More

    ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಆದ್ಯತೆ

    ಮುಂಡರಗಿ: ಗ್ರಾಮೀಣ ಪ್ರದೇಶ ಸೇರಿ ನಗರಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ರೈತರ ಪರವಾದ ಯೋಜನೆ ಕೈಗೊಳ್ಳುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೆಚ್ಚು ಕಾಳಜಿ ವಹಿಸಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

    ತಾಲೂಕಿನ ಜಾಲವಾಡಗಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಎಸ್​ಸಿಪಿ ಯೋಜನೆಯಡಿ 56.38ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಮೊದಲಾದ ಮೂಲಸೌಲಭ್ಯ ಕಲ್ಪಿಸುವ ಮೂಲಕ ಶಿರಹಟ್ಟಿ ಮತಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು ತಿಳಿಸಿದರು.

    ನಂತರ ಲೋಕೋಪಯೋಗಿ ಇಲಾಖೆ 4 ಕೋಟಿ ರೂ. ವೆಚ್ಚದಲ್ಲಿ ಜಾಲವಾಡಗಿ-ಮುಂಡವಾಡ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ ಕಾಮಗಾರಿಗೆ 18 ಲಕ್ಷ ರೂ. ವೆಚ್ಚದಲ್ಲಿ ಜಾಲವಾಡಗಿ ತಾಂಡಾದಲ್ಲಿ ಸೇವಾಲಾಲ ಸಮುದಾಯ ಭವನ ನಿರ್ವಣ, ಬಾಗೇವಾಡಿ ಗ್ರಾಮದಲ್ಲಿ ಎಸ್​ಸಿಪಿ ಯೋಜನೆಯಡಿ 54.34 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ, ಬಿದರಹಳ್ಳಿ ಗ್ರಾಮದಲ್ಲಿ ಎಸ್​ಸಿಪಿ ಯೋಜನೆಯಡಿ 36.38 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿ ಹಾಗೂ 48.64 ಲಕ್ಷ ರೂ. ವೆಚ್ಚದಲ್ಲಿ ಕೊರ್ಲಹಳ್ಳಿ-ಹಮ್ಮಿಗಿ ರಸ್ತೆ ಸುಧಾರಣೆಗೆ ಶಾಸಕ ರಾಮಣ್ಣ ಲಮಾಣಿ ಅವರು ಭೂಮಿಪೂಜೆ ನೆರವೇರಿಸಿದರು.

    ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ಡಾ.ಕುಮಾರಸ್ವಾಮಿ ಹಿರೇಮಠ, ಪುಷ್ಪಾ ಪಾಟೀಲ, ಲಲಿತಾ ಎಲಿಗಾರ, ಡಿ.ಡಿ. ಮೋರನಾಳ, ಜ್ಯೋತಿ ಕಂತಿ, ಮಂಜುನಾಥ ಮುಂಡವಾಡ, ರಮೇಶ ಕವಲೂರ, ರಮೇಶ ಹುಳಕಣ್ಣವರ, ನಾಗನಗೌಡ ಪಾಟೀಲ, ವೀರನಗೌಡ ಪಾಟೀಲ, ರಮೇಶ ಲಮಾಣಿ, ಗಂಗಮ್ಮ ಈಟಿ, ಚಿನ್ನಪ್ಪ ವಡ್ಡಟ್ಟಿ, ಮಲ್ಲಿಕಾರ್ಜುನ ಹಣಜಿ, ನಾಗರಾಜ ಮತ್ತೂರ, ನೀಲಪ್ಪ ನಂದಗಾವಿ, ಗೋಣೆಪ್ಪ ಚೌಡಾಳ, ಹೊನ್ನಪ್ಪ ಹಡೆಗಾರ, ಇತರರು ಉಪಸ್ಥಿತರಿದ್ದರು.

    ಕೆರೆ ತುಂಬಿಸಿ ಕಾಲುವೆಗೆ ನೀರು ಹರಿಸಿ

    ಮುಂಡರಗಿ: ಬಹುದಿನಗಳ ಬೇಡಿಕೆಯಾದ ಜಾಲವಾಡಗಿ ಏತ ನೀರಾವರಿ ಯೋಜನೆ ಪ್ರಾರಂಭಿಸಬೇಕು. ಯೋಜನೆಯಿಂದ ಕೆರೆ ತುಂಬಿಸುವುದರ ಜೊತೆಗೆ ಈ ಭಾಗದ ಜಮೀನುಗಳಿಗೆ ಕಾಲುವೆ ಮೂಲಕ ನೀರಾವರಿ ಕಲ್ಪಿಸಬೇಕು ಎಂದು ಜಾಲವಾಡಗಿ ಗ್ರಾಮಸ್ಥರು ಶುಕ್ರವಾರ ಶಾಸಕ ರಾಮಣ್ಣ ಲಮಾಣಿ ಅವರನ್ನು ಒತ್ತಾಯಿಸಿದರು.

    ಜಾಲವಾಡಗಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ ತೆರಳಿದ್ದ ಶಾಸಕ ರಾಮಣ್ಣ ಲಮಾಣಿ ಅವರಿಗೆ ಗ್ರಾಮಸ್ಥರು, ‘ಜಾಲವಾಡಗಿ ಏತ ನೀರಾವರಿ ಯೋಜನೆ ಏಕೆ ಪ್ರಾರಂಭಿಸುತ್ತಿಲ್ಲ? ನಮ್ಮ ಬೇಡಿಕೆ ಯಾವಾಗ ಈಡೇರಿಸುತ್ತೀರಿ ಎನ್ನುವ ವಿಚಾರದಲ್ಲಿ ನಿಮಗೆ ವೋಟ್ ಹಾಕಿದ್ದೇವೆ. ಆದರೆ, ಈವರೆಗೂ ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಶಾಸಕರು ಕೂಡಲೇ ಸರ್ಕಾರ ಹಂತದಲ್ಲಿ ರ್ಚಚಿಸಿ ಯೋಜನೆಗೆ ಮಂಜೂರಾತಿ ಪಡೆದು ಆದಷ್ಟು ಬೇಗ ಪ್ರಾರಂಭಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಮಣ್ಣ ಲಮಾಣಿ, ಒಂದೂವರೆ ವರ್ಷ ಸಮ್ಮಿಶ್ರ ಸರ್ಕಾರ ಇದ್ದ ಕಾರಣ ನಮ್ಮ ಕೆಲಸಗಳು ನಡೆಯುತ್ತಿರಲಿಲ್ಲ. ಈಗ ನಮ್ಮ ಸರ್ಕಾರ ಬಂದಿದ್ದು 6 ತಿಂಗಳೊಳಗೆ ಮಂಜೂರಾತಿ ಪಡೆದು ಯೋಜನೆ ಪ್ರಾರಂಭಿಸುವ ಮೂಲಕ ಕೆರೆ ತುಂಬಿಸುವ ಕೆಲಸ ಮಾಡುತ್ತೇನೆ. ಹಾಗೇ ಕಾಲುವೆ ಮೂಲಕ ನೀರಾವರಿ ಕಲ್ಪಿಸುವ ಕುರಿತು ಸರ್ಕಾರದ ಹಂತದಲ್ಲಿ ರ್ಚಚಿಸುತ್ತೇನೆ ಎಂದು ಭರವಸೆ ನೀಡಿದರು.

    ಜಾಲವಾಡಗಿ ಗ್ರಾಮಸ್ಥರಾದ ಮಲ್ಲಿಕಾರ್ಜುನ ಹಣಜಿ, ಬಸವರಾಜಯ್ಯ ಡಂಬಳಮಠ, ವೀರನಗೌಡ ಪಾಟೀಲ, ನಾಗನಗೌಡ ಪಾಟೀಲ, ಕುಮಾರ ತಳವಾರ, ಹನುಮಂತ ಚೂರಿ, ರಮೇಶ ಲಮಾಣಿ, ದಿಲ್ಲೇಪ್ಪ ಹಡಗಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts