More

    ಗುರಿ ಸಾಧನೆಗೆ ಪರಿಶ್ರಮ ಅತ್ಯಗತ್ಯ

    ಕೋಲಾರ: ಶೈಕ್ಷಣಿಕ ಗುರಿ ಸಾಧನೆಗೆ ಪರಿಶ್ರಮ, ಆಸಕ್ತಿ, ಛಲ ಇರಬೇಕು. ಕಲಿಕೆ ಸಂದರ್ಭದಲ್ಲಿ ನಿಮ್ಮೆಲ್ಲ ಆಲೋಚನೆ ಬದಿಗೊತ್ತಿ ಮುನ್ನಡೆಯುವ ಪ್ರಯತ್ನ ಮಾಡಿ ಎಂದು ತಾಲೂಕಿನ ಬೆಳ್ಳೂರು ರಮಾಮಣಿ ಕಾಲೇಜು ಪ್ರಾಂಶುಪಾಲೆ ಡಾ.ಛಾಯಾದೇವಿ ತಿಳಿಸಿದರು.
    ನಗರದ ಮಹಿಳಾ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಅಗತ್ಯವಿರುವ ಯೋಜನೆ ತಯಾರು ಮಾಡುವ ಸಂಶೋಧನಾ ವಿಧಾನದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ಪಠ್ಯಕ್ರಮದಲ್ಲಿ ಬರುವ ವಿಷಯ, ಪೀಠಿಕೆ, ಉಪಸಂಹಾರ ಸೇರಿ ಎಲ್ಲ ಅಂಶಗಳ ಗಮನಿಸುವಿಕೆ ಅಗತ್ಯ. ವಿಶಯ ವಿಶ್ಲೇಷಣೆ ಜತೆಗೆ ವಿಷಯವನ್ನು ಸಮರ್ಪಕವಾಗಿ ಅರಿತುಕೊಂಡಾಗ ಮಾತ್ರವೇ ಯೋಜನೆ ತಯಾರಿಕೆ ಸುಲಭ ಎಂದರು.
    ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯೋಜನೆ ತಯಾರಿಸುವುದರ ಕುರಿತು ಮಾಹಿತಿ ನೀಡಿದ ಅವರು, ಯಾವುದೇ ವಿಷಯದ ಕುರಿತು ಯೋಜನೆ ತಯಾರು ಮಾಡುವಾಗ ಅಗತ್ಯ ಮಾಹಿತಿ ಸಂಪಾದನೆ ಅಗತ್ಯವಾಗಿದ್ದು, ಯೋಜನೆ ಆಕರ್ಷಣೀಯವಾಗಿರಬೇಕು ಎಂದರು.
    ಇತ್ತೀಚೆಗೆ ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಗುರಿ ಹೊಂದಿ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಉತ್ತಮ ಬದುಕುಕಟ್ಟಿಕೊಳ್ಳಲು ಅನೇಕ ಆಯಾಮಗಳಿವೆ ಎಂದರು.
    ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ತಯಾರಿಕೆ ಕಷ್ಟ ಎಂಬ ಭಾವನೆ ಇದೆ. ಆದರೆ ಯೋಜನೆ ತಯಾರಿಕೆಗೆ ಬ್ಯಾಂಕ್, ಉದ್ಯಮಗಳ ಸಹಕಾರವೂ ಅಗತ್ಯವಿದೆ. ಅಲ್ಲಿನ ಚಟುವಟಿಕೆಗಳ ಜೀವಂತ ವಿಷಯಗಳೇ ನಿಮ್ಮ ಪ್ರಾಜೆಕ್ಟ್ನ ಜೀವಾಳ ಆಗಿರುವುದರಿಂದ ಪ್ರತಿ ವಿದ್ಯಾರ್ಥಿ ಸ್ನಾತಕೋತ್ತರ ವಿಭಾಗದ ಕಡೇ ಸೆಮಿಸ್ಟರ್‌ನಲ್ಲಿ ಹೆಚ್ಚು ಕ್ರಿಯಾಶೀಲರಾಗಿಬೇಕು ಎಂದರು.
    ಪ್ರಾಂಶುಪಾಲ ಪ್ರೊ.ಗಂಗಾಧರರಾವ್ ಮಾತನಾಡಿ, ವಿದ್ಯಾರ್ಥಿ ಜೀವನ ಮಹತ್ವವಾದುದು. ಪದವಿ, ಸ್ನಾತಕೋತ್ತರ ಪದವಿಯ ೫ ವರ್ಷದ ಪರಿಶ್ರಮ ನಿಮ್ಮ ಜೀವನವನ್ನೇ ಬದಲಿಸಿ ನೀವು ನೆಮ್ಮದಿಯ ಹಾಗೂ ಸ್ವಾವಲಂಬಿ ಜೀವನ ನಡೆಸಲು ಕಾರಣವಾಗುತ್ತದೆ. ಜಿಎಸ್‌ಟಿ, ಆದಾಯ ತೆರಿಗೆ ಸಲ್ಲಿಕೆ ಸೇರಿದಂತೆ ನಿತ್ಯ ಜೀವನದ ಪ್ರತಿ ಆರ್ಥಿಕ ಚಟುವಟಿಕೆಗೂ ವಾಣಿಜ್ಯ ಶಾಸ್ತ್ರದ ಅಗತ್ಯವಿದೆ. ಕೇವಲ ಅಂಗಡಿ,ಸಂಸ್ಥೆ, ಕೈಗಾರಿಕೆಗಳು ಮಾತ್ರವಲ್ಲ, ಸಾಮಾನ್ಯರ ಜೀವನದಲ್ಲೂ ವಾಣಿಜ್ಯ ಶಾಸ್ತ್ರ ಹಾಸುಹೊಕ್ಕಾಗಿದೆ ಎಂದು ತಿಳಿಸಿದರು.
    ಬಿಬಿಎ, ಎಂಎ, ಎಂಕಾಂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
    ಪ್ರಾಧ್ಯಾಪಕರಾದ ಶ್ರೀನಿವಾಸಯ್ಯ, ಜಿ.ಎಂ.ಪ್ರಕಾಶ್, ಡಾ.ರಮೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts