More

    ಗ್ರಾಪಂ ಉಪಾಧ್ಯಕ್ಷೆ ಅನುರಾಧ ಯಡ್ಡಳ್ಳಿ ಅನರ್ಹ


    ಯಾದಗಿರಿ: ತಾಲೂಕಿನ ಬಂದಳ್ಳಿ ಗ್ರಾಪಂನಲ್ಲಿ ಸರಕಾರದ ವಿವಿಧ ಯೋಜನೆಯಡಿ ನಕಲಿ ಬಿಲ್ ಸೃಷ್ಠಿಸಿ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಂಚಾಯಿತಿ ಹಾಲಿ ಉಪಾಧ್ಯಕ್ಷೆ ಅನುರಾಧ ವೀರಭದ್ರಪ್ಪ ಯಡ್ಡಳ್ಳಿ ಅವರನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.


    ಕಳೆದ 2020ರಲ್ಲಿ ಅನುರಾಧ ವೀರಭದ್ರಪ್ಪ ಯಡ್ಡಳ್ಳಿ ಬಂದಳ್ಳೀ ಗ್ರಾಪಂ ಅಧ್ಯಕ್ಷರಾಗಿದ್ದ ವೇಳೆ 14ನೇ 14ನೇ ಹಣಕಾಸು ಯೋಜನೆಯಡಿಯಲ್ಲಿ ಕುಡಿಯುವ ನೀರು, ಮೋಟಾರು ದುರಸ್ಥಿ, ವಿವಿಧ ಸಾಮಗ್ರಿ ಕೈಪಂಪ್, ಮಾಸ್ಕ್, ಸ್ಯಾನಿಟೈಸರ್, ಸೋಲಾರ್ ಖರೀದಿ ವಿಕಲಚೇತನ ಉಪಕರಣ ಮತ್ತು ಚರಂಡಿ ಹೂಳೆತ್ತುವ ಕಾಮಗಾರಿಯಲ್ಲಿ 22.34 ಲಕ್ಷ ರೂ.ಗಳ ಕ್ರಿಯಾ ಯೋಜನೆ ನಿಗದಿಪಡಿಸಲಾಗಿತ್ತು.

    ಈ ಮೊತ್ತದಲ್ಲಿ ಯಾವುದೇ ಸಾಮಗ್ರಿ ಖರೀದಿಸದೆ ಹಣ ಡ್ರಾ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಠಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಒಟ್ಟಾರೆ ಅಧ್ಯಕ್ಷರು ಹಾಗೂ ಪಿಡಿಒ ಒಟ್ಟು 27.22 ಲಕ್ಷ ರೂ.ಅನುದಾನ ದುರಪಯೋಗ ಪಡಿಸಿಕೊಂಡು ಅವ್ಯವಹಾರ ಎಸಗಿದ್ದಾರೆ ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಕಾರ್ಯದಶರ್ಿ ಪರಶುರಾಮ್ ಚವ್ಹಾಣ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು.

    ಅದರಂತೆ ಜಿಪಂ ಸಿಇಒ ತನಿಖಾ ತಂಡ ರಚನೆ ಮಾಡಿ, ಪಂಚಾಯಿತಿಯಲ್ಲಿ ನಡೆದ ಅವ್ಯವಹಾರದ ಸಮಗ್ರ ವರದಿ ತರಿಸಿಕೊಂಡು ಆರ್ಸಿ ಮೂಲಕ ಸರಕಾರಕ್ಕೆ ಸಲ್ಲಿಸಿದ್ದರು. ವರದಿಯನ್ನು ಪರಿಶೀಲಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಇದೊಂದು ಗಂಭೀರ ಅವ್ಯವಹಾರ ಎಂದು ಪರಿಗಣಿಸಿದೆ. ಅಲ್ಲದೆ, ಹಿಂದಿದ್ದ ಪಿಡಿಒ ಗಿರಿಮಲ್ಲಣ್ಣರನ್ನು ಈಗಾಗಲೇ ಅಮಾನತ್ತುಗೊಳಿಸಿದ್ದು, ಉಪಾಧ್ಯಕ್ಷೆಯಾಗಿರುವ ಅನುರಾಧ ಯಡ್ಡಳ್ಳಿರನ್ನು ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ಅನ್ವಯ ಸದಸ್ಯತ್ವದಿಂದ ಅನರ್ಹಗೊಳಿಸಿ ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧೆಸದಂತೆ ಕಳೆದ ನ.23ರಂದು ಅದೇಶಿಸಿದೆ.
    ಅಲ್ಲದೆ, ತಪ್ಪಿತಸ್ಥರಿಂದ ದುರ್ಬಳಕೆ ಮಾಡಿಕೊಳ್ಳಲಾದ 22.34 ಲಕ್ಷ ರೂ. ವಸೂಲಿ ಮಾಡುವಂತೆ ಯಾದಗಿರಿ ತಾಪಂ ಇಒಗೆ ಆದೇಶದಲ್ಲಿ ನಿದರ್ೇಶನ ನೀಡಿದ್ದಾರೆ.

    ಬಂದಳ್ಳಿ ಗ್ರಾಪಂನಲ್ಲಿ ವಿವಿಧ ಯೋಜನೆಗಳಡಿ ದುರ್ಬಳಕೆ ಮಾಡಿಕೊಂಡ ಹಣವನ್ನು ವಸೂಲಿ ಮಾಡಲು ತಾಪಂ ಇಒಗೆ ನಿದರ್ೇಶನ ನೀಡಲಾಗುವುದು ಎಂದು ಜಿಪಂ ಸಿಇಒ ಗರೀಮಾ ಪನ್ವಾರ ತಿಳಿಸಿದ್ದಾರೆ

    ಬಂದಳ್ಳಿ ಗ್ರಾಪಂನಲ್ಲಿ ದುರ್ಬಳಕೆಯಾದ ಸರಕಾರದ ಅನುದಾನವನ್ನು ಜಿಪಂ ಸಿಇಒ ಅವರು ಕೂಡಲೇ ತಪ್ಪಿತಸ್ಥರಿಂದ ವಸೂಲಿ ಮಾಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಪರಶುರಾಮ್ ಚವ್ಹಾಣ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts