More

    ಜಗತ್ತಿನ ಬೆಳವಣಿಗೆಗೆ ಭಾರತದ್ದು ಸಿಂಹಪಾಲು


    ಯಾದಗಿರಿ: ಪ್ರಾಚೀನ ಕಾಲದಲ್ಲಿ ನಮ್ಮ ದೇಶವನ್ನು ಕೊಳ್ಳೆ ಹೊಡೆಯಲು ಬಂದ ಅನೇಕ ರಾಷ್ಟ್ರಗಳು ಇಲ್ಲಿನ ಸಿರಿಸಂಪತ್ತಿಗೆ ಮಾರು ಹೋಗದೆ, ಜ್ಞಾನ ಭಂಡಾರವನ್ನು ತೆಗೆದುಕೊಂಡು ಹೋಗಿ ತಮ್ಮ ದೇಶಗಳನ್ನು ಉದ್ಧರಿಸಿಕೊಂಡಿವೆ ಎಂದು ಗದಗ,ವಿಜಯಪುರ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರೂ, ಖ್ಯಾತ ವಾಗ್ಮಿಗಳಾದ ಶ್ರೀ ನಿರ್ಭಯಾನಂದ ಸರಸ್ವತಿ ನುಡಿದರು.

    ಶುಕ್ರವಾರ ಸಂಜೆ ನಗರದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮತ್ತು ವಿಕಾಸ ಆಕಾಡೆಮಿ ಕಲಬುರಗಿ ಸಹಯೋಗದಲ್ಲಿ ದಿ.ನೀಲಕಂಠರಾಯ ಯಲ್ಹೇರಿ ಅವರ ಸ್ಮತಿಯಲ್ಲಿ ಆಯೋಜಸಿರುವ 6 ದಿನಗಳ ಸ್ಥಾಯಿ ವೈಚಾರಿಕ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ವಿಶೇಷ ಉಪನ್ಯಾಸ ನೀಡಿ, ಬ್ರಿಟೀಷರು, ಭಾರತದಲ್ಲಿನ ಸಂಸ್ಕೃತ ಭಾಷೆಯಲ್ಲಿ ಉನ್ನತವಾದ ವಜ್ರಗಳಿವೆ ಎಂದು ಅರಿತಿದ್ದರು. ಜಗತ್ತಿನ ಎಷ್ಟೋ ದೇಶಗಳು ಗುಡ್ಡಗಾಡಿನಲ್ಲಿ ಗಡ್ಡೆ,ಗೆಣಸು ತಿನ್ನುವ ವೇಳೆಯಲ್ಲಿ ಭಾರತದಲ್ಲಿ ಗುರುಕುಲ ಪದ್ಧತಿ ಆರಂಭಗೊಂಡಿತ್ತು. ಸಂಸ್ಕೃತಿ, ಸಂಸ್ಕಾರ, ವೇದಗಳ ಕಾಲ ಉದಯಿಸಿತ್ತು. ಅಲ್ಲದೆ, ವಿದೇಶಗಳ ಉನ್ನತಿಗೆ ಭಾರತದ ಜ್ಞಾನ ಪೂರಕವಾಗಿತ್ತು ಎಂದರು.

    ನನ್ನ ಭಾರತ ಹೀಗೆ ಇರಬೇಕು ಎಂದು ಸ್ವಾಮಿ ವಿವೇಕಾನಂದರು ಕನಸ್ಸು ಕಂಡಿದ್ದರು. ಭಗವದ್ಗೀತೆಯ 18ನೇ ಅಧ್ಯಯದ 5ನೇ ಶ್ಲೋಕದಲ್ಲಿ ಯಜ್ಞ, ತಪಸ್ಸು ಮತ್ತು ದಾನದ ಬಗ್ಗೆ ಅತ್ಯಂತ ವಿವರವಾಗಿ,ವಿಶ್ಲೇಷಿಸಲಾಗಿದೆ. ಧಾಮರ್ಿಕವಾಗಿ ಒಬ್ಬ ಗ್ರಹಸ್ಥ ಹೇಗೆ ಬದುಕಬೇಕು, ದಾನ ಮತ್ತು ತಪಸ್ಸಿನ ಮಹತ್ವ ಏನು ಎಂಬುದನ್ನು ತಿಳಿಸಿಕೊಡುವುದು ಈ ಉಪನ್ಯಾಸದ ಉದ್ದೇಶವಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts