More

    ಗಿರಿಜಿಲ್ಲೆಯಲ್ಲಿ ಭಾರಿ ಮಳೆ, ಜನಜೀವನ ಸಂಪೂರ್ಣ ಅಸ್ತವ್ಯಸ್ಥ

    ಯಾದಗಿರಿ: ಶುಕ್ರವಾರ ತಡರಾತ್ರಿಯಿಂದ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು, ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

    ಮಳೆಯಿಂದಾಗಿ ಜಿಲ್ಲೆಯಲ್ಲಿ ರೈತರು ಬೆಳೆದ ಹತ್ತಿ, ತೊಗರಿ, ಭತ್ತ ಮತ್ತು ಮೆಣಸಿನಕಾಯಿ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಹಲವು ಹಳ್ಳಿಗಳಲ್ಲಿನ ಕೆರೆಗಳು ಭತರ್ಿಯಾಗಿದ್ದು, ಕೋಡಿ ಒಡೆಯುವ ಸಾಧ್ಯತೆ ದಟ್ಟವಾಗಿದೆ. ಇನ್ನೂ ಭಾರಿ ಮಳೆಯಿಂದ ಶಹಾಪುರ ನಗರ ಚರ ಬಸವೇಶ್ವರ ಬಡಾವಣೆಯಲ್ಲಿ ಸಿದ್ದಲಿಂಗೇಶ್ವರ ಕೆರೆ ನೀರು ಹರಿದು, ರಸ್ತೆ ಬದಿ ನಿಲ್ಲಿಸಲಾಗಿದ್ದ ಬೈಕ್ ಮತ್ತು ಕಾರಿಗಳು ನೀರಿನಲ್ಲ ಕೊಚ್ಚಿ ಹೋಗಿವೆ.

    ಹೊಲ ಗದ್ದೆಗಳಲ್ಲಿ ನೀರು ನಿಂತ ಪರಿಣಾಮ ಬೆಳೆಗಳು ನಾಶಗೊಂಡಿದ್ದು, ರೈತರ ಮೊಗದಲ್ಲಿ ಆತಂಕದ ಛಾಮೆ ಮೂಡಿಸಿದೆ. ಇನ್ನೂ ಮಳೆ ಹೆಚ್ಚಾಗುತ್ತಿರುವ ಕಾರಣ ಸುರಪುರ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಶನಿವಾರ ಜಲಾಶಯದಿಂದ ಕೃಷ್ಣಾ ನದಿಗೆ 1.27 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ. ಸಂಜೆಯ ವೇಳೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts