More

    ಚಾಮುಂಡೇಶ್ವರಿ, ಮುತ್ತಪ್ಪ ದೇವರ ವಾರ್ಷಿಕೋತ್ಸವ

    ಸುಂಟಿಕೊಪ್ಪ: ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಪ್ರತಿಷ್ಠಾಪನಾ ಪ್ರಥಮ ವಾರ್ಷಿಕೋತ್ಸವದ ಪೂಜಾ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

    ದೇವಸ್ಥಾನದ ತಂತ್ರಿ ಶಂಕರನ್ ನಂಬೂದರಿ ನೇತೃತ್ವದಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ತಂತ್ರಿಯ ಸ್ವೀಕಾರ, 5.30ಕ್ಕೆ ಪಶುದಾನ ಪುಣ್ಯಾಹಃ, 6.30 ಗಂಟೆಗೆ ದೀಪಾರಾಧನೆ ಮತ್ತು ಮಂಗಳಾರತಿ, 7 ಗಂಟೆಗೆ ಪ್ರಸಾದ ಶುದ್ಧಿ, 7.35ಕ್ಕೆ ಶೋಕಾನ ಹೋಮ, 8 ಗಂಟೆಗೆ ಅಸ್ತ್ರಕಳಸ, 8.30ಕ್ಕೆ ವಾಸ್ತುಹೋಮ, ವಾಸ್ತುಬಲಿ, ವಾಸ್ತುಶಾಂತಿ, ಕಳಸಾಭಿಷೇಕ, ವಾಸ್ತುಪುಣ್ಯಾಹಃ, ಮಹಾಪೂಜೆ ನೇರವೇರಿತು.

    ಶನಿವಾರ ಬೆಳಗ್ಗೆ 5 ಗಂಟೆಗೆ ಶಂಖ ಊದಿ ಪಳ್ಳಿಉಣರರ್ತಲ್, 5.30 ಕ್ಕೆ ಅಭಿಷೇಕ ಮಲರ್ ನೈವೇದ್ಯ, 6 ಗಂ.ಗಣಪತಿ ಹೋಮ, 7 .ಗಂ.ಉಷಾಪೂಜೆ, 8 ರಿಂದ 9 ಗಂ.ಟೆಯವರೆಗೆ ಶುದ್ಧಿ ಕಳಸ ಪೂಜೆ,10.30 ಗಂ. ಬ್ರಹ್ಮಕಳಸಪೂಜೆ, 11.30 ಗಂ.ಕಳಸಾಭಿಷೇಕ, 12 ಗಂ.ಮಹಾಪೂಜೆ ಮಂಗಳಾರತಿ, 12.30 ಗಂ. ಅನ್ನ ಸಂತರ್ಪಣೆ. ನಂತರ ಸಂಜೆ 5 ಗಂ. ಪರಿವಾರ ಬಲಿ, 6 ಗಂ. ತಾಯಂಬಗ(ಚಂಡೆ ಮೇಳ-ವಾದ್ಯಗೋಷ್ಠಿ) 6.35 ಕ್ಕೆ ದೀಪಾರಾಧನೆ ನಡೆಯಲಿದೆ ಎಂದು ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟೆಮನೆ.ಪಿ.ಉದಯಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts