More

    ಗೊಬ್ಬೂರ ಗ್ರಾಪಂಗೆ ಉರ್ಮಿಳಾ ಸಾರಥಿ

    ಅಫಜಲಪುರ: ಗೊಬ್ಬೂರ (ಬಿ) ಗ್ರಾಮ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಉರ್ಮಿಳಾ ದೇವತ್ಕಲ್ ಹಾಗೂ ಪ್ರಕಾಶ ಅಂತರಗAಗಿ ಶುಕ್ರವಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸುರೇಂದ್ರ ಹೊನ್ನಪ್ಪಗೋಳ ತಿಳಿಸಿದರು.

    ಒಟ್ಟು ೧೮ ಸದಸ್ಯರ ಬಲವಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಗಾದಿಗೆ ಉರ್ಮಿಳಾ, ಪ್ರೀತಿ ರಾಠೋಡ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ, ರಾಜೇಶ್ವರಿ ಸ್ಪರ್ಧಿಸಿದ್ದರು. ಉರ್ಮಿಳಾ- ಪ್ರಕಾಶ ತಲಾ ೧೦ ವೋಟ್ ಪಡೆದು ಗೆಲುವು ಸಾಧಿಸಿದರೆ, ಪ್ರೀತಿ- ರಾಜೇಶ್ವರಿ ತಲಾ ೮ ಮತ ಪಡೆದು ಪರಾಭವಗೊಂಡರು. ಡಿವೈಎಸ್‌ಪಿ ಗೋಪಿ, ಸಿಪಿಐ ರಾಜಶೇಖರ ಬಡದೇಸಾರ, ಪಿಎಸ್‌ಐ ರಾಜಶೇಖರ ರಾಠೋಡ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.

    ಗೊಬ್ಬೂರ (ಬಿ) ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಒಂದು ರೀತಿಯಲ್ಲಿ ಸಹೋದರರ ಫೈಟ್ ಆಗಿ ಮಾರ್ಪಟ್ಟಿತ್ತು. ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಹಾಗೂ ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್ ಸ್ಥಳದಲ್ಲೇ ಠಿಕಾಣಿ ಹೂಡಿದ್ದರು. ಕೊನೆಗೆ ನಿತೀನ್ ಬೆಂಬಲಿಗರು ಮೇಲುಗೈ ಸಾಧಿಸಿದರು. ಇಬ್ಬರು ನಾಯಕರು ಬೆಂಬಲಿಗರು ಅಪಾರ ಪ್ರಮಾಣದಲ್ಲಿ ಜಮಾಯಿಸಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ವಾತಾವರಣ ತಿಳಿಗೊಳಿಸಿದರು.

    ಸಂಭ್ರಮಾಚರಣೆ: ಗೊಬ್ಬೂರ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರಾಗಿ ನಿತೀನ್ ಬೆಂಬಲಿಗರು ಆಯ್ಕೆಯಾಗುತ್ತಿದ್ದಂತೆ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು. ಪ್ರಭುಲಿಂಗ ದೇವತ್ಕಲï, ಸಿದ್ದುಗೌಡ ಪಾಟೀಲï, ಫೀರ್‌ಅಹ್ಮದ್ ಜಮಾದಾರ, ಬೀರಣ್ಣ ಪೂಜಾರಿ, ಬಸು ಪಡಶೆಟ್ಟಿ, ಬಸವರಾಜ ದೇವತ್ಕಲï, ರಾಜು ಪಡಶೆಟ್ಟಿ, ಸುಭಾಷ ರಾಠೋಡ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts