನಿ ಕುರಿತು ವೀಕ್ಷಣೆ ನಡೆಸಿದ ಬಳಿಕ ಬೆಳೆ ನಷ್ಟದ ಕುರಿತು ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಲ್ಲಿ ಸಿದ್ದ್ಧಾಮಯ್ಯ ಮಾಹಿತಿ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts