More

    ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ

    ಗಜೇಂದ್ರಗಡ: ಪಟ್ಟಣದ ಪುರಸಭೆ ಸಭಾಭವನದಲ್ಲಿ ಶಾಸಕ ಕಳಕಪ್ಪ ಬಂಡಿ ಅಧ್ಯಕ್ಷತೆಯಲ್ಲಿ ಸೋಮವಾರ ಸಾಮಾನ್ಯ ಸಭೆ ನಡೆಯಿತು.
    ‘ಪಟ್ಟಣದ ಪತ್ತಾರಗಲ್ಲಿ ಹಾಗೂ ಉಣಚಗೇರಿಯ ದುರ್ಗಾದೇವಿ ದೇವಸ್ಥಾನದ ಹತ್ತಿರ ಹೊಸದಾಗಿ ನಿರ್ವಿುಸಿದ ಕಾಂಕ್ರೀಟ್ ರಸ್ತೆ ಸಂಪೂರ್ಣ ಕಳಪೆಯಾಗಿದೆ. ತಕ್ಷಣವೇ ಕಾಮಗಾರಿ ಕೈಗೊಂಡ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಪುರಸಭೆಯ ಸರ್ಕಾರಿ ಜಾಗವನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡಿರುವ ಖಾಸಗಿ ವ್ಯಕ್ತಿಗಳಿಗೆ ಹಾಗೂ ಅದನ್ನು ನೋಂದಾಯಿಸಿಕೊಟ್ಟಿರುವ ಆಗಿನ ಮುಖ್ಯಾಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸರ್ಕಾರಿ ಜಾಗಗಳನ್ನು ವಶಪಡಿಸಿಕೊಳ್ಳಿ ಎಂದು ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ತಾಕೀತು ಮಾಡಿದರು.
    ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಕಸ ತುಂಬಿದ್ದು, ನಿತ್ಯವೂ ಕಸ ವಿಲೇವಾರಿ ಮಾಡಿ ಶುಚಿತ್ವ ಕಾಪಾಡಿ ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
    ಸಭೆಯಲ್ಲಿ 2021-22ನೇ ಸಾಲಿಗೆ ಬಿಡುಗಡೆಯದ ಎಸ್​ಎಫ್​ಸಿ ಅನುದಾನದ ಕ್ರಿಯಾಯೋಜನೆ, ಪೌರ ಕಾರ್ವಿುಕರಿಗೆ ಬೆಳಗಿನ ಉಪಹಾರ ಮುಂದುವರಿಸುವ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯ ಸಹಾಯ ಧನ, 18ನೇ ವಾರ್ಡ್​ನಲ್ಲಿ ಹೊಸದಾಗಿ ಮಹಿಳಾ ಶೌಚಗೃಹ ನಿರ್ಮಾಣ ಹಾಗೂ 17ನೇ ವಾರ್ಡ್​ನಲ್ಲಿ ಶೌಚಗೃಹ ದುರಸ್ತಿಗೆ ಅನುಮೋದನೆ ನೀಡಲಾಯಿತು. ಪುರಸಭೆ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಉಪಾಧ್ಯಕ್ಷೆ ಲೀಲಾವತಿ ವನ್ನಾಲ, ಶಿವರಾಜ ಘೊರ್ಪಡೆ, ಯಮನಪ್ಪ ತಿರಕೋಜಿ, ಸುಭಾಸ ಮ್ಯಾಗೇರಿ, ಮುರ್ತಜಾ ಡಾಲಾಯತ, ಸುಜಾತಾಬಾಯಿ ಶಿಂಗ್ರಿ, ಯು.ಆರ್. ಚನ್ನಮ್ಮನವರ, ವೆಂಕಟೇಶ ಮುದಗಲ್ಲ, ಉಮಾ ಮ್ಯಾಕಲ್, ದೀಪಾ ಗೌಡರ ಇತರರು ಇದ್ದರು.
    ಏಕಪಕ್ಷೀಯವಾಗಿ ಅನುಮೋದನೆ ಆರೋಪ
    ಗಜೇಂದ್ರಗಡ: ಸೋಮವಾರ ಜರುಗಿದ ಸಾಮಾನ್ಯಸಭೆಯಲ್ಲಿ ಪ್ರಮುಖ ವಿಷಯಗಳನ್ನು ರ್ಚಚಿಸದೆ ಏಕಪಕ್ಷೀಯವಾಗಿ ಅನುಮೋದನೆ ನೀಡಲಾಗಿದೆ ಎಂದು ಪುರಸಭೆ ವಿಪಕ್ಷ ಸದಸ್ಯರು ಆರೋಪಿಸಿದರು.
    ಸದಸ್ಯರಾದ ಶಿವರಾಜ ಘೊರ್ಪಡೆ, ಮುರ್ತಜಾ ಡಾಲಾಯತ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರು ಪಟ್ಟಣದ ಅಭಿವೃದ್ಧಿ ಬಗ್ಗೆ ರ್ಚಚಿಸಲು ಬಂದಿದ್ದಾರೆ ಎಂದು ಭಾವಿಸಿದ್ದೆವು. ಆದರೆ, ಅವರು ಹಲವಾರು ಸಮಸ್ಯೆಗಳ ಬಗ್ಗೆ ರ್ಚಚಿಸದೇ ಏಕಪಕ್ಷೀಯವಾಗಿ ಕೇವಲ 20 ನಿಮಿಷದಲ್ಲಿ ಎಲ್ಲ ವಿಷಯಗಳಿಗೆ ಅನುಮೋದನೆ ನೀಡಿ ಸಭೆಯನ್ನು ಮೊಟಕುಗೊಳಿಸಿರುವುದು ಖಂಡನಾರ್ಹ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ಪ್ರತಿ ತಿಂಗಳು ಸಭೆ ನಡೆಸಿ ಎಲ್ಲ ವಿಷಯಗಳನ್ನು ಮುಕ್ತವಾಗಿ ರ್ಚಚಿಸುವಂತಾಗಬೇಕು. ಏಕಪಕ್ಷೀಯ ನಿರ್ಧಾರ ಮೂಲಕ ಚುನಾಯಿತ ಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಪುರಸಭೆಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಪುರಸಭೆ ಸದಸ್ಯರನ್ನು ಕರೊನಾ ಸೇನಾನಿಗಳೆಂದು ಜಿಲ್ಲಾಧಿಕಾರಿ ಪರಿಗಣಿಸಿದ್ದರು. ಆದರೆ, ಕರೊನಾಗೆ ಸಂಬಂಧಪಟ್ಟ ಒಂದೂ ಸಭೆಯನ್ನು ಮುಖ್ಯಾಧಿಕಾರಿ ನಡೆಸಿಲ್ಲ. ಹಗಲಲ್ಲಿ ಸಾರ್ವಜನಿಕರ ಕೈಗೆ ಸಿಗದ ಪುರಸಭೆ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು ಪ್ರತಿದಿನ ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಕಚೇರಿಯಲ್ಲಿ ಇರುತ್ತಾರೆ ಎಂದು ಆರೋಪಿಸಿದರು.
    2021 ಮಾರ್ಚ್​ನಿಂದ ಜೂನ್​ವರೆಗೆ ಜಮಾ ಖರ್ಚಿನಲ್ಲಿ ಅಕ್ರಮ ನಡೆಸಿದ್ದಾರೆ. ಪ್ರತಿ ಕುಟುಂಬದ ಗಣತಿಗೆ 60-70 ಸಾವಿರ ರೂ. ಖರ್ಚು ತೋರಿಸಿದ್ದಾರೆ. ಆದರೆ, ಯಾರ ಮನೆ ಗಣತಿ ಮಾಡಿದ್ದಾರೆ? ಅದಕ್ಕೆ ಆದೇಶ ಮಾಡಿದವರು ಯಾರು ಎಂಬುದರ ಬಗ್ಗೆ ಸದಸ್ಯರಿಗೆ ಮಾಹಿತಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸುದ್ದಿಗೋಷ್ಠಿಯಲ್ಲಿ ವೆಂಕಟೇಶ ಮುದಗಲ್ಲ, ಸವಿತಾ ಬಿದರಳ್ಳಿ ಹಾಗೂ ರಾಜು ಸಾಂಗ್ಲಿಕರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts