More

    ಚಾರ್ವಾಕದ ತರಕಾರಿಗೂ ಕುಸಿದ ಬೇಡಿಕೆ

    ಪ್ರವೀಣ್‌ರಾಜ್ ಕೊಲ ಕಡಬ
    ದಕ್ಷಿಣ ಕನ್ನಡ ಜಿಲ್ಲೆಗೆ ಅತಿಹೆಚ್ಚು ತರಕಾರಿ ಪೂರೈಸುವ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಹೆಚ್ಚಿನ ಕುಟುಂಬಗಳು ತರಕಾರಿ ಬೆಳೆಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿವೆ. ಆದರೆ ಕರೊನಾಘಾತದಿಂದ ತರಕಾರಿಗೆ ಬೇಡಿಕೆಯೇ ಇಲ್ಲವಾಗಿದೆ.

    ಬೆಳೆದ ಫಸಲನ್ನು ಮಂಗಳೂರಿನ ವ್ಯಾಪಾರಸ್ಥರ ಬಳಿ ಸಾಗಿಸುವುದೇ ಸಮಸ್ಯೆಯಾಗಿದೆ. ಅತ್ತ ಗ್ರಾಹಕರಿಲ್ಲದೆ ವ್ಯಾಪಾರಸ್ಥರು ತರಕಾರಿ ಬೇಡ ಎನ್ನುತ್ತಾರೆ. ಕಳೆದ ಭಾರಿಯೂ ಲಾಕ್‌ಡೌನ್‌ನಿಂದ ತೊಂದರೆಯಾಗಿದ್ದು, ಈ ಭಾರಿಯೂ ಮತ್ತೆ ಸಮಸ್ಯೆಯಾಗಿದೆ. ನೀರಾವರಿ ಪೈಪು, ಚಪ್ಪರ ಹೀಗೆ ಸಾವಿರಾರು ರೂ. ಬಂಡವಾಳ ಹಾಕಿ ಬೆಳೆದ ತರಕಾರಿ ಈಗ ಚಪ್ಪರದ ಬಳ್ಳಿಯಲ್ಲೇ ಬಾಕಿಯಾಗಿದೆ.

    ಗ್ರಾಮದಲ್ಲಿ ತರಕಾರಿ ಬೆಳೆಯುವುದರಲ್ಲಿ ವಿದ್ಯಾವಂತ ಯುುವ ಸಮುದಾಯವೂ ತೊಡಗಿಸಿಕೊಂಡಿದ್ದು, ಕುಂಬಳಕಾಯಿ, ಪಡವಲಕಾಯಿ, ಅಲಸಂಡೆ, ಸೌತೆಕಾಯಿ ಬೆಳೆದು ಆದಾಯ ಗಳಿಸುತ್ತಿದ್ದಾರೆ. ಆದರೆ ಸದ್ಯ ಉಂಟಾಗಿರುವ ಆತಂಕದಿಂದ ತರಕಾರಿ ಕೃಷಿಯತ್ತ ಮುಖ ಮಾಡುವುದೇ ಬೇಡ ಎಂಬ ಸ್ಥಿತಿಗೆ ಬಂದು ನಿಂತಿದೆ ಎನ್ನುತ್ತಾರೆ ಈ ಭಾಗದ ಕೃಷಿಕರು.

    ಬೇಸಿಗೆಯಲ್ಲಿ ನಡೆಯುವ ಶುಭ ಕಾರ್ಯಗಳ ಪರ್ವಕಾಲದಲ್ಲಿ ತರಕಾರಿಗೆ ಬಹು ಬೇಡಿಕೆಯಿರುತ್ತದೆ. ಇದೇ ಸಂದರ್ಭ ಕಳೆದ ವರ್ಷವೂ ಲಾಕ್‌ಡೌನ್ ಆಗಿತ್ತು. ಈ ಬಾರಿಯೂ ಅದೇ ಸಮಸ್ಯೆ. ಈ ಭಾಗದ ರೈತರು ತರಕಾರಿಗಳನ್ನು ಹೆಚ್ಚಾಗಿ ಮಂಗಳೂರಿಗೆ ಸಾಗಿಸುತ್ತಾರೆ. ಕಳೆದ ವಾರದಿಂದ ಮಂಗಳೂರಿನ ವ್ಯಾಪಾರಸ್ಥರು ಇತ್ತ ತರಕಾರಿ ತರಬೇಡಿ ಎಂದಿದ್ದಾರೆ. ಸ್ಥಳೀಯವಾಗಿಯೂ ಬೇಡಿಕೆಯಿಲ್ಲ.
    ಮೋಹನಚಂದ್ರ ಖಂಡಿಗ, ತರಕಾರಿ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts