More

    ಗ್ರಾಮೀಣ ವಿಕಾಸಕ್ಕೆ ಮೊದಲ ಆದ್ಯತೆ

    ಬಸವಕಲ್ಯಾಣ: ಗ್ರಾಮೀಣ ಭಾಗ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಸಮಗ್ರ ಪ್ರಗತಿ ಹೊಂದಲು ಸಾಧ್ಯ. ಇದಕ್ಕೆ ಪೂರಕವಾಗಿ ಹಳ್ಳಿಗಳ ವಿಕಾಸಕ್ಕೆ ತಾವು ಪ್ರಥಮಾದ್ಯತೆ ನೀಡಿರುವುದಾಗಿ ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್ ಹೇಳಿದರು.
    ಹುಮನಾಬಾದ್ ಕ್ಷೇತ್ರದ ಖೇರ್ಡಾ (ಬಿ) ಗ್ರಾಮದಲ್ಲಿ 16.50 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಟ್ಟಡ ಗುರುವಾರ ಸಂಜೆ ಉದ್ಘಾಟಿಸಿ ಮಾತನಾಡಿ, ಆಳುವ ಸರ್ಕಾರಗಳು ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ ಹಳ್ಳಿಗಳಿಗೆ ಸಕಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಬೇಕು. ಅಂದಾಗಲೇ ಪರಿವರ್ತನೆ ಕಾಣಬಹುದು ಎಂದರು.
    ಸಾನ್ನಿಧ್ಯ ವಹಿಸಿದ್ದ ಶ್ರಿ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ, ಸರ್ಕಾರದ ಬಹುತೇಕ ಯೋಜನೆಗಳು ಗ್ರಾಪಂ ಮೂಲಕವೇ ಜನರಿಗೆ ತಲುಪಲಿವೆ. ಗ್ರಾಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಹಳ್ಳಿ ಜನರ ಬದುಕು ಹಸನು ಮಾಡಬೇಕು ಎಂದು ಸಲಹೆ ನೀಡಿದರು.
    ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀಬಾಯಿ ಚನ್ನಗೊಂಡ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಯಶೋಧಾ ರಾಠೋಡ್, ಜಿಪಂ ಸದಸ್ಯ ರಾಜಶೇಖರ ಮೇತ್ರೆ, ತಾಪಂ ಸದಸ್ಯೆ ಲಲಿತಾಬಾಯಿ ರಾಠೋಡ್, ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರಸಿಂಗ್ ಠಾಕೂರ್, ಪಿಡಿಒ ಭೀಮಶಪ್ಪ ದಂಡಿನ, ತಾಪಂ ಮಾಜಿ ಅಧ್ಯಕ್ಷ ಜೈಭೀಮ ಕಾಂಬ್ಳೆ, ಪ್ರಮುಖರಾದ ಶಿಲ್ಪಾ ರಾಠೋಡ್, ನೀಲಕಂಠ ರಾಠೋಡ್, ಲಿಂಗರಾಜ ಪಾಟೀಲ್, ಶಿವಾನಂದ ವಾಲಿ, ಸೂರ್ಯಕಾಂತ ಪಾಟೀಲ್, ಶಿವಲಿಂಗಪ್ಪ ಸಾಹು, ಬಾಬು ಚನ್ನಗೊಂಡ, ರಾಚಣ್ಣ ಸಾಹು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts