More

    ಚುಕ್ಕಿ ರೋಗಕ್ಕೆ ಪಪ್ಪಾಯಿ ಬೆಳೆ ಹಾನಿ

    ಲಕ್ಷ್ಮೇಶ್ವರ: ಅತಿವೃಷ್ಟಿಯಿಂದಾಗಿ ಖುಷ್ಕಿ ಜಮೀನಿನ ಬೆಳೆಗಾರರಷ್ಟೇ ಅಲ್ಲದೇ ತೋಟಗಾರಿಕೆ ಬೆಳೆಗಾರರೂ ಹಾನಿ ಅನುಭವಿಸುತ್ತಿದ್ದಾರೆ. ತೋಟಗಾರಿಕಾ ಬೆಳೆಗಳಾದ ಪಪ್ಪಾಯಿ, ದಾಳಿಂಬೆ, ಬಾಳೆ, ನುಗ್ಗೆ, ಪೇರಲ, ಎಲೆಬಳ್ಳಿ, ತರಕಾರಿ, ಹೂ-ಬಳ್ಳಿಗಳ ಬೆಳೆಗಳೂ ಹಾಳಾಗಿವೆ.

    ತಾಲೂಕಿನ ಯಳವತ್ತಿ ಗ್ರಾಮದ ಸಾವಯವ ಕೃಷಿಕ ವಿಶ್ವನಾಥ ಚಿಂಚಲಿ ಅವರು 4 ಎಕರೆ ಜಮೀನಿನಲ್ಲಿ ಬೆಳೆದ ಪಪ್ಪಾಯಿ ಬೆಳೆ ಹಾಳಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.

    ಅತ್ಯಂತ ಸೂಕ್ಷ್ಮ ಬೆಳೆಯಾದ ಪಪ್ಪಾಯಿ ವಿಪರೀತ ಮಳೆಯಿಂದಾಗಿ ಕೊಳೆತು ನೆಲಕ್ಕುದುರುತ್ತಿದೆ. ಆಗಸ್ಟ್​ನಿಂದ ಅಕ್ಟೋಬರ್​ವರೆಗೆ ಸುರಿದ ಮಳೆಯಿಂದಾಗಿ ಭೂಮಿಯಲ್ಲಿ ನೀರು ನಿಂತು ತೇವಾಂಶ ಹೆಚ್ಚಳದಿಂದ ಪಪ್ಪಾಯಿ ಗಿಡಗಳಲ್ಲಿನ ಹಣ್ಣುಗಳಿಗೆ ಚುಕ್ಕೆರೋಗ, ಕೊಳೆತು ನೆಲಕ್ಕೆ ಬೀಳುತ್ತಿವೆ. ಜತೆಗೆ ಗಿಡಗಳ ಮೇಲ್ತುದಿಗಳು ಒಣಗುತ್ತಿದ್ದು, ಕಾಯಿಗಳು ಉದುರುತ್ತಿವೆ. ಹಣ್ಣುಗಳ ಮೇಲೆ ಚುಕ್ಕಿ ಇರುವುದರಿಂದ ಮತ್ತು ಅದರ ಗುಣಮಟ್ಟ ಕುಸಿದಿರುವುದರಿಂದ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದಂತಾಗಿದೆ. ಇದರಿಂದ ರೈತ ವಿಶ್ವನಾಥ ಅವರು ಲಕ್ಷಾಂತರ ರೂ. ಹಾನಿಗೊಳಗಾಗಿದ್ದಾರೆ.

    ಒಂದೂವರೆ ವರ್ಷದ ಹಿಂದೆ 4 ಎಕರೆ ಜಮೀನಿನಲ್ಲಿ ಆಸ್ಟ್ರೇಲಿಯನ್ ಗ್ರೀನ್​ಬೆರಿ ಎಂಬ ತಳಿಯ 4 ಸಾವಿರ ಸುಧಾರಿತ ಹಾಗೂ ರೋಗ ನಿರೋಧಕ ಪಪ್ಪಾಯಿ ಬೆಳೆದಿದ್ದರು. 3 ವರ್ಷಗಳ ಕಾಲ ಫಲ ನೀಡುವ ಈ ಬೆಳೆಯಿಂದ ಕಳೆದ 10

    ತಿಂಗಳಿಂದ ಆದಾಯ ಪಡೆಯುತ್ತಿದ್ದರು. ಆದರೆ, ಮುಂಗಾರಿನ ಪ್ರಾರಂಭದಲ್ಲಿ ಆಲಿಕಲ್ಲಿನ ಹೊಡೆತಕ್ಕೆ ಬೆಳೆ ಕೊಂಚ ನಾಶವಾಗಿತ್ತು. ಮತ್ತೇ ಸತತ ಮಳೆಗೆ ಸಿಲುಕಿದ ಬೆಳೆ ಈಗ ಧರೆಗುರುಳುವ ಹಂತ ತಲುಪಿದೆ.

    ಈ ಬಾರಿ ವಿಪರೀತ ಮಳೆಯಿಂದಾಗಿ ಪಪ್ಪಾಯಿಗೆ ಚುಕ್ಕಿರೋಗ, ಕೊಳೆರೋಗ ಬಾಧಿಸಿದೆ. ಈ ರೋಗದ ನಿಯಂತ್ರಣಕ್ಕಾಗಿ ಪಪ್ಪಾಯಿ ಸ್ಪೇಶಲ್ ಎಂಬ ಮೈಕ್ರೋನ್ಯೂಟ್ರಿಯಂಟ್ಸ್ ಸಿಂಪಡಣೆ ಮಾಡಬೇಕು. ಇದರಿಂದ ಬೆಳೆಯನ್ನು ಕೊಂಚ ಮಟ್ಟಿಗೆ ಸುಧಾರಿಸಿಕೊಳ್ಳಬಹುದು. ಬೆಳೆ ಪರಿಶೀಲಿಸಲಾಗಿದ್ದು, ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

    | ಸುರೇಶ ಕುಂಬಾರ

    ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

    3 ವರ್ಷ ಫಲ ನೀಡುವ ಸುಧಾರಿತ ಪಪ್ಪಾಯಿ ಬೆಳೆದು ಸೈ ಎನಿಸಿಕೊಂಡು ಉತ್ತಮ ಬೆಳೆ ಮತ್ತು ಆದಾಯದ ನಿರೀಕ್ಷೆಯಲ್ಲಿದ್ದೆ. ಅಂದುಕೊಂಡಂತೆ 6 ತಿಂಗಳ ಕಾಲ ಉತ್ತಮ ಬೆಳೆ ತೆಗೆದು ಮುಂಬೈ, ಗೋವಾ, ಬೆಳಗಾವಿ ಮತ್ತು ಹುಬ್ಬಳ್ಳಿಗೆ ಮಾರಾಟ ಮಾಡಿದ್ದೇನೆ. ಈ ಬೆಳೆಗಾಗಿ ಕನಿಷ್ಠ 10 ಲಕ್ಷ ರೂ. ಖರ್ಚು ಮಾಡಿದ್ದು, ಮಳೆಯಿಂದ ಬೆಳೆ ಹಾಳಾಗಿ ಲಕ್ಷಾಂತರ ರೂ. ಹಾನಿಯಾಗಿದ್ದು, ಶ್ರಮ ವ್ಯರ್ಥವಾಗಿದೆ. ಹೀಗಾದರೆ ರೈತರ ಬದುಕು ಹೇಗೆ ಸುಧಾರಿಸಬೇಕು?

    | ವಿಶ್ವನಾಥ ಚಿಂಚಲಿ

    ಪಪ್ಪಾಯಿ ಬೆಳೆದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts