More

    ಗಿರಿಜನ ಮಹಿಳೆಯರಿಗೆ ಬೇಕಿದೆ ಅಗತ್ಯ ತರಬೇತಿ

    ಪಿರಿಯಾಪಟ್ಟಣ: ಗಿರಿಜನರ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಗಿರಿಜನ ಮಹಿಳೆಯರಿಗೆ ಸ್ವಾವಲಂಬಿ ಬದುಕು ರೂಪಿಸಲು ಅಗತ್ಯ ತರಬೇತಿ ನೀಡಬೇಕು ಎಂದು ಸಮಾಜಸೇವಕಿ ಹಾಗೂ ನಾರಿ ಟ್ರಸ್ಟ್ ಅಧ್ಯಕ್ಷೆ ಕೆ.ಪಿ.ಆಶಾಕುಮಾರಿ ಅಭಿಪ್ರಾಯಪಟ್ಟರು.


    ಪಿರಿಯಾಪಟ್ಟಣದ ಅಬ್ಬಳತಿ ಹಾಡಿಯ ಗಿರಿಜನರಿಗೆ ಮೈಸೂರಿನ ನಾರಿಟ್ರಸ್ಟ್ ವತಿಯಿಂದ ನೇರಳೆಹಣ್ಣಿನ ಗಿಡಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿ, ಗಿರಿಜನರಲ್ಲಿ ಪುರುಷರು ಬಹುತೇಕ ದುಶ್ಚಟಗಳಿಗೆ ಬಲಿಯಾಗಿ ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗದೆ ಕುಟುಂಬಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಆದ್ದರಿಂದ ಸರ್ಕಾರ ಗಿರಿಜನ ಮಹಿಳೆಯರಿಗಾಗಿ ವಿಶೇಷ ತರಬೇತಿ ನೀಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಬೇಕು. ಆಗ ಮಾತ್ರ ಗಿರಿಜನರ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾರಿಟ್ರಸ್ಟ್ ವತಿಯಿಂದ ಕಾಡಂಚಿನ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಆದಿವಾಸಿಗಳ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ನಿರ್ವಹಿಸುತ್ತಿದ್ದು. ಈಗಾಗಲೆ ಮಾಲಂಗಿ ಗ್ರಾಪಂ ವ್ಯಾಪ್ತಿಯಲ್ಲಿ ಗಿರಿಜನರ ದೇಸಿ ಬೀಜ ಬ್ಯಾಂಕ್, ನಿರ್ಮಿಸಲಾಗಿದ್ದು ಗಿರಿಜನರ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದ್ದು, ಗಿರಿಜನರ ಮೂಲ ಆಹಾರ ಪದ್ಧತಿಯ ರಕ್ಷಣೆ ಮುಂತಾದ ಕೆಲಸಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿ ಇವರ ಸಂಸ್ಕೃತಿ ಉಳಿಯುವಂತೆ ಮಾಡಬೇಕಿದೆ ಎಂದು ತಿಳಿಸಿದರು.


    ನಾರಿ ಟ್ರಸ್ಟ್ ಉಪಾಧ್ಯಕ್ಷೆ ಮತ್ತು ಗ್ರಾಪಂ ಸದಸ್ಯೆ ಪುವಿ, ಸಾವಯವ ಕೃಷಿಕ ಕಾಳಪ್ಪ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts