More

    ಗೆಳೆಯರ ಆಪ್ತತೆ, ಗುರುಗಳ ದರ್ಶನಾಶೀರ್ವಾದ

    ಹುಬ್ಬಳ್ಳಿ: ಬಹಳ ದಿನಗಳ ನಂತರ ಭೇಟಿಯಾದ ಹಳೆಯ ಗೆಳೆಯರ ಆಪ್ತತೆ, ಕಲಿಸಿದ ಗುರುಗಳ ದರ್ಶನಾಶೀರ್ವಾದ, ಒಂದಿಷ್ಟು ಕುಶಲೋಪರಿ…

    ಇಲ್ಲಿನ ಹಳೇ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್​ನ 1988-89ನೇ ಸಾಲಿನ ಎಸ್​ಎಸ್​ಎಲ್​ಸಿ ಹಳೆಯ ವಿದ್ಯಾರ್ಥಿಗಳ ‘ಗುರುವಂದನೆ ’ ಕಾರ್ಯಕ್ರಮದಲ್ಲಿ ಕಂಡು ಬಂದ ಸಂತಸದ ಚಿತ್ರಣಗಳಿವು.

    ಬಾಲ್ಯದಲ್ಲಿ ತಾವು ಮಾಡುತ್ತಿದ್ದ ಕೀಟಲೆ, ಖುಷಿ, ದುಃಖ, ಶಿಕ್ಷಕರ ಬೋಧನೆ, ಕ್ರೀಡಾ ಜಗತ್ತು…ಹೀಗೆ ಹತ್ತು ಹಲವು ಕ್ಷಣಗಳನ್ನು ಪರಸ್ಪರ ಹಂಚಿಕೊಂಡರು. ವಿದ್ಯಾರ್ಥಿಯಾಗಿದ್ದಾಗ ಶಿಕ್ಷಕರು ಕಲಿಸಿದ ಜೀವನ ಪಾಠವಂತೂ ಬದುಕಿನಲ್ಲಿ ಮರೆಯಲು ಸಾಧ್ಯವಿಲ್ಲವೆಂದು ಕೊಂಡಾಡಿದರು.

    ನಂತರ ನಡೆದ ಕಾರ್ಯಕ್ರಮದಲ್ಲಿ ತಮಗೆ ಕಲಿಸಿದ ಅಂದಿನ ಶಿಕ್ಷಕರಾದ ಕೆ.ಜೆ. ಮೊಕಾಶಿ, ಎಸ್.ಜಿ. ಯಾದಪ್ಪನವರ, ಕೆ.ವಿ. ರಾಯಚೂರ, ಜಿ.ಬಿ. ಭುಜಂಗ, ಜೆ.ಎಚ್. ಮುದಕವಿ, ಜಿ.ಎ. ಇನಾಂದಾರ, ಎಸ್.ಎಚ್. ಕೊಪ್ಪರ, ಎಂ.ಬಿ. ನಾತು, ಎ.ಪಿ. ನಾಯ್ಕ, ಜಿ.ಎನ್. ಇನಾಮತಿ, ಎಸ್.ವಿ. ಇಟಗಿ, ಎಂ. ಕಲ್ಲಿಂಗ್ಪ, ಸಿ.ಆರ್. ನರಳಿ, ಎಂ.ಎ. ನಾಯ್ಕ, ಆರ್.ಜಿ. ಕಾರ್ಥೇಕರ, ಯು.ಜಿ. ಕನ್ನಿಕರ, ಯು.ಸಿ. ದೇಶಪಾಂಡೆ, ಎಸ್.ಕೆ. ಹರ್ಲಾಪುರ, ಎಚ್.ಎಸ್. ಕೆಂಪೆಲ್ಲರ ಅವರನ್ನು ಸನ್ಮಾನಿಸಲಾಯಿತು. ಈ ಸಂಭ್ರಮಕ್ಕೆ ಎನ್​ಇಎಸ್ ಗೌರವ ಕಾರ್ಯದರ್ಶಿ ಶ್ರೀಕಾಂತ ದೇಸಾಯಿ ಸಾಕ್ಷಿಯಾದರು.

    ಹಳೆಯ ವಿದ್ಯಾರ್ಥಿಗಳಾದ ಎ.ಬಿ. ಕುಲಕರ್ಣಿ, ಪಿ.ಜಿ. ಇನಾಂದಾರ, ವಿಶ್ವನಾಥ ಜೋಶಿ, ಗೊಂಡಕರ, ವಿ.ಬಿ. ದೇಸಾಯಿ, ಪ್ರಶಾಂತ ಲೋಕಾಪುರ, ಸುನೀತಾ ಪಾಟೀಲ, ಜ್ಯೋತಿ ದೇಸಾಯಿ, ಗೀತಾ ಬುರೆ, ಉಪೋರೆ ಪರಶುರಾಮ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts