ಶರಣ ಸಾಹಿತ್ಯ ಜಗತ್ತಿನ ಸಂವಿಧಾನಗಳಿಗೆ ಸಮ: ಡಾ.ಯು.ಶ್ರೀನಿವಾಸ ಮೂರ್ತಿ ಅಭಿಮತ

blank

ಬಳ್ಳಾರಿ: ಆಧುನಿಕ ನಾಗರಿಕ ಜಗತ್ತಿನ ಸಂವಿಧಾನಗಳಿಗೆ ಸರಿಸಮ ಮತ್ತು ಒಂದು ವೈಜ್ಞಾನಿಕ ಧರ್ಮ ನಿರೂಪಿಸುವ ಸಾಮರ್ಥ್ಯ ಶರಣ ಸಾಹಿತ್ಯಕ್ಕಿದೆ. ರಷ್ಯಾ, ಫ್ರಾನ್ಸ್ ಮತ್ತು ಇತರ ದೇಶಗಳ ಕ್ರಾಂತಿಗಳ ಬಗ್ಗೆ ಮಾತನಾಡುವ ನಮ್ಮವರು, ಶರಣ ಕ್ರಾಂತಿಯ ನಿಜವಾದ ಶಕ್ತಿ, ಸಾಮರ್ಥ್ಯದ ಬಗ್ಗೆ ಮಾತನಾಡಲ್ಲ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಯು. ಶ್ರೀನಿವಾಸ ಮೂರ್ತಿ ಬೇಸರ ವ್ಯಕ್ತಪಡಿಸಿದರು.

ನಗರದ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ 288ನೇ ಮಹಾಮನೆ ಲಿಂ.ಐ.ಬಸವರಾಜ ಲಲಿತಮ್ಮ ದತ್ತಿ ಕಾರ್ಯಕ್ರಮದಲ್ಲಿ ‘ಶರಣ ಸಾಹಿತ್ಯ-ಸಹಬಾಳ್ವೆಯ ನೆಲೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಬದುಕಿನ ಬುನಾದಿ ಸಹಕಾರ, ಸಹಬಾಳ್ವೆಯಾಗಿದೆ. ಸಹಾಯ ಮತ್ತು ಸಹಕಾರ ಪಡೆದುಕೊಂಡು ಆ ಜನಗಳನ್ನೇ ದೂರವಿಟ್ಟಿದ್ದ ಸಮಾಜದಲ್ಲಿ ಶರಣರು, ಮನೆಯ ಮಗನಂತೆ ಕಾಣುವ ಮೂಲಕ ಕಾಯಕ ಜೀವಿಗಳ, ಶೋಷಣೆ ರಹಿತ ಸುಂದರ ಸಮಾಜ ನಿರ್ಮಿಸಿದ್ದರು ಎಂದರು.

ವಿಮ್ಸ್‌ನ ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸುಮಾ ಗುಡಿ ಮಾತನಾಡಿ, ಉನ್ನತ ಆದರ್ಶದ ಸರಳ ಜೀವನ ಶರಣರ ಆದರ್ಶವಾಗಿದ್ದು ಅವರ ಆರೋಗ್ಯಪೂರ್ಣ ಬದುಕಿಗೆ ಸಾಧನ ಆಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಕೆ.ಮಂಜುನಾಥರೆಡ್ಡಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗಿರಿ ಸಾಬ್ ದಿನ್ನಿ, ದತ್ತಿ ದಾಸೋಹಿ ಐ.ಉದಯಶಂಕರ, ಸವಿತಾ, ಸಾಹಿತಿ ಎನ್.ಡಿ.ವೆಂಕಮ್ಮ, ನಿವೃತ್ತ ಉಪನ್ಯಾಸಕಿ ಸುಶೀಲಾ ಶಿರೂರ್, ಕನ್ನಡ ಉಪನ್ಯಾಸಕ ಪ್ರವೀಣ್‌ಕುಮಾರ್ ಇತರರಿದ್ದರು.

Share This Article

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ರುಚಿಕರ ಆಲೂಪೂರಿ; ಇಲ್ಲಿದೆ ಸುಲಭ ವಿಧಾನ | Recipe

ದಿನ ನಿತ್ಯ ಒಂದೇ ರೀತಿಯ ಬೆಳಗ್ಗಿನ ತಿಂಡಿ ತಿಂದು ಬೇಸರವಾಗಿರುತ್ತದೆ. ಆದರೆ ಏನಾದರೂ ವಿಶೇಷವಾದ ಬ್ರೇಕ್​ಫಾಸ್ಟ್​…

ಉಗುರಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ; ಹೇಗೆ ಅಂತೀರಾ.. ಈ ಮಾಹಿತಿ ನೋಡಿ | Health Tips

ಒಬ್ಬ ವ್ಯಕ್ತಿಯನ್ನು ನೋಡುವ ಮೂಲಕ ಅವನ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ಉಗುರುಗಳು ನಿಮ್ಮ ಆರೋಗ್ಯದ…

ಬೆಟ್ಟದ ನೆಲ್ಲಿಕಾಯಿ- ಅಲೋವೆರಾ ಕೂದಲಿನ ಆರೈಕೆಗೆ ಯಾವುದು ಬೆಸ್ಟ್​​; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಇಬ್ಬರಿಗೂ ತಮ್ಮ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಪ್ರಸಕ್ತ ಜೀವನಶೈಲಿ,…