More

    ಚಾಲಕ, ನಿರ್ವಾಹಕರ ಪ್ರಾಮಾಣಿಕತೆ

    ಹುಬ್ಬಳ್ಳಿ: ಇಲ್ಲಿನ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಬಸ್​ನಿಂದ ಇಳಿಯುವಾಗ ಪ್ರಯಾಣಿಕರು ಬಿಟ್ಟು ಹೋಗಿದ್ದ 15,820 ರೂ. ನಗದು ಹಾಗೂ ಮಹತ್ವದ ದಾಖಲೆಗಳಿದ್ದ ಪರ್ಸ್ ವಾಪಸ್ ನೀಡುವ ಮೂಲಕ ಬಸ್ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.

    ನಿರ್ವಾಹಕ ಗುರುಸಿದ್ದಯ್ಯ ಗೌಡರ ಹಾಗೂ ಚಾಲಕ ಬಸವರಾಜ ಬಾದಾಮಿ ಪ್ರಾಮಾಣಿಕತೆ ಮೆರೆದವರು.

    ವಾ.ಕ.ರ.ಸಾ ಸಂಸ್ಥೆಯ ಬಾಗಲಕೋಟೆ ವಿಭಾಗದ ಗುಳೇದಗುಡ್ಡ ಘಟಕದ ಬಸ್ ಜು.2ರಂದು ಗುಳೇದಗುಡ್ಡದಿಂದ ಹುಬ್ಬಳ್ಳಿಗೆ ಬಂದಿತ್ತು. ನವಲಗುಂದದಲ್ಲಿ ಬಸ್ ಹತ್ತಿದ್ದ ಪ್ರಯಾಣಿಕರೊಬ್ಬರು ಬಸ್​ನಲ್ಲಿ ಪರ್ಸ್ ಬಿಟ್ಟು ಇಳಿದಿದ್ದರು. ಇದನ್ನು ಗಮನಿಸಿದ ಗುರುಸಿದ್ದಯ್ಯ ಹಾಗೂ ಬಸವರಾಜ ಪರಿಶೀಲಿಸಿದಾಗ ಅದರಲ್ಲಿ 15,820 ರೂ. ನಗದು, 3 ಎಟಿಎಂ ಕಾರ್ಡ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ಬೈಕ್ ಆರ್​ಸಿ ಬುಕ್ ಇದ್ದವು.

    ನಂತರ ಎಟಿಎಂ ಕಾರ್ಡ್ ಹೆಸರಿನ ಮೂಲಕ ಬ್ಯಾಂಕ್​ವೊಂದರಲ್ಲಿ ವಿಚಾರಿಸಿದಾಗ ಅದು ತುಮಕೂರು ಮೂಲದ ಹುಬ್ಬಳ್ಳಿ ನಿವಾಸಿ ಬಿ.ಎನ್. ನಟರಾಜು ಅವರದ್ದು ಎಂದು ಗೊತ್ತಾಯಿತು. ಸೋಮವಾರ ಅವರನ್ನು ವಿಭಾಗೀಯ ಕಚೇರಿಗೆ ಕರೆಸಿ ಪರ್ಸ್ ವಾಪಸ್ ನೀಡಿದರು.

    ಚಾಲಕ ಹಾಗೂ ನಿರ್ವಾಹಕರ ಪ್ರಾಮಾಣಿಕತೆ ಮೆಚ್ಚಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಸನ್ಮಾನಿಸಿದರು. ನಗದು ಬಹುಮಾನಕ್ಕೆ ಶಿಫಾರಸು ಮಾಡಿರುವುದಾಗಿ ತಿಳಿಸಿದರು.

    ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ, ಸಹಾಯಕ ಸಂಚಾರ ವ್ಯವಸ್ಥಾಪಕಿ ರೋಹಿಣಿ ಬೇವಿನಕಟ್ಟಿ, ಸಂಚಾರ ಅಧೀಕ್ಷಕ ಐ.ಜಿ. ಮಾಗಾಮಿ, ನಿಲ್ದಾಣಾಧಿಕಾರಿಗಳಾದ ಕುರ್ತಕೋಟಿ, ಕೋಟೂರ, ಪಿ.ಎಸ್ ಶೆಟ್ಟರ್ ಮತ್ತು ಕಾರಡ್ಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts