More

    ಗಾರ್ಡನ್ ವೃತ್ತದಲ್ಲಿ ಫ್ಲೆಕ್ಸ ಅಳವಡಿಕೆಗಿಲ್ಲ ಅವಕಾಶ

    ಸಿದ್ದಾಪುರ: ಪಟ್ಟಣದಲ್ಲಿ ಆಯೋಜನೆಯಾಗುವ ವಿವಿಧ ಕಾರ್ಯಕ್ರಮ ಮುಗಿದರೂ ಫ್ಲೆಕ್ಸ್ ಬ್ಯಾನರ್​ಗಳು ಅಲ್ಲಿಯೇ ಇರುತ್ತಿವೆ. ಅವುಗಳನ್ನು ಕಾರ್ಯಕ್ರಮ ಮುಗಿದ ತಕ್ಷಣ ತೆಗೆಯಬೇಕು. ಅಲ್ಲದೆ, ಮುಂದಿನ ದಿನಗಳಲ್ಲಿ ಗಾರ್ಡನ್ ವೃತ್ತದ ಸುತ್ತ ಯಾವುದೇ ಬ್ಯಾನರ್​ಗಳನ್ನು ಕಟ್ಟಲು ಅವಕಾಶ ನೀಡಬಾರದು. ಬ್ಯಾನರ್ ಕಟ್ಟಲು ಸೂಕ್ತ ಸ್ಥಳ ನಿಗದಿ ಮಾಡಬೇಕು ಎಂದು ಪಪಂ ಸಾಮಾನ್ಯ ಸಭೆಯಲ್ಲಿ ತೀರ್ವನಿಸಲಾಯಿತು.

    ಪಪಂ ಸಭಾಂಗಣದಲ್ಲಿ ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ೕ ನಿರ್ಣಯ ಕೈಗೊಳ್ಳಲಾಯಿತು.

    ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛತೆ ಕುರಿತು ಪಪಂ ಹೆಚ್ಚು ಗಮನ ನೀಡುತ್ತಿದೆ. ಆದರೂ ಅಲ್ಲಲ್ಲಿ ಕಸ ಕಂಡು ಬರುತ್ತಿದೆ ಎಂದರು. ಮುಖ್ಯಾಧಿಕಾರಿ ಕುಮಾರ ನಾಯ್ಕ ಪ್ರತಿಕ್ರಿಯಿಸಿ, ಈಗಾಗಲೇ ಎಲ್ಲ ಅಂಗಡಿಯವರಿಗೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ, ವಿಶೇಷವಾಗಿ ಫಾಸ್ಟ್​ಫುಡ್ ಅಂಗಡಿಯವರ ಸಭೆ ಕರೆದು ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡುವಂತೆ ತಿಳಿಸಲಾಗಿದೆ ಎಂದರು.

    ಪಟ್ಟಣದ ಮಾರಿಕಾಂಬಾ ಚಿಕನ್- ಮಟನ್- ಮೀನು ಮಾರುಕಟ್ಟೆ ಕಟ್ಟಡದ ಮೇಲೆ ಪಪಂ ಉದ್ದಿಮೆ ನಿಧಿಯಿಂದ ಮಹಡಿ ಕಟ್ಟುವುದಕ್ಕೆ ಸಭೆ ನಿರ್ಣಯಿಸಿತು. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯಾಧಿಕಾರಿಗೆ ಕೆ.ಜಿ. ನಾಯ್ಕ, ಮಾರುತಿ ನಾಯ್ಕ ಸೂಚನೆ ನೀಡಿದರು.

    ರವೀಂದ್ರರ ನಗರ ಸೇರಿ ಮತ್ತಿತರ ಕಡೆಗಳಲ್ಲಿ ಕುಡಿಯುವ ನೀರಿನ ಪೈಪ್ ದುರಸ್ತಿ ಮಾಡಬೇಕಾಗಿದ್ದು, ಅದನ್ನು ಸರಿಪಡಿಸುವಂತೆ ಸದಸ್ಯ ಗುರುರಾಜ ಶಾನಭಾಗ, ವಿನಯ ಹೊನ್ನೆಗುಂಡಿ ತಿಳಿಸಿದರು.

    ಉಪಾಧ್ಯಕ್ಷ ರವಿಕುಮಾರ ನಾಯ್ಕ, ಮಾರುತಿ ಟಿ. ನಾಯ್ಕ, ವಿನಯ ಹೊನ್ನೆಗುಂಡಿ, ನಂದನ ಬೋರಕರ್, ಸುಧೀರ ನಾಯ್ಕ, ವಿಜೇಂದ್ರ ಗೌಡರ್, ವೆಂಕೋಬ ಎನ್.ಜಿ., ಯಶೋಧಾ, ಮುಬೀನಾ ಗುರುಕಾರ, ಮಂಜುಳಾ ನಾಯ್ಕ, ರಾಧಿಕಾ ಕಾನಗೋಡ ಹಾಗೂ ಪಪಂ ಅಧಿಕಾರಿಗಳಿದ್ದರು.

    ಪಪಂ ಸ್ಥಾಯಿ ಸಮಿತಿಗೆ ಆಯ್ಕೆ: ಪಪಂ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ಹಾಗೂ ಅಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ವಿನಯ ಸದಾಶಿವ ಹೊನ್ನೆಗುಂಡಿ ಆಯ್ಕೆಯಾದರು. ಸದಸ್ಯ ಸುಧೀರ ಎಸ್. ನಾಯ್ಕ ಅವರು ಹೆಸರು ಸೂಚಿಸಿದರು. ನಂದನ ಬೋರಕರ್ ಅನುಮೋದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts