More

    ಛಾಯಾಗ್ರಹಣ ಸವಾಲಿನಿಂದ ಕೂಡಿದೆ

    ಹುಬ್ಬಳ್ಳಿ: ತಂತ್ರಜ್ಞಾನದ ಅನುಕೂಲತೆಯ ನಡುವೆಯೂ ಇಂದು ಛಾಯಾಗ್ರಹಣ ಹಾಗೂ ದೃಶ್ಯ ಚಿತ್ರೀಕರಣ (ವಿಡಿಯೋಗ್ರಾಫಿ) ಸಾಕಷ್ಟು ಸವಾಲಿನಿಂದ ಕೂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಿಸಿದರು.

    ಗೋಕುಲ ರಸ್ತೆ ವಾಸವಿ ಮಹಲ್​ನಲ್ಲಿ ಶನಿವಾರ ಎರಡು ದಿನಗಳ ಡಿಜಿ ಫೋಟೋ ಎಕ್ಸ್​ಪೋ-ರಾಷ್ಟ್ರ ಮಟ್ಟದ ಛಾಯಾಚಿತ್ರ ಪ್ರದರ್ಶನ ಮತ್ತು ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಇಂದು ಸ್ಪರ್ಧೆ ಹೆಚ್ಚಿದೆ. ಅಪಾಯಗಳೂ ಇವೆ. ಇವೆಲ್ಲದರ ನಡುವೆ ಛಾಯಾಗ್ರಾಹಕರು ವೃತ್ತಿಪರತೆ ಮೈಗೂಡಿಸಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.

    ಹುಬ್ಬಳ್ಳಿ ಫೋಟೋಗ್ರಾಫರ್ಸ್ ಆಂಡ್ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಿರಣ ಬಾಕಳೆ ಮನವಿ ಮೇರೆಗೆ ಸಂಘದ ಕಚೇರಿ ನಿರ್ವಣಕ್ಕೆ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಕೇಂದ್ರ ಸಚಿವರು ಘೊಷಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕ ಪ್ರಸಾದ ಅಬ್ಬಯ್ಯ, ನಟ ಯಶವಂತ ಸರದೇಶಪಾಂಡೆ, ಬೈ-ಸೆಲ್ ಇಂಟರ್ಯಾಕ್ಷನ್ಸ್​ನ ಪ್ರಧಾನ ವ್ಯವಸ್ಥಾಪಕ ಬಾಲಸುಬ್ರಹ್ಮಣ್ಯ, ಬೆಂಜಮಿನ್ ಭಾಸ್ಕರ, ದಿನೇಶ ದಾಬಡೆ, ಕೃಷ್ಣಪ್ಪ, ಇತರರು ಇದ್ದರು.

    ಸನ್ಮಾನ: ಹಿರಿಯ ಛಾಯಾಗ್ರಾಹಕರಾದ ಗದಗನ ಪರಶುರಾಮಸಾ ಕಬಾಡಿ, ಶಿರಸಿಯ ದುರ್ಗಾದಾಸ ಜೈವಂತ, ಹುಬ್ಬಳ್ಳಿಯ ಈರಣ್ಣ ಚಿಕ್ಕೋಡಿ, ಮನೋಹರಸಾ ಪವಾರ, ಸುಧೀರ ಬುರ್ಗೆ, ಬೆಳಗಾವಿಯ ಗಂಗಾ ಗೌಡರ್, ಬಸನಗೌಡ ಶಿವನಗೌಡ ಪಾಟೀಲ, ಚಂದ್ರಶೇಖರ ಕಮ್ಮಾರ, ಓಂಗುರುಪ್ರಕಾಶ ಇಚ್ಚಂಗಿ, ನಾಗೇಂದ್ರಸಾ ಕಾಟವೆ, ಸಿಕಂದರ ರಾಮದುರ್ಗ, ಅರುಣೇಶ ಮತ್ತು ಜ್ಯೋತಿ ದಂಪತಿ, ದಿಲೀಪ ಮತ್ತು ಸರಸ್ವತಿ ದಂಪತಿ ಹಾಗೂ ಪ್ರಕಾಶ ಕಂದಕೂರ ಮತ್ತು ಮಿನುತಾ ದಂಪತಿ ಅವರನ್ನು ಸನ್ಮಾನಿಸಲಾಯಿತು.

    ಕರ್ನಾಟಕ ವಿಡಿಯೋಗ್ರಾಫರ್ಸ್ ಆಂಡ್ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಹಾಗೂ ಬೈ-ಸೆಲ್ ಇಂಟರ್ಯಾಕ್ಷನ್ಸ್ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಡಿಜಿ ಎಕ್ಸ್​ಫೋವನ್ನು ಸಾರ್ವಜನಿಕರು ಭಾನುವಾರವೂ ವೀಕ್ಷಿಸಬಹುದು. ಪ್ರದರ್ಶನದಲ್ಲಿ ವಿವಿಧ ಕಂಪನಿಗಳ 66 ಮಳಿಗೆಗಳು ಇವೆ. ನಿಕಾನ್, ಕ್ಯಾನನ್, ಪ್ಯಾನಸೋನಿಕ್, ಫುಜಿಫಿಲ್ಮ್, ಸೋನಿ, ಗೋಡಾಕ್ಸ್, ಎಪ್ಸನ್, ಮೋನಾರ್ಕ್, ಇನ್ನಿತರ ಕಂಪನಿಗಳು ತಮ್ಮ ಉತ್ಪನ್ನಗಳೊಂದಿಗೆ ಭಾಗವಹಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts