More

    ಚರ್ಚೆಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ

    ಚಿತ್ರದುರ್ಗ:ಕಳೆದ ನಾಲ್ಕೈದು ತಿಂಗಳಿಂದ ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತೇ ಚರ್ಚೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೇಳುತ್ತಾ ಬಂದಿದ್ದೀರಿ,ಮಾಧ್ಯಮದವರಿಗೆ ಕೈ ಮುಗಿದು ಕೇಳುತ್ತೇನೆ. ಅಧಿಕಾರ ಹಂಚಿಕೆ ಕುರಿತು ಏನಾದರೂ ಹೇಳುವುದಿದ್ದರೆ ಹೈಕಮಾಂಡ್ ಹೇಳಬೇಕೆಂದು ಕಾರ್ಮಿಕ ಸಚಿವ ಸಂತೋಷ್‌ಲಾಡ್ ಹೇಳಿದರು.
    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್‌ನಲ್ಲಿ ಯಾವ ಗೊಂದಲವಿಲ್ಲ. ಆದರೆ ಅಭಿಪ್ರಾಯಗಳಿವೆ. ನಾನೇ 5 ವರ್ಷ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಈ ಚರ್ಚೆಗೆ ತೆರೆ ಎಳೆದಿದ್ದಾರೆ. ಆದಾದ ಮೇಲೂ ಮತ್ತೆ ಯಾಕೆ ಈ ಪ್ರಶ್ನೆ? ಸಿಎಂ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಕುರಿತಂತೆ ಶಿವಕುಮಾರ್ ಅವರನ್ನೇ ಕೇಳಬೇಕು,ಘೋಷಣೆ ಕೂಗುವ ಕಾರ‌್ಯಕರ್ತರು ನಮ್ಮ ಪಕ್ಷದವರೇ ಆಗಿದ್ದಾರೆ.
    ಅನ್ಯಪಕ್ಷದ ಅಧಿಕಾರದಲ್ಲಿದ್ದರೆ ಆ ಸರ್ಕಾರ ಅದನ್ನು ಕೆಡುವುದನ್ನು ಬಿಜೆಪಿ ಹವ್ಯಾಸ ಮಾಡಿಕೊಂಡಿದೆ. ಸಿಬಿಐ,ಇಡಿ ಮೊದಲಾದ ತನಿ ಖಾ ಸಂಸ್ಥೆಗಳನ್ನೂ ಇದಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆರೋಪಗಳಿರುವಂಥ ಅನ್ಯಪಕ್ಷವರು ಬಿಜೆಪಿ ಸೇರಿದ ತಕ್ಷಣ ಶುದ್ಧವಾಗಿ ಬಿ ಡುತ್ತಾರೆ ಎಂದು ವ್ಯಂಗವಾಡಿದರು.
    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ದಿನ ಬೆಳಗ್ಗೆ ಎದ್ದರೆ ಆರೋಪಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಏನೂ ಉತ್ತರಿಸಬೇಕು? ಮೊದಲು ಬಿಜೆಪಿ ವಿರುದ್ಧ ಮಾತನಾಡುತ್ತಿದ್ದ ಅವರು ಈಗ ಕಾಂಗ್ರೆಸ್ಸನ್ನು ಪ್ರಶ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರಚಾ ರಕ್ಕೆಂದೇ ಅಧಿಕೃತವಾಗಿ 6 ಸಾವಿರ ಕೋಟಿ ರೂ.ಖರ್ಚು ಮಾಡಿದೆ. ಕಳೆದ 9 ವರ್ಷಗಳಿಂದ ಕೇಂದ್ರ ಪುಕ್ಕಟೆ ಭಾಷಣ ಮಾಡುತ್ತಿದೆ ಹೊ ರತು ಅನುದಾನ ಬಿಡುಗಡೆ ಮಾಡುತ್ತಿಲ್ಲ.
    ಶಿಕ್ಷಣಕ್ಕೆ ಶೇ.18 ಜಿಎಸ್‌ಟಿ ವಿಧಿಸಲಾಗಿದೆ. ಇದು ಪ್ರಪಂಚದಲ್ಲಿ ಎಲ್ಲೂ ಇಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದ,ರೈತರ ಆತ್ಮಹತ್ಯೆ ಮೊದಲಾದ ವಿಷಯಗಳು ಚರ್ಚೆ ಆಗಬೇಕಿದೆ. ಬಿಜೆಪಿ ಬರ ಅಧ್ಯಯನದ ಬದಲು ಕೇಂದ್ರದಿಂದ ಅನು ದಾನ ಕೊಡಿಸಲಿ.
    ಮೀಡಿಯಾದವರೊಂದಿಗೆ ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ ಮಾತನಾಡಿಲ್ಲ. ಛಾಯ್ ಪೇ ಚರ್ಚಾ ನಿಮ್ಮೊಂದಿಗೆ ಆಗಲಿ. ಸ ಚಿ ವ ಪ್ರಿಯಾಂಕ್‌ಖರ್ಗೆ ಅವರ ಹೇಳಿಕೆ ಕುರಿತಂತೆ ನೀವು ಅವರನ್ನೇ ಕೇಳಬೇಕು. ಸಿದ್ದರಾಮಯ್ಯ ಅವರ ಹೇಳಿಕೆಗೆ ಶೇ.ನೂರು ನನ್ನ ಸಮ್ಮತಿ ಇದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts