More

    ಗ್ರಾಮೀಣ ಅಂಚೆ ನೌಕರರ ಕಡೆಗಣನೆ

    ಹೊಸನಗರ: ಗ್ರಾಮೀಣ ಅಂಚೆ ನೌಕರರ ಸಮಸ್ಯೆ ಕುರಿತು ಸರ್ಕಾರ ಗಮನ ನೀಡುತ್ತಿಲ್ಲ. ಸರ್ಕಾರ ಕೊಟ್ಟ ಭರವಸೆ ಮರೆತಿದ್ದು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಇಲ್ಲಿನ ಗ್ರಾಮೀಣ ಅಂಚೆ ನೌಕರರು ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಕೇಂದ್ರ ಸರ್ಕಾರವು 2016ರಲ್ಲಿ ಅಂಚೆ ನೌಕರರ ಸ್ಥಿತಿಗತಿ ಅರಿಯಲು ಕಮಲೇಶ್‌ಚಂದ್ರ ಸಮಿತಿ ರಚಿಸಿ ವರದಿ ಕೇಳಿತ್ತು. ಸಮಿತಿ ವರದಿ ನೀಡಿ 7 ವರ್ಷಗಳೇ ಕಳೆದರೂ ಸರ್ಕಾರ ನೌಕರರ ಹಿತಾಸಕ್ತಿ ಕಾಪಾಡಲು ಯಾವುದೇ ಕ್ರಮಕೈಗೊಂಡಿಲ್ಲ. ನೌಕರರು ತಮ್ಮ ಭರವಸೆ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ಧರಣಿ ನಡೆಸಿದಾದ ಮೇಲಧಿಕಾರಿಗಳು ಆಶ್ವಾಸನೆ ನೀಡಿದ್ದರು. ಆದರೆ ಇದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ನೌಕರರು ಆರೋಪಿಸಿದರು.
    ನಿತ್ಯ 8 ಗಂಟೆ ಕೆಲಸ ನೀಡುವುದು, ಪಿಂಚಣಿ ಸೇರಿದಂತೆ ಎಲ್ಲ ರೀತಿಯ ಸವಲತ್ತು ನೀಡುವುದು, ಸೇವಾ ಹಿರಿತನ ಆಧಾರದ ಮೇಲೆ ವಿಶೇಷ ಸೌಲಭ್ಯ ನೀಡುವುದು, ಗ್ರೂಪ್ ಇನ್ಸೂರೆನ್ಸ್, ಜಿಡಿಸಿ ಗ್ರಾಚುಟಿ ಮೊತ್ತವನ್ನು 5 ಲಕ್ಷ ರೂ.ವರೆಗೆ ಏರಿಸುವುದು ನಮ್ಮ ಪ್ರಮುಖ ಬೇಡಿಕೆಗಳಾಗಿದ್ದು ಕೂಡಲೆ ಪೂರೈಸಬೇಕೆಂದು ಆಗ್ರಹಿಸಿದರು. ಜಿಲ್ಲಾ ಸಂಘದ ಅಧ್ಯಕ್ಷ ವಡ್ಡಿನಬೈಲು ವೆಂಕಟೇಶ್, ಪದಾಧಿಕಾರಿಗಳಾದ ಉಮೇಶ್, ಸಚಿನ್, ಲಕ್ಷ್ಮೀನಾರಾಯಣ, ಮೇಘರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts