More

    ಗ್ರಾಪಂ ಚುನಾವಣೆಯಲ್ಲಿ ಎರಡನೇ ಬಾರಿ ಗೆದ್ದ ಪತಿ, ಪತ್ನಿ

    ಕಾರವಾರ: ತಾಲೂಕಿನ ಚಿತ್ತಾಕುಲಾ ಗ್ರಾಪಂನಲ್ಲಿ ಸೂರಜ್ ದೇಸಾಯಿ ಹಾಗೂ ಸ್ವಾತಿ ದೇಸಾಯಿ ದಂಪತಿ ಗೆಲುವು ಸಾಧಿಸಿದ್ದಾರೆ. ಕಿಲ್ಲೆ ವಾರ್ಡ್​ನಿಂದ ಸೂರಜ್ ದೇಸಾಯಿ ಗೆದ್ದಿದ್ದಾರೆ. ಅವರ ಪತ್ನಿ ಸ್ವಾತಿ ದೇಸಾಯಿ ಎರಡು ಕಡೆ ಸ್ಪರ್ಧಿಸಿದ್ದು, ಒಂದು ಕಡೆ ಗೆದ್ದರೆ. ಇನ್ನೊಂದು ಕಡೆ ಸೋಲು ಕಂಡಿದ್ದಾರೆ. ಕಳೆದ ಅವಧಿಯಲ್ಲೂ ಇವರಿಬ್ಬರೂ ಗ್ರಾಪಂ ಸದಸ್ಯರಾಗಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ರಾಜು ತಾಂಡೇಲ ಎರಡು ಕಡೆ ಸ್ಪರ್ಧಿಸಿದ್ದರು. ಸೀಬರ್ಡ್ ಕಾಲನಿ ವಾರ್ಡ್​ನಲ್ಲಿ ಗೆದ್ದಿದ್ದು, ಇನ್ನೊಂದರಲ್ಲಿ ಸೂರಜ್ ದೇಸಾಯಿ ಅವರ ವಿರುದ್ಧ ಸೋತಿದ್ದಾರೆ.

    ಕುಮಟಾ ತಾಲೂಕಿನ ದಿವಗಿ ಗ್ರಾಪಂನಲ್ಲೂ ಪತಿ ಪತ್ನಿ ಇಬ್ಬರೂ ಗೆಲುವು ಸಾಧಿಸಿದ್ದಾರೆ. ದಿವಗಿ ಪೂರ್ವಭಾಗದ ಹಿಂದುಳಿದ ಬ ವರ್ಗ ಮೀಸಲಾತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲೀನಾ ಫ್ರೆಂಕಿ ಫರ್ನಾಂಡಿಸ್, ಮಣಕಿ (ಹರಕಡೆ) ಸಾಮಾನ್ಯ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಫ್ರೆಂಕಿ ಫರ್ನಾಂಡಿಸ್ ಒಂದೇ ಪಂಚಾಯಿತಿಯ ಬೇರೆ ಬೇರೆ ಕ್ಷೇತ್ರದಲ್ಲಿ ನಿಂತು ವಿಜೇತರಾದ ದಂಪತಿ.

    ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ರೇಣುಕಾ ಆಯ್ಕೆ: ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯಿತಿ ವ್ಯಾಪ್ತಿಯ ಹಳವಳ್ಳಿ ಕ್ಷೇತ್ರದಲ್ಲಿ ರೇಣುಕಾ ಮಂಜುನಾಥ ಸಿದ್ದಿ ಮತ್ತು ಅನುಪಮಾ ನಾಗೇಶ ಸಿದ್ದಿ ಇಬ್ಬರು ತಲಾ 149 ಮತಗಳನ್ನು ಪಡೆದಿದ್ದು, ಕುಮಟಾ ಉಪ ವಿಭಾಗಾಧಿಕಾರಿ ಎಂ. ಅಜೀತ ರೈ ಮತ್ತು ತಹಸೀಲ್ದಾರ್ ಉದಯ ಕುಂಬಾರ ಎದುರಲ್ಲಿ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ರೇಣುಕಾ ಮಂಜುನಾಥ ಸಿದ್ದಿ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts