More

    ಗ್ರಾಪಂ ಅಧ್ಯಕ್ಷರ ವಿರುದ್ಧ ಸಿಡಿದೆದ್ದ ಸದಸ್ಯರು; ಪ್ರತಿಭಟನೆ

    ರಿಪ್ಪನ್‌ಪೇಟೆ: ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗ್ರಾಮಾಡಳಿತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರು ಸೋಮವಾರ ಪಂಚಾಯಿತಿ ಕಚೇರಿ ಎದುರಿನಲ್ಲಿ ಮಹಾತ್ಮಗಾಂಧಿ ಭಾವಚಿತ್ರದೊಂದಿಗೆ ಪ್ರತಿಭಟನೆ ನಡೆಸಿದರು.
    ಸದಸ್ಯ ಗಣಪತಿ ಗವಟೂರು ಮಾತನಾಡಿ, ಡಿ. 17ರ ಶನಿವಾರ ಗವಟೂರು-ಕುಕ್ಕಳಲೆ ಸಂಪರ್ಕ ರಸ್ತೆಯ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದರು. ಸಾರ್ವಜನಿಕರ ತೆರಿಗೆ ಹಣದಲ್ಲಿ ಸರ್ಕಾರ ರಸ್ತೆ ಮರು ಡಾಂಬರೀಕರಣಕ್ಕೆ 39.36 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ. ಆದರೆ ಗವಟೂರು 2ನೇ ವಾರ್ಡ್‌ನಲ್ಲಿ ಅಧ್ಯಕ್ಷರ ಸಹಿತ ಒಟ್ಟು 3 ಜನ ಚುನಾಯಿತ ಪ್ರತಿನಿಧಿಗಳಿದ್ದು ಇದೇ ವಾರ್ಡ್‌ನ ಗ್ರಾಪಂ ಅಧ್ಯಕ್ಷೆ ಮಂಜುಳಾ ಅವರು ಗ್ರಾಮ ಪಂಚಾಯಿತಿ ರಿಪ್ಪನ್‌ಪೇಟೆ ಸ್ವಾಗತ ಪ್ಲೆಕ್ಸ್‌ನಲ್ಲಿ ತಮ್ಮ ಭಾವಚಿತ್ರದೊಂದಿಗೆ ಓರ್ವ ಸದಸ್ಯರ ಫೋಟೋವನ್ನು ಹಾಕುವ ಮೂಲಕ ಇನ್ನೋರ್ವ ಸದಸ್ಯನನ್ನು ಬೇರೆ ಪಕ್ಷದವನೆಂದು ಕೈಬಿಟ್ಟು ಕಡೆಗಣಿಸಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಇವರ ದುವರ್ತನೆ ಜನರಿಗೆ ಮಾಡಿರುವ ಅವಮಾನವಾಗಿದೆ. ಅಧಿಕಾರ ಮದದಿಂದ ಪಕ್ಷಪಾತಿಯಾದ ಇವರು ಸರ್ವಾಧಿಕಾರ ಧೋರಣೆ ಅನುಸರಿಸಿರುವ ನಡೆಯನ್ನು ಖಂಡಿಸುತ್ತೇವೆ ಹಾಗೂ ಜನಪ್ರತಿನಿಧಿಗಳೆಲ್ಲರನ್ನು ಸಮಾನವಾಗಿ ಕಾಣುವಂತೆ ಪ್ರತಿಭಟಿಸುತ್ತಿದ್ದೇವೆ ಎಂದು ಹೇಳಿದರು.
    ಸಣ್ಣಪುಟ್ಟ ಲೋಪದೋಷಗಳಾಗಿದ್ದಲ್ಲಿ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವುದಾಗಿ ಪಿಡಿಒ ಚಂದ್ರಶೇಖರ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸದಸ್ಯರು ಪ್ರತಿಭಟನೆ ಮೊಟಕುಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts