More

    ಗುಂಪುಗೂಡಿದರೆ ಹೋಂ ಕ್ವಾರಂಟೈನ್

    ನರಗುಂದ: ಪಟ್ಟಣದ ಕೆಲವು ಬಡಾವಣೆಗಳ ಜನರು ಗುಂಪು ಗುಂಪಾಗಿ ನಿಲ್ಲುವುದು ಕಂಡು ಬಂದಿದೆ. ಇದೇ ರೀತಿ ಮುಂದುವರೆದರೆ ಅಂತವರನ್ನು ಬೆನಕನಕೊಪ್ಪದ ಮುರಾರ್ಜಿ ಶಾಲೆಯಲ್ಲಿ ತೆರೆದಿರುವ ಹೋಂ ಕ್ವಾರಂಟೈನ್​ಗೆ ದಾಖಲು ಮಾಡುತ್ತೇವೆ ಎಂದು ಸಚಿವ ಸಿ.ಸಿ. ಪಾಟೀಲ ಎಚ್ಚರಿಸಿದರು.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಬೆಳೆ ಸಾಗಾಣಿಕೆ, ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ. ಆದರೆ, ರೈತರ ನೆಪದಲ್ಲಿ ಕಾನೂನು ದುರುಪಯೋಗ ಪಡಿಸಿಕೊಳ್ಳಲು ಮುಂದಾದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಗಡಿಗಳನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದರು.

    ಗದಗ ಮತ್ತು ವಿಜಯಪುರ ಜಿಲ್ಲೆಯಲ್ಲಿ ಇದುವರೆಗೆ ಒಂದೇ ಒಂದು ಕರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ. ಈ ಎರಡು ಜಿಲ್ಲೆಗಳ ಉಸ್ತುವಾರಿ ಸಚಿವನಾದ ನನಗೆ ಅತ್ಯಂತ ಸಮಾಧಾನದ ವಿಷಯವಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ನನ್ನ ಒಂದು ವರ್ಷದ ಸಂಪೂರ್ಣ ಸಂಬಳವನ್ನು ನೀಡುತ್ತೇನೆ ಎಂದು ಗಣಿ, ಭೂವಿಜ್ಞಾನ ಹೇಳಿದರು.

    ದೆಹಲಿ ನಿಜಾಮುದ್ದಿನ್ ಧರ್ಮಸಭೆಗೆ ಹೋಗಿ ಬಂದವರಿಂದ ಸಾರ್ವಜನಿಕರಲ್ಲಿ ಮತ್ತೆ ಕರೊನಾ ಹರಡುವ ಆತಂಕ ಮನೆ ಮಾಡಿದ್ದು, ಆ ಧರ್ಮ ಸಭೆಯಲ್ಲಿ ಪಾಲ್ಗೊಂಡಿರುವ ಎಲ್ಲರನ್ನೂ ಎರಡ್ಮೂರು ದಿನಗಳಲ್ಲಿ ಪತ್ತೆ ಹಚ್ಚುತ್ತೇವೆ ಎಂದರು.

    ಭಾರತೀಯ ಜನತಾ ಪಕ್ಷದಿಂದ ಪಟ್ಟಣದ ಎಲ್ಲ ನಿರ್ಗತಿಕರಿಗೆ ಆಹಾರ ಮತ್ತು ಅಗತ್ಯ ವಸ್ತು ಪೂರೈಕೆಗೆ ಎಲ್ಲ ರೀತಿಯ ಸಹಾಯಕ್ಕೆ ಮುಂದಾಗಿದ್ದೇವೆ. ಅವಶ್ಯಕತೆ ಇರುವವರು ಬಿಜೆಪಿ ನರಗುಂದ ಮಂಡಳ ಸದಸ್ಯರಾದ ಮಂಜು ಮೆಣಸಗಿ (9663781043), ಸಿದ್ದೇಶ ಹೂಗಾರ (9916668070), ಕಿರಣ ಮುಧೋಳೆ (9880995802), ವಿಠ್ಠಲ ಹವಾಲ್ದಾರ (9008449880) ಅವರನ್ನು ಸಂರ್ಪಸುವಂತೆ ಸಚಿವರು ತಿಳಿಸಿದರು.

    ಅಗತ್ಯ ವಸ್ತು ಖರೀದಿಗೆ ಸಮಯ ಬದಲಾವಣೆ

    ಮುಂಡರಗಿ: ಪಟ್ಟಣದಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತು ಖರೀದಿಸಲು ಸಮಯ ಬದಲಾವಣೆ ಮಾಡಲಾಗಿದೆ. ಸೋಮವಾರದಿಂದ ಶನಿವಾರದ ವರೆಗೆ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 9ಗಂಟೆಯವರೆಗೆ ಹಾಲು, ಕಿರಾಣಿ, ಆಗ್ರೋ ಅಂಗಡಿಗಳು ಮಾತ್ರ ಓಪನ್ ಇರುತ್ತವೆ. ಹಾಲು, ಕ್ಲಿನಿಕ್, ಔಷಧ ಅಂಗಡಿಗಳು ವಾರದ ಏಳು ದಿನವೂ ನಿರಂತರ ಓಪನ್ ಇರುತ್ತವೆ. ಪ್ರತಿದಿನ ಆಯಾ ವಾರ್ಡ್​ಗಳಿಗೆ ತಳ್ಳುಗಾಡಿಗಳ ಮೂಲಕ ತರಕಾರಿ ಪೂರೈಸಲಾಗುತ್ತದೆ ಎಂದು ತಹಸೀಲ್ದಾರ್ ಡಾ.ವೆಂಕಟೇಶ ನಾಯಕ ತಿಳಿಸಿದ್ದಾರೆ.

    ಕಾಯಿಪಲ್ಲೆ ಕಿಟ್ ವಿತರಣೆ

    ಶಿರೋಳ: ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾರೊಬ್ಬರೂ ಮನೆ ಬಿಟ್ಟು ಹೊರಬರಬಾರದು ಎಂದು ಸರ್ಕಾರ ಆದೇಶಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮದಲ್ಲಿ ಕಾಯಿಪಲ್ಲೆ ಕಿಟ್ ವಿತರಿಸುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ತಾಪಂ ಸದಸ್ಯ ಪ್ರಕಾಶಗೌಡ ತಿರಕನಗೌಡ್ರ ಹೇಳಿದರು. ಗ್ರಾಮದ ದಲಾಲಿ ವರ್ತಕ ನಜೀರ್​ಸಾಬ್ ಚಳ್ಳಮರದ ಅವರು ತಂದಿದ್ದ ಕಾಯಿಪಲ್ಲೆ ಕಿಟ್ ವಿತರಿಸಿ ಅವರು ಮಾತನಾಡಿದರು. ಬಸವರಾಜ ಬಣಗಾರ, ಗುರುಬಸು ಶೇಲ್ಲಿಕೆರಿ, ಗಿರೀಶ ಗಾಣಗೇರ, ಬಸಲಿಂಗಪ್ಪ ಚವಡಿ, ರಾಜು ತಾಂಬೂಲಿ, ದಾದಾಪೀರ ಶಿರೋರ, ಇಸ್ಲಾಂ ಕಮಿಟಿ ಸದಸ್ಯರು ಹಾಗೂ ದುರ್ಗಾದೇವಿ ಯುವಕ ಮಂಡಳದ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts