More

    ಗಾಂಜಾ ಸಾಗಿಸುತ್ತಿದ್ದ ಐವರ ಬಂಧನ

    ಹುಬ್ಬಳ್ಳಿ: ಗಾಂಜಾ ಸಾಗಣೆ ಮಾಡಲು ಯತ್ನಿಸುತ್ತಿದ್ದ ಐವರನ್ನು ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿತರಿಂದ 85,000 ರೂ. ಬೆಲೆಯ 8 ಕೆಜಿ 495 ಗ್ರಾಂ ಗಾಂಜಾ, 5 ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ.

    ಬೀದರ ತಾಲೂಕು ಮರಕಲ್ ಗ್ರಾಮದ ಸಲೀಂಮಿಯಾ ಹುಸೇನ್ ಮೌಜಿಯಾ, ರಮೇಶ ಕೊರವಾ, ಹುಬ್ಬಳ್ಳಿ ವಿಕಾಸ ನಗರದ ಸಿದ್ದಾರ್ಥ ಹಬೀಬ, ನೇಕಾರ ನಗರದ ಲಿಂಗೇಶಗೌಡ ಪಾಟೀಲ ಮತ್ತು ಮಹೇಶ ಪಾಟೀಲ ಬಂಧಿತರು.

    ಹಳೇಹುಬ್ಬಳ್ಳಿ ಮಾವನೂರು ರಸ್ತೆ ಕಬಾಡಿ ಇಂಡಸ್ಟ್ರೀಸ್ ಬಳಿ ಬ್ಯಾಗ್​ನಲ್ಲಿ ಗಾಂಜಾ ತುಂಬಿಕೊಂಡು ಬೈಕ್​ನಲ್ಲಿ ಹೊರಟಿದ್ದರು. ಖಚಿತ ಮಾಹಿತಿ ಮೇರೆಗೆ ಇನ್​ಸ್ಪೆಕ್ಟರ್ ಎಂ.ಎಸ್. ಹೂಗಾರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಪಿಎಸ್​ಐ ಎಸ್.ಜಿ. ಕಾನಟ್ಟಿ, ಸಿಬ್ಬಂದಿ ಎಸ್.ಎಂ. ಕುರಹಟ್ಟಿ, ಸಿ.ಎಂ. ಕಂಬಾಳಿಮಠ, ಎಂ.ಎಚ್. ಹಾಲಾವರ, ಎ.ಎಂ. ತಹಸೀಲ್ದಾರ, ಪಿ.ಕೆ. ಬಿಕ್ಕನಗೌಡರ, ಗಿರೀಶ ಬಡಿಗೇರ, ರವಿ ಕೋಳಿ, ಫಕೀರೇಶ ಸುಣಗಾರ, ಜಯಶ್ರೀ ಚಿಲ್ಲೂರ ತಂಡದಲ್ಲಿದ್ದರು. ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ. ಗಾಂಜಾ ಎಲ್ಲಿ ಬೆಳೆಯುತ್ತಿದ್ದರು, ಇದರ ಹಿಂದೆ ಮತ್ತೆ ಯಾರ ಕೈವಾಡ ಇದೆ ಎಂಬ ಕುರಿತು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ.

    ಬೀದರ್​ನಿಂದ ಹುಬ್ಬಳ್ಳಿಗೆ ಪೂರೈಕೆ: ಬೀದರ ಮೂಲದ ಸಲೀಂಮಿಯಾ ಮೌಜಿಯಾ ಮತ್ತು ರಮೇಶ ಕೊರವಾ ಬೀದರ್​ನಿಂದ ಚೀಲದಲ್ಲಿ ಗಾಂಜಾ ತುಂಬಿಕೊಂಡು ಹುಬ್ಬಳ್ಳಿಗೆ ಬಂದಿದ್ದರು. ಮಾವನೂರ ರಸ್ತೆಯಲ್ಲಿ ಹುಬ್ಬಳ್ಳಿಯ ಸಿದ್ದಾರ್ಥ ಹಬೀಬ, ಲಿಂಗೇಶಗೌಡ ಪಾಟೀಲ ಮತ್ತು ಮಹೇಶ ಪಾಟೀಲಗೆ ಕೊಡಲು ಮುಂದಾಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರಿಂದ ಗಾಂಜಾ ಖರೀದಿಸುತ್ತಿದ್ದ ಸಿದ್ದಾರ್ಥ ಹಾಗೂ ಇತರರು 100, 500 ರೂ. ಪ್ಯಾಕೆಟ್ ಮಾಡಿ ಹುಬ್ಬಳ್ಳಿಯ ಆನಂದ ನಗರ, ಟಿಪ್ಪು ನಗರ, ಮಾವನೂರ ರಸ್ತೆ, ಇಂಡಿ ಪಂಪ್, ಹೊಸೂರ ವೃತ್ತ, ವಿದ್ಯಾನಗರ, ಗಿರಣಿಚಾಳ, ಕುಸುಗಲ್ಲ ರಸ್ತೆ, ಗೋಪನಕೊಪ್ಪ ಮತ್ತಿತರೆಡೆಗೆ ಮಾರುತ್ತಿದ್ದರು. ಈ ಹಿಂದೆಯೂ ಹಲವು ಬಾರಿ ಈ ತಂಡ ಬೀದರ್​ನಿಂದ ಇಲ್ಲಿಗೆ ಸಾಗಣೆ ಮಾಡಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts