More

    ಚುಟುಕು ಸಾಹಿತ್ಯಕ್ಕಿದೆ ಮಹತ್ವ

    ರಾಮದುರ್ಗ, ಬೆಳಗಾವಿ: ಸಣ್ಣ ಝರಿಯಾಗಿ ಹುಟ್ಟಿ, ನದಿಯಾಗಿ ಹರಿದು ಸಾಗರ ಸೇರುವ ಹಾಗೆ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಚುಟುಕು ಸಾಹಿತ್ಯ ತನ್ನದೆಯಾದ ಮಹತ್ವ ಪಡೆದುಕೊಂಡಿದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಎಲ್.ಎಸ್. ಶಾಸಿ ಹೇಳಿದರು.

    ಪಟ್ಟಣದ ಮರಾಠ ಮಂಗಲ ಕಾರ್ಯಾಲಯದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಬೆಳಗಾವಿ ಜಿಲ್ಲಾ 3ನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಮಾತನಾಡಿದರು. ಚುಟುಕು ಸಾಹಿತ್ಯ ಹೆಮ್ಮರವಾಗಿ ಬೆಳೆಯಲು ಸಾಹಿತ್ಯ ಪರಿಷತ್ ಕಾರ್ಯಕ್ರಮ ಆಯೋಜನೆ ಮಾಡಿದ್ದು ಶ್ಲಾಘನೀಯ ಎಂದರು.
    ಬೆಳಗಾವಿಯಲ್ಲಿ 1997ರಲ್ಲಿ ಸ್ಥಾಪಿತವಾದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ಗೆ 25 ವರ್ಷಗಳು ತುಂಬಿವೆ. ಮುಂದಿನ ವರ್ಷ ಬೆಳ್ಳಿ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲು ಜಿಲ್ಲಾ ಸಮಿತಿ ಸನ್ನದ್ಧವಾಗಿದೆ ಎಂದು ಹೇಳಿದರು.

    ಚುಟುಕು ಸಾಹಿತ್ಯ ಪ್ರಕಾರಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಗಮನಾರ್ಹವಾಗಿದ್ದು, ಹಿರಿಯ ಕವಿ ಜಿನದತ್ತ ದೇಸಾಯಿ ಅವರ ಚುಟುಕುಗಳು ಕಾವ್ಯ ಕ್ಷೇತ್ರದಲ್ಲಿ ರಾಜ್ಯಮಟ್ಟದ ಗೌರವ, ಪ್ರಸಿದ್ಧಿ ಪಡೆದಿವೆ ಎಂದರು.

    ಸಮ್ಮೇಳದ ಉದ್ಘಾಟನೆ ಪೂರ್ವದಲ್ಲಿ ಭುವನೇಶ್ವರಿ ದೇವಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಶಾಸಕ ಮಹಾದೇವಪ್ಪ ಯಾದವಾಡ ಮೆರವಣಿಗೆಗೆ ಚಾಲನೆ ನೀಡಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ರಾಷ್ಟ್ರ ಧ್ವಜಾರೋಹಣ ಹಾಗೂ ಬಿಇಒ. ಎನ್.ವೈ. ಕುಂದರಗಿ ನಾಡ ಧ್ವಜಾರೋಹಣ ನೆರವೇರಿಸಿದರು.
    ಚಿಕ್ಕೋಡಿ ಚಿಂಚಣಿ ಸಿದ್ಧ ಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಶೋಕ ಮಳಗಲಿ, ಪ್ರೊ.ಪಿ.ಎಲ್.ಮಿಸಾಳೆ, ಸೋಮಶೇಖರ ಸೊಗಲದ, ಸಾಹಿತಿ ವೆಂಕಟೇಶ ಹುಣಸಿಕಟ್ಟಿ, ಎಚ್.ಆರ್. ಮುದಿಗೌಡರ, ಆರ್.ಎಸ್. ಪಾಟೀಲ, ಆನಂದ ಪುರಾಣಿಕ, ಎಂ.ಎ. ಪಾಟೀಲ, ಆರ್.ಸಿ. ಗೌರವನ್ನವರ, ಬಿ.ಬಿ. ಹಾಜಿ. ಪ್ರೊ. ಎಸ್.ಎಂ. ಸಕ್ರಿ, ತಾಪಂ ಇಒ ಪ್ರವೀಣಕುಮಾರ ಸಾಲಿ, ಪ್ರಾಚಾರ್ಯ ಡಾ. ಎ.ಎಸ್. ಲಾಲಸಂಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts