More

    ಗೋವಾ ಕನ್ನಡಿಗರ ರಕ್ಷಣೆಗೆ ಆಗ್ರಹ

    ಹುಬ್ಬಳ್ಳಿ; ಗೋವಾ ಸರ್ಕಾರದ ಮಾನವ ವಿರೋಧಿ ನಿಲುವಿನಿಂದಾಗಿ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುತ್ತ ಬಂದಿರುವ ಗೋವಾ ಕನ್ನಡಿಗರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಭಾಪತಿಗೆ ಪತ್ರ ಬರೆದಿದ್ದಾರೆ. ವಲಸಿಗರನ್ನು ಹೊರದಬ್ಬಿ ಮೂಲ ಗೋವನ್ನರನ್ನು ಕಾಪಾಡಲೆಂದು ಹುಟ್ಟಿಕೊಂಡಿರುವ ಪೋಗೋ ಆಂದೋಲನಕ್ಕೆ ಕನ್ನಡಿಗರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಉದ್ಯೋಗ ನಿಮಿತ್ತ ನಾಲ್ಕಾರು ದಶಕಗಳಿಂದ ಅಲ್ಲೇ ಉಳಿದು ತವರೂರಿನ ಸಂಪರ್ಕ ಕಡಿದುಕೊಂಡವರಿಗಂತೂ ಆಕಾಶವೆ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದ ನಂತರ ಅದೇ ಮಾದರಿಯಲ್ಲಿ ಗೋವಾ ರಕ್ಷಣೆಗೆ ಪೋಗೋ ಹೆಸರಿನಲ್ಲಿ 1961ರ ಪೂರ್ವದಲ್ಲಿದ್ದವರು ಮಾತ್ರ ಗೋವನ್ನರು, ಉಳಿದವರೆಲ್ಲ ವಲಸಿಗರೆಂದು ಘೋಷಿಸಬೇಕು, ಸರ್ಕಾರಿ ಹುದ್ದೆಗಳನ್ನು ಗೋವನ್ನರಿಗೆ ಮೀಸಲಿಡಬೇಕು, ಖಾಸಗಿ ಉದ್ಯೋಗಗಳಲ್ಲಿ ಸಿಂಹಪಾಲು ಸ್ಥಳೀಯರಿಗೆ ಇರಬೇಕು. ವಲಸಿಗರಿಗೆ ಮತದಾನ ಚೀಟಿ, ಆಸ್ತಿ, ವಾಹನ ನೋಂದಣಿಗೆ ಅವಕಾಶ ಕೊಡಬಾರದು, ಪ್ರವಾಸಿಗರೆಂದು ಪರಿಗಣಿಸಿ 6 ತಿಂಗಳಿಗಿಂತ ಹೆಚ್ಚು ಕಾಲ ಇರಲು ಬಿಡಬಾರದು ಎನ್ನುವುದು ಪೋಗೋದ ಪ್ರಮುಖ ಬೇಡಿಕೆಯಾಗಿದೆ. ಸದ್ಯ ಗೋವಾದಲ್ಲಿ 4 ಲಕ್ಷ ಕನ್ನಡಿಗರಿದ್ದಾರೆ. ಗೋವಾ ವಿಮೋಚನೆ ಹೋರಾಟದಲ್ಲಿ ಪಾಲ್ಗೊಂಡವರೂ ಸಹ ಇದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಗೋವಾದಲ್ಲಿರುವ ಕನ್ನಡಿಗರ ರಕ್ಷಣೆ ಮಾಡಬೇಕೆಂದು ಹೊರಟ್ಟಿ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts