More

    ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ

    ಸವದತ್ತಿ: ತಾಲೂಕು ಪಂಚಾಯಿತಿಯಲ್ಲಿ ಶಾಸಕ ವಿಶ್ವಾಸ ವೈದ್ಯ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಗಳ ಹಿತರಕ್ಷಣೆ ಮತ್ತು ಯೋಗಕ್ಷೇಮ ಸಭೆ ಶನಿವಾರ ಜರುಗಿತು.
    ಮುಖಂಡ ಯಲ್ಲಪ್ಪ ಗೊರವನಕೊಳ್ಳ ಮಾತನಾಡಿ, ಬೆಡಸೂರ ಗ್ರಾಮದಲ್ಲಿ 20 ವರ್ಷಗಳಿಂದ ರಸ್ತೆ ಮೇಲೆ ಶವಸಂಸ್ಕಾರ ನಡೆಸಲಾಗುತ್ತಿದೆ. ತಾಲೂಕಿನ 14 ಗ್ರಾಮಗಳಿಗೆ ಸ್ಮಶಾನದ ಸಮಸ್ಯೆಯಿದ್ದು, ತಾಪಂ ಇಒ ಮತ್ತು ತಹಸೀಲ್ದಾರ್‌ಗೆ ತಿಳಿಸಿದರೂ ಪ್ರಯೋಜವಾಗಿಲ್ಲ ಎಂದು ದೂರಿದರು.
    ನಾಗಪ್ಪ ಬಡೆಪ್ಪನವರ, ಉದಯ ಚಿಕ್ಕಣ್ಣವರ ಹಾಗೂ ಮಹಾದೇವ ಬಡ್ಲಿ ಮಾತನಾಡಿ, ಯಲ್ಲಮ್ಮಗುಡ್ಡದ ಮಾತಂಗಿ ದೇವಸ್ಥಾನದ ಹತ್ತಿರ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಬೇಕು ಎಂದು ವಿನಂತಿಸಿದರು.
    ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಸ್ಮಶಾನವಿಲ್ಲದ ಗ್ರಾಮಗಳಿಗೆ ಸೂಕ್ತ ಜಾಗ ಕಲ್ಪಿಸಲಾಗುವುದು. ವಿವಿಧ ರೀತಿಯ ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ಒದಗಿಸಲಾಗುವುದು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಬಿಡುಗಡೆಗೆ ಶ್ರಮಿಸಿ ಸಮುದಾಯದ ಏಳಿಗೆಗಾಗಿ ಶ್ರಮಿಸಲಾಗುವುದು ಎಂದರು.
    ಸಭೆ ಆರಂಭಕ್ಕೂ ಮುನ್ನ ಶಾಸಕರಿಂದ ಸಂವಿಧಾನ ಪೀಠಿಕೆ ಅನಾವರಣಗೊಳಿಸಲಾಯಿತು. ಇಒ ಯಶವಂತಕುಮಾರ, ತಹಸೀಲ್ದಾರ್ ಜಿ.ಬಿ. ಜಕ್ಕನಗೌಡ್ರ, ಪಿ.ಐ.ಕರುಣೇಶಗೌಡ, ಶ್ರೀಶೈಲ ಅಕ್ಕಿ, ಮೈತ್ರಾದೇವಿ ವಸದ, ವಕೀಲ ಬಸವರಾಜ ತಳವಾರ, ಆರ್.ಆರ್. ಕುಲಕರ್ಣಿ, ಎಚ್.ಎಂ. ಮಲ್ಲನಗೌಡ, ಎಲ್.ಎಸ್.ನಾಯಕ, ವೆಂಕಟೇಶ ತಳವಾರ, ಕೀರಪ್ಪ ಭೋವಿ, ರವಿ ಬುಳ್ಳನ್ನವರ, ಪ್ರಕಾಶ ಸಕ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts