More

    ಚೀನಾ ವಸ್ತು ಮಾರಾಟ ಮಾಡದಿರಲು ಮನವಿ

    ಅಕ್ಕಿಆಲೂರ: ಚೀನಾ ವಸ್ತು ಬಹಿಷ್ಕರಿಸಿ ಪಟ್ಟಣದ ವಿವಿಧ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಭಾನುವಾರ ರಾಷ್ಟ್ರೀಯ ಸ್ವದೇಶಿ ಅಭಿಯಾನ ನಡೆಸಿದರು.

    ಪಟ್ಟಣದ ಕುಮಾರನಗರದ ಗಣೇಶ ದೇವಸ್ಥಾನದಿಂದ ಆರಂಭವಾದ ಸ್ವದೇಶಿ ಅಭಿಯಾನಕ್ಕೆ ಶಿವಬಸವ ಸ್ವಾಮೀಜಿ ಚಾಲನೆ ನೀಡಿದರು.

    ಸಿ.ಎಂ. ಉದಾಸಿ ಮುಖ್ಯರಸ್ತೆ, ಚಲವಾದಿ ಓಣಿ, ಹಳೂರ ಓಣಿ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಪೇಟೆ ಓಣಿ ಸೇರಿ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ಅಭಿಯಾನ, ‘ದೇಶಕ್ಕೆ ಚೀನಾ ವಸ್ತುಗಳು ಎಷ್ಟು ಮಾರಕ’ ಎಂದು ಘೊಷಣೆಗಳ ಮೂಲಕ ಸಾರಲಾಗಿತು. ಎಲ್ಲ ಅಂಗಡಿಗಳಿಗೆ ತೆರಳಿದ ಶಿವಬಸವ ಸ್ವಾಮೀಜಿ, ಚೀನಾ ವಸ್ತು ಮಾರಾಟ ಮಾಡದಂತೆ ಮನವಿ ಮಾಡಿದರು. ಅಂಗಡಿಗಳ ವ್ಯಾಪಾರಿಗಳು ತಮ್ಮ ಬಳಿ ಇದ್ದ ಚೀನಾ ವಸ್ತುಗಳನ್ನು ಶ್ರೀಗಳಿಗೆ ನೀಡಿ, ಚೀನಾವಸ್ತು ಮಾರುವುದಿಲ್ಲ ಎಂದು ಭರವಸೆ ನೀಡಿದರು. ನಂತರ ಸಂಗ್ರಹಿಸಿದ ಚೀನಾ ವಸ್ತುಗಳನ್ನು ಸುಟ್ಟು ದೇಶಭಕ್ತಿ ಘೊಷಣೆ ಕೂಗಲಾಯಿತು.

    ಸಂಕಲ್ಪ ಸಭೆಯಲ್ಲಿ ಮಾತನಾಡಿದ ಶಿವಬಸವ ಸ್ವಾಮೀಜಿ, ಭಾರತ ಇತಿಹಾಸದಲ್ಲಿ ವಿಶ್ವಕ್ಕೆ ನೀಡಿದ ಎಲ್ಲ ಸನಾತನ ಪದ್ಧತಿಗಳಿಂದ ಮನುಕುಲ ಕಲ್ಯಾಣವಾಗಿದೆ. ಚೀನಾ ನಮ್ಮ ಸೇನೆ ಮೇಲೆ ಆಕ್ರಮಣ ಮಾಡಿ, ಪಾಕಿಸ್ತಾನದ ಜೊತೆ ಕೈಜೋಡಿಸಿ ಭಾರತದ ಆರ್ಥಿಕತೆಗೆ ಹೊಡೆತ ನೀಡುತ್ತಿದೆ. ಭಾರತಕ್ಕೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನಕ್ಕೆ ಚೀನಾ ಅಡ್ಡಗಾಲು ಹಾಕಿದೆ. ಚೀನಾ ವಸ್ತುಗಳನ್ನು ಉಪಯೋಗಿಸದ, ಖರೀದಿಸದ ಸಂಕಲ್ಪ ಕೈಗೊಂಡ ರಾಷ್ಟ್ರಭಕ್ತರ ಕಾರ್ಯ ಸ್ಮರಣೀಯ ಎಂದು ಹೇಳಿದರು.

    ಆರ್​ಎಸ್​ಎಸ್ ಜಿಲ್ಲಾ ಪ್ರಮುಖ ರಾಜು ಹೈಬತ್ತಿ, ದೀಪು ಮಹೇಂದ್ರಕರ, ಬಿಜೆಪಿ ಮುಖಂಡ ಕೃಷ್ಣ ಈಳಿಗೇರ, ಹಿಂದು ಪರ ಸಂಘಟನೆಯ, ವಿಶ್ವನಾಥ ಬಿಕ್ಷಾವರ್ತಿಮಠ, ಚನ್ನವೀರೇಶ ಬೆಲ್ಲದ, ಅನಿಲ ಬಂಕಾಪುರ, ಅನಿಲ ಬಾಬಜಿ, ತುಕಾರಾಮ ಬಂಕಾಪುರ, ಹರೀಶ ಹಾನಗಲ್ಲ, ಹರ್ಷಾ ಪಸಾರದ, ರಾಚಪ್ಪ ಮಳಗಿ, ವೀರೇಶ ನೆಲುವಿಗಿ, ಪ್ರವೀಣ ಕಲಾಲ, ಜೀವನ ನಿರಲಗಿ, ಮಂಜುನಾಥ ಪಾವಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts