More

    ಚಿಕಿತ್ಸೆ ನೀಡುವವರಿಗೇ ಅಂಟಿದ ಕರೊನಾ!

    ಮರಿದೇವ ಹೂಗಾರ ಹುಬ್ಬಳ್ಳಿ

    ಕರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಇಲ್ಲಿಯ ಕಿಮ್ಸ್​ನ ಕೆಲವು ವೈದ್ಯರಿಗೇ ಸೋಂಕು ತಗುಲಿದೆ. ಹೀಗಾಗಿ, ಕಿಮ್್ಸ ಆಡಳಿತ ಮಂಡಳಿಯು ರೋಗಿಗಳ ಯೋಗಕ್ಷೇಮದೊಂದಿಗೆ ತನ್ನ ವೈದ್ಯಕೀಯ ಸಿಬ್ಬಂದಿಯನ್ನು ರಕ್ಷಿಸಿಕೊಳ್ಳುವ ಸವಾಲನ್ನೂ ಎದುರಿಸಬೇಕಾಗಿ ಬಂದಿದೆ.

    ಕೋವಿಡ್ ಆಸ್ಪತ್ರೆಯಾಗಿ ಘೊಷಿಸಲ್ಪಟ್ಟ ಕಿಮ್್ಸ ಸೂಪರ್ ಸ್ಪೆಷಾಲಿಟಿಯ 250 ಹಾಸಿಗೆಯಲ್ಲಿ 200 ಸಾಮಾನ್ಯ ರೋಗಿಗಳಿಗೆ ಒದಗಿಸಿದ್ದು ಪೂರ್ತಿ ಭರ್ತಿಯಾಗಿವೆ. 50 ಹಾಸಿಗೆಗಳನ್ನು ಅತಿಗಣ್ಯ ವ್ಯಕ್ತಿಗಳಿಗೆಂದು ಮೀಸಲಿಟ್ಟಿರುವುದಾಗಿ ತಿಳಿದುಬಂದಿದೆ. ಕಿಮ್್ಸ ಸಿಬ್ಬಂದಿಯೇ ಈ ಹಾಸಿಗೆಯಲ್ಲಿ ರೋಗಿಯಾಗಿ ಮಲಗುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ.

    ಇಎನ್​ಟಿ, ಎಲುವು ಮತ್ತು ಕೀಲು, ದಂತ ವೈದ್ಯಕೀಯ, ಮೆಡಿಸಿನ್, ಶಸ್ತ್ರಚಿಕಿತ್ಸೆ, ಕ್ಯಾಥಲಾಬ್, ಯುರೋಲಜಿ, ತುರ್ತು ಚಿಕಿತ್ಸಾ ಘಟಕ ಹೀಗೆ ಎಲ್ಲ ವಾರ್ಡ್​ಗಳಲ್ಲಿ ಚಿಕಿತ್ಸೆಗೆ ಬಂದ ಕೆಲವರಲ್ಲಿ ಸೋಂಕು ದೃಢಪಟ್ಟಿದೆ. ಅಂಥವರಿಗೆ ಚಿಕಿತ್ಸೆ ನೀಡಿರುವ ಕೆಲವು ವೈದ್ಯರು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ಶುಶ್ರೂಷಕರಿಗೂ ಸೋಂಕು ತಗುಲಿದೆ. ಕೆಲವು ದಿನಗಳ ಹಿಂದೆ ಪ್ಯಾಥಾಲಜಿ ವಿಭಾಗದ ವೈದ್ಯರೊಬ್ಬರಿಗೆ ಸೋಂಕು ತಗುಲಿದ್ದು, ಇತ್ತೀಚೆಗೆ ಔಷಧ ವಿಭಾಗದ ಶಸ್ತ್ರಚಿಕಿತ್ಸಾ ಘಟಕದ ತಲಾ ಒಬ್ಬ ವೈದ್ಯರಲ್ಲಿ ಕರೊನಾ ದೃಢಪಟ್ಟಿರುವುದು ಇದಕ್ಕೆ ಸಾಕ್ಷಿ. 15ಕ್ಕೂ ಹೆಚ್ಚು ಹಿರಿಯ-ಕಿರಿಯ ವೈದ್ಯರ ಗಂಟಲ ದ್ರವ ಪರೀಕ್ಷೆ ವರದಿ ಬರುವುದು ಬಾಕಿ ಇದ್ದು, ಕಿಮ್ಸ್​ನಲ್ಲಿ ಸೇವೆ ಸಲ್ಲಿಸುತ್ತಿರುವವರಲ್ಲಿ ಆತಂಕ ಹೆಚ್ಚಿಸಿದೆ.

    ಉಪಕ್ರಮದ ಭರವಸೆ: ವೈದ್ಯಕೀಯ ಸಿಬ್ಬಂದಿಯ ಆತಂಕದ ಹಿನ್ನೆಲೆಯಲ್ಲಿ ಕಿಮ್್ಸ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು ಹಾಗೂ ಎಲ್ಲ ವಿಭಾಗದ ಮುಖ್ಯಸ್ಥರ ಸೂಚನೆಯಂತೆ ಕೆಲವು ಉಪಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನುಮುಂದೆ ತುರ್ತು ಪ್ರಕರಣಗಳನ್ನು ಮಾತ್ರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ನಿರ್ವಹಿಸಲಾಗುವುದು. ವೈದ್ಯಕೀಯ ಸಿಬ್ಬಂದಿಗಾಗಿ ಐಸಿಯು ಸಮೇತ 30 ಬೆಡ್​ಗಳ ಕರೊನಾ ಬ್ಲಾಕ್ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ವೈದ್ಯಕೀಯ ಸಿಬ್ಬಂದಿ ಸುರಕ್ಷಿತವಾಗಿದ್ದರೆ ಸಾರ್ವಜನಿಕರು ಆರೋಗ್ಯದಿಂದ ಇರಲು ಸಾಧ್ಯ. ಸೋಂಕಿತರನ್ನು ಕಾಪಾಡಬೇಕಾದ ವೈದ್ಯಕೀಯ ಸಿಬ್ಬಂದಿಗೇ ಕರೊನಾ ಹಬ್ಬಿರುವುದು ಆತಂಕದ ಸಂಗತಿಯೇ. ಬೇರೆ ಕಾಯಿಲೆಯಿಂದ ಯಾವುದೇ ವಾರ್ಡ್​ಗೆ ದಾಖಲಾದವರಲ್ಲಿ ಸೋಂಕು ಕಂಡುಬಂದರೆ, ಆ ವಾರ್ಡ್ ಅನ್ನು 2 ದಿನ ಸೀಲ್​ಡೌನ್ ಮಾಡಲು ಸೂಚಿಸಲಾಗುವುದು.

    | ನಿತೇಶ ಪಾಟೀಲ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts