More

    ಗೋಕರ್ಣದಿಂದ ಸ್ವದೇಶದತ್ತ ರಷ್ಯನ್ ಪ್ರವಾಸಿಗರು

    ಗೋಕರ್ಣ: ಹಲವು ತಿಂಗಳಿನಿಂದ ಇಲ್ಲಿನ ವಿವಿಧೆಡೆ ವಾಸವಾಗಿದ್ದ 36 ರಷ್ಯನ್ ಪ್ರವಾಸಿಗರು ಸ್ವದೇಶಕ್ಕೆ ತೆರಳಲಿದ್ದಾರೆ.

    ಬುಧವಾರ ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ ಮತ್ತು ಸಿಬ್ಬಂದಿ ಆರೋಗ್ಯ ಪರೀಕ್ಷೆ ನಡೆಸಿದ್ದು, ಇವರೆಲ್ಲ ಪ್ರವಾಸಕ್ಕೆ ಯೋಗ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಗುರುವಾರ ಬೆಳಗ್ಗೆ 5ಗಂಟೆಗೆ ಗೋಕರ್ಣದಿಂದ ಒಂದು ಬಸ್ ಮತ್ತು ಮೂರು ಖಾಸಗಿ ವಾಹನದಲ್ಲಿ ಗೋವಾಕ್ಕೆ ಮತ್ತು ಅಲ್ಲಿಂದ ದೆಹಲಿಗೆ ಹೋಗಿ ವಿಶೇಷ ವಿಮಾನದಲ್ಲಿ ರಷ್ಯಾ ತಲುಪಲಿದ್ದಾರೆ. ಲಾಕ್​ಡೌನ್​ನಿಂದಾಗಿ ಒಟ್ಟು 180 ರಷ್ಯನ್​ರು ಗೋಕರ್ಣದಲ್ಲಿ ಸಿಕ್ಕಿಕೊಂಡಿದ್ದರು. ಪ್ರವಾಸೋದ್ಯಮ ಇಲಾಖೆ ಸಹಾಯದಿಂದ ಇವರನ್ನೂ ಸೇರಿ ಈತನಕ ಒಟ್ಟು 120 ರಷ್ಯನ್ ಯಾತ್ರಿಕರು ಇಲ್ಲಿಂದ ತೆರಳಿದ್ದು, 60 ರಷ್ಯನ್ ಪ್ರಜೆಗಳು ಉಳಿದಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಸಮನ್ವಯಕಾರ ನಿತ್ಯಾನಂದ ಶೆಟ್ಟಿ ತಿಳಿಸಿದ್ದಾರೆ. ಇವರ ಹೊರತಾಗಿ ಪೊಲೀಸ್ ದಾಖಲೆ ಪ್ರಕಾರ, 170 ಯುರೋಪಿಯನ್ ಪ್ರವಾಸಿಗರು ಗೋಕರ್ಣದಲ್ಲಿದ್ದರು. ಇವರಲ್ಲಿ ಕೆಲವೇ ಜನ ಯುರೋಪ್​ಗೆ ವಾಪಸಾಗಿದ್ದಾರೆ. ನೂರಕ್ಕೂ ಹೆಚ್ಚಿನ ಯುರೋಪಿಯನ್ನರು ಇನ್ನೂ ಇಲ್ಲಿಯೇ ತಂಗಿದ್ದಾರೆ. ಇವರಿಗೆ ತಮ್ಮ ದೇಶಕ್ಕಿಂತ ಭಾರತವೇ ಸುರಕ್ಷಿತ ಎಂಬ ಭಾವನೆ ಇರುವುದರಿಂದ ಇನ್ನೂ ಕೆಲ ದಿನ ಇಲ್ಲಿಯೇ ಉಳಿಯುವ ಸಾಧ್ಯತೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts