More

    ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಸಡಗರ

    ಹುಬ್ಬಳ್ಳಿ: ಅತಿವೃಷ್ಟಿ, ನೆರೆಯಿಂದ ಬೆಳೆ ನಷ್ಟ ಇತ್ಯಾದಿ ಸಮಸ್ಯೆಗಳ ಮಧ್ಯೆಯೂ ಗ್ರಾಮೀಣ ಭಾಗದಲ್ಲಿ ರೈತ ಸಮುದಾಯ ದೊಡ್ಡ ಹಬ್ಬ ದೀಪಾವಳಿಯ ಆಚರಣೆಯಲ್ಲಿ ಮುಳುಗಿದ್ದಾರೆ.

    ದೀಪಾವಳಿ ಅಮಾವಾಸ್ಯೆಯಂದು ಸಂಪ್ರದಾಯ ದಂತೆ ಮಹಾಲಕ್ಷ್ಮೀ ಪೂಜೆ ನೆರವೇರಿಸಿ, ಮನೆ ಮಂದಿಯೆಲ್ಲ ಸೇರಿ ದೇವಿಯ ಆರಾಧನೆ ಮಾಡಿದರು. ಹೊಸ ಬಟ್ಟೆ, ಸಿಹಿ ಕಡಬು, ಹೋಳಿಗೆ, ಶೇಂಗಾ ಹೋಳಿಗೆ, ಕರ್ಚಿಕಾಯಿ, ಚಕ್ಕುಲಿ, ಕೋಡಬಳೆ, ಬಜಿ ಹೀಗೆ ಯಾವುದೂ ತಪ್ಪದಂತೆ ತಮ್ಮ ಇತಿಮಿತಿಯಲ್ಲಿ ಹಬ್ಬ ಆಚರಿಸಿ ಸಂಭ್ರಮ ಪಟ್ಟರು. ಮುಂಗಾರಿನ ಬಹುತೇಕ ಬೆಳೆಗಳು ಅತಿವೃಷ್ಟಿಯಿಂದಾಗಿ ಕೈಕೊಟ್ಟಿವೆ. ಕೈಗೆ ಬಂದಿದ್ದ ತುತ್ತು ಬಾಯಿಗೆ ಬರದಂತಾಗಿ ಹೋಗಿವೆ. ಈ ಮಧ್ಯೆ ಹಿಂಗಾರು ಬಿತ್ತನೆ ಈಗಷ್ಟೇ ಮುಗಿಸಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿರುವ ರೈತರು ಮಹಾಲಕ್ಷ್ಮೀ ಪೂಜೆಯೊಂದಿಗೆ ಒಂದಿಷ್ಟು ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದಾರೆ.

    ದೀಪಾವಳಿ ಅಮಾವಾಸ್ಯೆಯ ಮರುದಿನ ಹಟ್ಟಿ ಹಬ್ಬ, ಗೋಪೂಜೆ ಇರುತ್ತದೆ. ಅದರಂತೆ ಸೋಮವಾರ ಹಟ್ಟಿ ಹಬ್ಬ ಆಚರಣೆಗೆ ಗ್ರಾಮೀಣರು ಸಜ್ಜಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts