More

    ಗೀತಾ ಬಾನಾವಳಿ ಸಾವಿನ ಕಾರಣ ಬಹಿರಂಗಪಡಿಸಿ

    ಕಾರವಾರ: ಬಾಣಂತಿ ಗೀತಾ ಬಾನಾವಳಿ ಸಾವಿನ ಕಾರಣವನ್ನು 1 ವಾರದೊಳಗೆ ಸ್ಪಷ್ಟಪಡಿಸಬೇಕು, ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಸ್ಥಳೀಯ ಮೀನುಗಾರರ ಮುಖಂಡರು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.

    2020ರ ಸೆ. 3ರಂದು ಸರ್ಕಾರಿ ಕ್ರಿಮ್್ಸ ಆಸ್ಪತ್ರೆಯಲ್ಲಿ ಬಾಣಂತಿ ಗೀತಾ ಬಾನಾವಳಿ ಅವರಿಗೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಅಂದು ಗೀತಾ ಬಾನಾವಳಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ತನಿಖೆ ನಡೆಸಲು ಆಗಿನ ಜಿಲ್ಲಾಧಿಕಾರಿ ಆಗಿನ ಜಿಪಂ ಸಿಇಒ ಎಂ. ರೋಶನ್ ಅವರ ಸಮಿತಿ ರಚಿಸಿದ್ದರು. ಸಮಿತಿ ತನಿಖೆ ನಡೆಸಿ ವರದಿ ನೀಡಿದೆ ಎಂಬ ಮಾಹಿತಿ ಇದೆ. ವರದಿಯಲ್ಲಿ ಏನಿದೆ ಎಂಬುದು ಸ್ಪಷ್ಟವಾಗಿಲ್ಲ. ಗೀತಾ ಬಾನಾವಳಿ ಸಾವಿಗೆ ಕಾರಣವೇನು..?, ಕಾರಣರ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಶೀಘ್ರದಲ್ಲಿ ಗೀತಾ ಬಾನಾವಳಿ ಸಾವಿನ ಕಾರಣ ಬಹಿರಂಗ ಮಾಡಬೇಕು. ಆಕೆಯ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಮೀನುಗಾರ ಮುಖಂಡರು ಆಗ್ರಹಿಸಿದರು.

    ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ರಾಜು ತಾಂಡೇಲ, ಉಪಾಧ್ಯಕ್ಷ ಸುಧಾಕರ ತಾಂಡೇಲ, ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಷಾ ಎಲಕಪಾಟಿ, ನಗರಸಭೆ ಸದಸ್ಯರಾದ ಶಿಲ್ಪಾ ನಾಯ್ಕ, ರೇಷ್ಮಾ ಬಾನಾವಳಿ, ಸುಲಕ್ಷಾ ನಾಗರಾಜ ಬಾನಾವಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts