More

    ಗಾಂಜಾ ಗಿಡ ಬೆಳೆದ ಆರೋಪಿ ಬಂಧನ

    ಮುಂಡರಗಿ: ಗೋವಿನಜೋಳ ಬೆಳೆ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದ ಆರೋಪದಡಿ ವ್ಯಕ್ತಿಯೊಬ್ಬರನ್ನು ಅಬಕಾರಿ ಉಪಅಧೀಕ್ಷಕ ಎಂ.ವಿ. ಮಾಲೀಪಾಟೀಲ ನೇತೃತ್ವದ ತಂಡ ಬಂಧಿಸಿ, 1 ಕೆಜಿ 250 ಗ್ರಾಂ ತೂಕದ 7 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ.

    ಹಿರೇವಡ್ಡಟ್ಟಿ ಗ್ರಾಮದ ಸಂಜೀವಪ್ಪ ದೇವಪ್ಪ ಗುಂಡಿಕೇರಿ ಬಂಧಿತ ಆರೋಪಿ. ಬಂಧಿತನಿಂದ ಅಂದಾಜು 20 ಸಾವಿರ ರೂ. ಮೌಲ್ಯದ 7 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಅಬಕಾರಿ ಇಲಾಖೆ ನಿರೀಕ್ಷಕ ಮಲ್ಲಿಕಾರ್ಜುನರೆಡ್ಡಿ, ಉಪನಿರೀಕ್ಷಕ ವಿವೇಕಾನಂದ ಮಂಕಾಳೆ, ನೌಕರರಾದ ಸದಾನಂದ ಹಡಪದ, ತಿಮ್ಮಯ್ಯ ಪವಾರ, ಹನುಮಂತ ಹಳ್ಳಿ, ರುದ್ರೇಶ ಕೋಣಸಾಗರ, ಹನುಮಂತ ನರೇಗಲ್ಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts