More

    ಗ್ರಾಮಭೇಟಿ ಮಾಡಿ ಜನರ ಸಮಸ್ಯೆ ಪರಿಹರಿಸಿ

    ಕೋಲಾರ: ಗ್ರಾಮ ಭೇಟಿ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಕರೊನಾ ನಿಯಂತ್ರಣ ಜಾಗೃತಿ ಮೂಡಿಸಬೇಕು ಎಂದು ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಹಾಗೂ ಅರಾಭಿಕೊತ್ತನೂರು ಗ್ರಾಪಂ ಆಡಳಿತಾಧಿಕಾರಿ ರಾಮಕೃಷ್ಣಪ್ಪ ಸೂಚನೆ ನೀಡಿದರು.

    ತಾಲೂಕಿನ ಅರಾಭಿಕೊತ್ತನೂರು ಗ್ರಾಪಂನಲ್ಲಿ ಶುಕ್ರವಾರ ನಡೆದ ಕೋವಿಡ್ ಟಾಸ್ಕ್‌ಪೋರ್ಸ್ ಸಭೆಯಲ್ಲಿ ಮಾತನಾಡಿ, ಗ್ರಾಮಗಳಿಗೆ ಹೊರ ಜಿಲ್ಲೆ, ರಾಜ್ಯಗಳಿಂದ ಯಾರಾದರು ಬಂದರೆ ಮಾಹಿತಿ ನೀಡಬೇಕು. ಜನರ ಸಹಕಾರದಿಂದ ಮಾತ್ರ ಈ ರೋಗ ನಿಯಂತ್ರಿಸಲು ಸಾಧ್ಯ ಎಂದರು.

    ಕರೊನಾ ಹಿನ್ನೆಲೆಯಲ್ಲಿ ಜನರನ್ನು ಕಚೇರಿಗೆ ವಿನಾ ವಿನಾಕಾರಣ ಓಡಾಡಿಸಬೇಡಿ, ಜನರು ಬೀದಿಗೆ ಬರದಂತೆ ಮೂಲ ಸೌಲಭ್ಯ ಒದಗಿಸುವ ಜವಾಬ್ದಾರಿಯನ್ನು ಗ್ರಾಪಂ ಸಮರ್ಪಕವಾಗಿ ನಿರ್ವಹಿಸಬೇಕು. ಗ್ರಾಮದಲ್ಲಿ ಶೌಚಗೃಹ ಇಲ್ಲದಿರುವ ಕುಟುಂಬಗಳಿದ್ದಲ್ಲಿ ಹಾಗೂ ಇದ್ದರೂ ಬಳಸದವರ ಬಗ್ಗೆ ಗಮನ ಇರಲಿ ಎಂದರು.

    ಗ್ರಾಮ ಭೇಟಿ ಕಾರ್ಯಕ್ರಮ ಹಾಕಿಕೊಳ್ಳಿ ರಸ್ತೆಗಳಲ್ಲಿ ಸೌದೆ, ಹಸು ಕಟ್ಟಿಹಾಕುವುದು ಸೇರಿ ರಸ್ತೆ ಅತಿಕ್ರಮಣಗಾರರಿಗೆ ಎಚ್ಚರಿಕೆ ನೀಡಿ, ನಂತರ ನೋಟಿಸ್ ನೀಡಿ, ಬಗ್ಗದಿದ್ದರೆ ಪೊಲೀಸರಿಗೆ ದೂರು ನೀಡೋಣ. ಗ್ರಾಮ ಭೇಟಿ ಸಂದರ್ಭದಲ್ಲಿ ಜನರ ಸಮಸ್ಯೆ ಪಟ್ಟಿ ಮಾಡಿಕೊಂಡು ಪರಿಹರಿಸಿ ಎಂದರು.

    500 ರೂ. ದಂಡ: ಅರಾಭಿಕೊತ್ತನೂರು ಕಲ್ಲಿನ ಕ್ವಾರೆಯ ನೀರಿಗೆ ಬಿದ್ದು ಈವರೆಗೂ ಆರೇಳು ಮಂದಿ ಸಾವನ್ನಪ್ಪಿದ್ದಾರೆ, ಯಾರೂ ಈಜಲು ಕ್ವಾರೆ ಪ್ರವೇಶಿಸದಂತೆ ಕ್ರಮವಹಿಸಿ. ಧಿಕ್ಕರಿಸಿದರೆ ತಲಾ 500 ರೂ. ದಂಡ ವಿಧಿಸಿ. ಗ್ರಾಮದ ಮುಖ್ಯರಸ್ತೆಯಲ್ಲಿ ಅಶ್ವತ್ಥಕಟ್ಟೆ ಸಮೀಪ ಬೀಳುವ ಸ್ಥಿತಿಯಲ್ಲಿರುವ ಮರ ತೆರವುಗೊಳಿಸಿ ಎಂದು ಸೂಚಿಸಿದರು.

    ಪಿಡಿಒ ಅನುರಾಧಾ ಮಾತನಾಡಿ, ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಪಕ್ಕದ ದೇವಾಲಯ ಮುಂದಿನ ಸ್ಥಳದಲ್ಲಿ ಉದ್ಯಾನ ನಿರ್ಮಿಸಲು ನರೇಗಾದಡಿ ಅನುಮತಿ ಸಿಕ್ಕಿದೆ. ತಾಪಂ ಇಂಜಿನಿಯರ್ ಕಡೆಯಿಂದ ಅಂದಾಜುಪಟ್ಟಿ ಸಿಕ್ಕ ಕೂಡಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ಗ್ರಾಪಂ ಕಾರ್ಯದರ್ಶಿ ಎಸ್.ಕೆ.ಪ್ರಮೀಳಾ, ಹಿರಿಯ ಆರೋಗ್ಯ ಸಹಾಯಕಿಯರಾದ ಎಚ್.ವಿ.ವಾಣಿ, ಚಂದ್ರಿಕಾ, ಲೆಕ್ಕಸಹಾಯಕ ನಾಗರಾಜ್, ಗ್ರಾಮಲೆಕ್ಕಿಗರಾದ ಶೀಲ್ಪಾ, ಪ್ರವೀಣ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts