More

    ಗೃಹಜ್ಯೋತಿ ಸೌಲಭ್ಯ ಪಡೆದುಕೊಳ್ಳಬೇಕು

    ಹುಕ್ಕೇರಿ:ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಲ್ಲಿ 99,960 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದು, 53,009 ಗ್ರಾಹಕರು ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ನೋಂದಾಯಿತರಾಗಿದ್ದಾರೆ ಎಂದು ಸಂಘದ ನಿರ್ದೇಶಕ ಪೃಥ್ವಿ ರಮೇಶ ಕತ್ತಿ ಹೇಳಿದರು.


    ಪಟ್ಟಣದ ಸಂಘದ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಗ್ರಾಹಕರನ್ನು ಸಂಪರ್ಕಿಸಿ ಗೃಹಜ್ಯೋತಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. 2023ರ ಜುಲೈ ತಿಂಗಳವರೆಗಿನ ವಿದ್ಯುತ್ ಬಿಲ್ ತುಂಬಿರುವ ಗ್ರಾಹಕರು ಗೃಹಜ್ಯೋತಿ ಯೋಜನೆಗೆ ಅರ್ಹರು. 15743 ಗ್ರಾಹಕರು ವಿದ್ಯುತ್ ಬಿಲ್ ಸಂದಾಯ ಮಾಡಿದ್ದು, ಇತರರು 30 ಸೆಪ್ಟೆಂಬರ್ 2023ರೊಳಗಾಗಿ ಸಂಪೂರ್ಣ ವಿದ್ಯುತ್ ಬೇಬಾಕಿ ಬಿಲ್ ತುಂಬಿದರೆ ಮಾತ್ರ ಈ ಯೋಜನೆಗೆ ಅರ್ಹರಾಗಲಿದ್ದಾರೆ. ಜು.27ರೊಳಗಾಗಿ ಅರ್ಜಿ ಸಲ್ಲಿಸಿ ಆಗಸ್ಟ್ ತಿಂಗಳಿನಲ್ಲಿ ಯೋಜನೆಯ ಸೌಲಭ್ಯ ಪಡೆಯಬೇಕು ಎಂದರು.


    ಅಧ್ಯಕ್ಷ ಕಲಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಕೆ.ಎಲ್. ಶ್ರೀನಿವಾಸ ಮತ್ತು ನಿರ್ದೇಶಕ ಅಶೋಕ ಚಂದಪ್ಪಗೋಳ ಮಾತನಾಡಿ, ಸಂಘದ ಮುಖ್ಯ ಕಚೇರಿ ಮತ್ತು 9 ಶಾಖಾ ಕಚೇರಿಗಳಲ್ಲಿ ಆನ್‌ಲೈನ್ ಮೂಲಕ ಗೃಹಜ್ಯೋತಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು. ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದವರು ಅರ್ಜಿ ಸಲ್ಲಿಸಿದರೆ ಮಾಸಿಕ 53 ಯೂನಿಟ್ ಉಚಿತವಾಗಿ ವಿದ್ಯುತ್ ಸಿಗಲಿದ್ದು, ಹೆಚ್ಚುವರಿ ವಿದ್ಯುತ್ ಬಿಲ್ ತುಂಬಬೇಕು ಎಂದರು.


    ಉಪಾಧ್ಯಕ್ಷ ವಿಷ್ಣು ರೇಡೇಕರ, ನಿರ್ದೇಶಕರಾದ ಕೆ.ಕೆ. ಬೆಣಚನಮರಡಿ, ಕುನಾಲ ಪಾಟೀಲ, ಬಿ.ಸಿ.ಪಟೋಳಿ, ಆರ್.ಎಸ್. ಅಸೋದೆ, ಐ.ಆರ್.ಬಂಜಿರಾಮ, ರವೀಂದ್ರ ಹಿಡಕಲ್, ಸಂಗೀತಾ ದಪ್ಪಾಧೂಳಿ,
    ಶಿವಲೀಲಾ ಮಣಗುತ್ತಿ, ರೆಸಿಡೆಂಟ್ ಇಂಜನಿಯರ್ ನೇಮಿನಾಥ ಖೇಮಲಾಪೂರೆ, ಮ್ಯಾನೇಜರ್ ದುರದುಂಡಿ ನಾಯಿಕ, ಅಕೌಂಟಂಟ್ ಎಸ್.ಎನ್.ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts