More

    ಚುನಾವಣೆಯೊಳಗೇ ಕುರುಬರನ್ನು ಎಸ್ಟಿ ಪಟ್ಟಿಗೆ ಸೇರಿಸಿ

    ಬೆಳಗಾವಿ: ರಾಜ್ಯ ಸರ್ಕಾರ ಕುರುಬ ಸಮುದಾಯದ ಕುಲಶಾಸಿಯ ಅಧ್ಯಯನ ವರದಿ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ವಿಧಾನಸಭಾ ಚುನಾವಣೆ ಒಳಗಾಗಿ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವಂತೆ ರಾಜ್ಯ ಕುರುಬರ ಸಂದಿಂದ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.

    ಸುವರ್ಣಸೌಧದ ಎದುರಿನ ಕೊಂಡಸಕೊಪ್ಪದ ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದ ಸಾವಿರಾರು ಪ್ರತಿಭಟನಾಕಾರರು, 2019ರಲ್ಲೇ ಸಿದ್ದವಾದ ಕುಲಶಾಸಿಯ ಅಧ್ಯಯನ ವರದಿ ಸಂಪುಟದಲ್ಲಿನ್ನೂ ಮಂಡಿಸಿಲ್ಲ. ಇನ್ನೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವುದು ಯಾವಾಗ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಬೀದರ್​, ಕಲಬುರ್ಗಿ, ಯಾದಗಿರಿ ಜಿಲ್ಲೆಯ “ಗೊಂಡ’ ಪದವು ಕುರುಬ ಪದಕ್ಕೆ ಪರ್ಯಾಯ ಎಂದು 1996&1997ರಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿದೆ. ಆಗ ಕೇಂದ್ರ ಸರ್ಕಾರ ಕುಲಶಾಸಿಯ ಅಧ್ಯಯನ ವರದಿ ಕೇಳಿದ್ದರಿಂದ ರಾಜ್ಯ ಸರ್ಕಾರ 2014ರಲ್ಲಿ ತನ್ನ ವರದಿಯನ್ನು ಕಳುಹಿಸಿಕೊಟ್ಟು 9 ವರ್ಷ ಕಳೆದಿದೆ. ಈ ಜಿಲ್ಲೆಗಳ “ಗೊಂಡ’ ಸಮಾಜಕ್ಕೆ ಪರ್ಯಾಯ ಪದವೆಂದು ಇಲ್ಲಿಯವರೆಗೂ ಪರಿಗಣಿಸಿಲ್ಲ. ತಮ್ಮ ಸಮುದಾಯ ಅನ್ಯಾಯಕ್ಕೊಳಗಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯ ಸರ್ಕಾರ ಕೊಡಗು ಜಿಲ್ಲೆಯಲ್ಲಿರುವ ಹಾಲುಮತ ಕುರುಬ ಸಮುದಾಯಕ್ಕೆ ಸಮಾನ ಪದವೆಂದು ಪರಿಗಣಿಸಿ ಕುಲಶಾಸಿಯ ಅಧ್ಯಯನ ವರದಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದ್ದು, ಸರ್ಕಾರ ಕೂಡಲೇ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

    ಕುರುಬ ಸಮುದಾಯ ಆರ್ಥಿಕ, ಸಾಮಾಜಿಕ ಮತ್ತು ಶೈಣಿಕವಾಗಿ ಹಿಂದುಳಿದಿದ್ದು, ಸರ್ಕಾರ ಎಸ್​ಟಿ ಪಟ್ಟಗೆ ಸೇರಿಸಬೇಕೆಂದು ಗಿರಿಜನ ಸಂಶೋಧನಾ ಸಂಸ್ಥೆಯು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಕುಲಶಾಸಿಯ ಅಧ್ಯಯನಕ್ಕೆ 2019ರಲ್ಲಿ ಆದೇಶಿಸಿತ್ತು. ಸರ್ಕಾರ ಅಧ್ಯಯನ ವರದಿ ಪಡೆದು ಅನುಮೋದನೆ ನೀಡಿ ಬರುವ ವಿಧಾನಸಭಾ ಚುನಾವಣಾ ಪೂರ್ವದಲ್ಲೇ ಸಮುದಾಯದ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

    ಕಾರ್ಯಾಧ್ಯ ಬಿ.ಸುಬ್ರಮಣ್ಯ, ಪ್ರಧಾನ ಕಾರ್ಯದರ್ಶಿ ಡಿ.ವೆಂಕಟೇಶಮೂರ್ತಿ, ಖಜಾಂಚಿ ದೇವರಾಜ ಸುಬ್ಬರಾಯಪ್ಪ, ರಾಜೇಂದ್ರ ಸಣ್ಣಕ್ಕಿ, ಕೆ.ಎಂ.ರಾಮಚಂದ್ರಪ್ಪ, ಮಹಾಂತೇಶ ಕೌಲಗಿ, ಮಡ್ಡೆಪ್ಪ ತೋಳಿನವರ, ಅಶೋಕ ಮೆಟಗುಡ್ಡ ಹಾಗೂ ಶಂಕರರಾವ್​ ಹೆಗಡೆ ಸೇರಿ ಸಾವಿರಾರು ಜನ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts