More

    ಗಾಳಿಪಟ ಹಾರಿಸಿದರೆ ಮನೋಲ್ಲಾಸ

    ನಿಪ್ಪಾಣಿ: ಚಳಿಗಾಲದಲ್ಲಿ ಗಾಳಿಪಟ ಹಾರಿಸುವುದರಿಂದ ವ್ಯಾಯಾಮ ದೊರೆತು ಏಕಾಗ್ರತೆಯ ಹೆಚ್ಚುವ ಜತೆಗೆ ಆರೋಗ್ಯ ಸುಧಾರಿಸುತ್ತದೆ. ಆದ್ದರಿಂದ ಗಾಳಿಪಟ ಉತ್ಸವ ನನ್ನ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಸ್ಥಳೀಯ ಶಿವಶಂಕರ ಜೊಲ್ಲೆ ಪಬ್ಲಿಕ್ ಸ್ಕೂಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಮಾತನಾಡಿ,ಗಾಳಿಪಟ ಉತ್ಸವ ಭಾರತೀಯ ಸಂಸ್ಕೃತಿಗೆ ತನ್ನದೇಯಾದ ಕೊಡುಗೆ ನೀಡಿದೆ. ದೇಶ ಸಂಸ್ಕೃತಿ ಮತ್ತು ಸಂಪ್ರದಾಯ ಗಣಿಯಾಗಿದೆ. ನಮ್ಮ ಸಂಸ್ಕೃತಿ ಇಡೀ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಪ್ರತಿಯೊಂದು ಹಬ್ಬಕ್ಕೂ ವೈಜ್ಞಾನಿಕ ದಷ್ಟಿಕೋನವಿದೆ. ನಮ್ಮಲ್ಲಿ ಮಕರ ಸಂಕ್ರಾಂತಿ ಎಳ್ಳು-ಬೆಲ್ಲ ಹಂಚಿ ಆಚರಿಸಿದರೆ, ಮೋದಿ ತವರು ರಾಜ್ಯ ಗುಜರಾತನಲ್ಲಿ ಗಾಳಿಪಟ ಉತ್ಸವವನ್ನಾಗಿ ಆಚರಿಸಲಾಗುತ್ತದೆ ಎಂದರು.

    40 ಜನ ಭಾರತೀಯ ಕ್ರೀಡಾಪಟುಗಳು, 10 ಜನ ವಿದೇಶಿ ಕ್ರೀಡಾಪಟುಗಳು ಭಾಗವಹಿಸಿದ್ದರು. ಎಲ್‌ಇಡಿ ಬೆಳಕಿನಲ್ಲಿ ಗಾಳಿಪಟ ಹಾರಾಟದ ದೃಶ್ಯಗಳು ಸ್ಥಳೀಯರನ್ನು ಮಂತ್ರಮುಗ್ಧಗೊಳಿಸಿವೆ ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಡಾ.ವರ್ಷಾ ಪಾಟೀಲ, ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭಂವರಲಾಲ್ ಆರ್ಯ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಪ್ರವೀಣ ಜೈನ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ ಇತರರು ಇದ್ದರು. ವಿಜಯ ರಾವುತ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts