More

    ಚೇತರಿಕೆಗೆ ಕಲಬುರಗಿ ರಾಜ್ಯದಲ್ಲಿ ಪ್ರಥಮ

    ಕಲಬುರಗಿ: ಜಿಲ್ಲೆಯಲ್ಲಿ ಸಧ್ಯಕ್ಕೆ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಚೇತರಿಕೆ ಪ್ರಮಾಣದಲ್ಲಿ ಕಲಬುರಗಿ ಈಗ ಅಗ್ರಸ್ಥಾನದಲ್ಲಿದ್ದು ಇದು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಸೇರಿ ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಸಧ್ಯಕ್ಕೆ ನೆಮ್ಮದಿ ಉಂಟು ಮಾಡಿದೆ. ಇದೇ ಸ್ಥಿತಿ ಮುಂದುವರಿದರೆ ಜಿಲ್ಲೆ ಕರೊನಾ ಮುಕ್ತವಾಗುವುದರಲ್ಲಿ ಎರಡು ಮಾತಿಲ್ಲ.
    ಮಂಗಳವಾರ 15 ಹೊಸ ಪ್ರಕರಣಗಳು ಪತ್ತೆಯಾಗಿದ್ದರೂ ಸಹ ಚೇತರಿಸಿಕೊಂಡವರ ಸಂಖ್ಯೆ 47 ಆಗಿದೆ. ಹೀಗಾಗಿ ಒಟ್ಟು ಸೋಂಕಿತರ ಸಂಖ್ಯೆ1436 ಆಗಿದ್ದು, ಇದರಲ್ಲಿ ಚೇತರಿಸಿಕೊಂಡವರ ಸಂಖ್ಯೆ 1095ಕ್ಕೇರಿದೆ. 323 ಸಕ್ರೀಯ ಪ್ರಕರಣಗಳು ಮಾತ್ರ ಇವೆ. ಇದುವರೆಗೆ 18 ಜನ ಈ ರೋಗಕ್ಕೆ ಬಲಿಯಾಗಿದ್ದಾರೆ.
    ಈ ಮಧ್ಯೆ ಐಸಿಯು ವಾರ್ಡ್​ಗೆ ಸೇರುತ್ತಿರುವವರ ಸಂಖ್ಯೆ ಮಂಗಳವಾರ 14 ಆಗಿದ್ದು, ಇದು ಕೊಂಚ ಆತಂಕಕ್ಕೆ ಕಾರಣವಾಗಿದೆ.
    ಆರಂಭದಲ್ಲಿ ಕೆಲ ದಿನ ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್ಗಳ ಕೊರತೆ ಆಗಬಹುದೇನೋ ಎನ್ನುವಂಥ ವಾತಾವರಣ ನಿಮರ್ಾಣವಾಗಿತ್ತು. ಆದರೆ ಈಗ ಚೇತರಿಸಿಕೊಂಡವರ ಪ್ರಕರಣಗಳಲ್ಲಿ ಗಣನೀಯ ಸುಧಾರಣೆ ಕಂಡು ಬಂದಿರುವುದರಿಂದ ಸೌಲಭ್ಯದ ಕೊರತೆ ಕಾಣಲಿಕ್ಕಿಲ್ಲವೆಂದು ಹೇಳಲಾಗುತ್ತಿದೆ.
    ಮಂಗಳವಾರ ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಐದು ಮಹಾರಾಷ್ಟ್ರದ ಸೋಂಕಿನಿಂದ ಬಂದಿದ್ದಾಗಿದೆ. ಎರಡರ ಸಂಪರ್ಕ ಪತ್ತೆ ಹಚ್ಚಬೇಕಿದೆ. ಅನ್ಯ ರೋಗಿಗಳ ನೇರ ಸಂಪರ್ಕದಿಂದ ಇಬ್ಬರಿಗೆ ಕೋವಿಡ್ ಬಂದಿದೆ. ನಾಲ್ವರು ಐಎಲ್ಐದಿಂದ ಬಳಲುತ್ತಿದ್ದಾರೆ. ಮಂಗಳವಾರದ ಪ್ರಕರಣಗಳಲ್ಲಿ ಎಂಟು ವರ್ಷದ ಗಂಡು ಮಗುವಿಗೆ ಸೋಂಕು ತಗುಲಿದೆ. 60 ವರ್ಷದ ಒಬ್ಬರು ಮತ್ತು 66 ವರ್ಷದ ಒಬ್ಬರು ಸೋಂಕಿಗೊಳಗಾಗಿದ್ದಾರೆ. ಇವರೆಲ್ಲರನ್ನೂ ಕೋವಿಡ್-19 ಆಸ್ಪತ್ರೆಗೆ ಸೇರಿಸಲಾಗಿದೆ. ಇವರ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
    ಬಿಡುಗಡೆಯಾದವರ ವಿವರ

    ಮಂಗಳವಾರ ಮತ್ತೇ 47 ಜನ ಕರೊನಾ ಸೋಂಕಿನಿಂದ ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದಾರೆ. ಚೇತರಿಸಿಕೊಂಡವರ ಪ್ರಕರಣಗಳ ಸಂಖ್ಯೆಯಲ್ಲಿ ನಾವು ಈಗ ರಾಜ್ಯದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದ್ದೇವೆ. ನಿಜಕ್ಕೂ ಇದು ಖುಷಿ ಪಡುವ ವಿಷಯ. ರೋಗ ನಿಮರ್ೂಲನೆಗೆ ಪ್ರಯತ್ನಿಸುತ್ತಿರುವ ಎಲ್ಲರಿಗೂ ಸತತ ಪ್ರೋತ್ಸಾಹವೂ ಅಗತ್ಯವಾಗಿದೆ. ಕಲಬುರಗಿ ಜಿಲ್ಲೆಯನ್ನು ಸಂಪೂರ್ಣವಾಗಿ ಕರೊನಾ ಮುಕ್ತವನ್ನಾಗಿ ಮಾಡಲು ಎಲ್ಲರೂ ಪ್ರಯತ್ನಿಸೋಣ.
    ಶರತ್ ಬಿ. ಜಿಲ್ಲಾಧಿಕಾರಿ ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts