More

    ಚಿಕನ್ ಬರ್ಗರ್‌ನಲ್ಲಿ ಹುಳು ಪತ್ತೆ ಮಳಿಗೆಗೆ ಅಧಿಕಾರಿಗಳಿಂದ ದಾಳಿ

    ಮಂಗಳೂರು: ಲೇಡಿಹಿಲ್ ನಿವಾಸಿ ಮಹಿಳೆಯೊಬ್ಬರು ಖರೀದಿಸಿದ ಚಿಕನ್ ಆಹಾರ ಖಾದ್ಯದಲ್ಲಿ ಜೀವಂತ ಹುಳು ಪತ್ತೆಯಾಗಿರುವ ಹಿನ್ನೆಲೆ ನಗರದ ಆಹಾರ ಮಳಿಗೆಗೆ ಮಂಗಳವಾರ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂದರ್ಭ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಲಾಯಿತು. ಸಂಸ್ಥೆಯಲ್ಲಿದ್ದ ಕಳಪೆ ಗುಣಮಟ್ಟದ, ಅವಧಿ ಮುಗಿದಿರುವ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ಸಂಸ್ಥೆ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.

    ಈ ಆಹಾರ ಸಂಸ್ಥೆಯಿಂದ ಲೇಡಿಹಿಲ್ ನಿವಾಸಿ ಸಲ್ಮಾ ಸಿಮ್ರಾನ್ ಕೆ. ಎಂಬುವರು ಶನಿವಾರ ಸಾಯಂಕಾಲ ಚಿಕನ್ ಖಾದ್ಯ ಸಹಿತ ಬರ್ಗರ್ ಪಾರ್ಸಲ್‌ಗೆ ಆರ್ಡರ್ ಮಾಡಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪಾರ್ಸಲ್ ಮನೆ ಬಾಗಿಲಿಗೆ ಬಂದಿದೆ. ನಂತರ ಸಿಮ್ರಾನ್ ಸಹಿತ ಮಕ್ಕಳು ಹಾಗೂ ತಾಯಿ ಅಲ್ಪಪ್ರಮಾಣದಲ್ಲಿ ಆಹಾರ ಸೇವಿಸಿದ್ದಾರೆ. ಈ ಸಂದರ್ಭ ಚಿಕನ್ ಖಾದ್ಯದಲ್ಲಿ ಜೀವಂತ ಹುಳು ಪತ್ತೆಯಾಗಿತ್ತು. ಈ ಬಗ್ಗೆ ಅವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts