More

    ಗದ್ದೆಗಳಲ್ಲಿ ಮಂಡಿಯುದ್ದಕ್ಕೆ ನಿಂತ ನೀರು

    ತಲಕಾಡು: ನಿತ್ಯ ರಾತ್ರಿ ಧಾರಾಕಾರ ಸುರಿಯುವ ಮಳೆ ಹಳ್ಳದ ಭತ್ತದ ಗದ್ದೆ ಹಾಗೂ ಕಬ್ಬಿನ ತೋಟಗಳಲ್ಲಿ ಅಧಿಕ ನೀರು ನಿಲ್ಲುವಂತೆ ಮಾಡಿದೆ. ಗದ್ದೆಗಳಲ್ಲಿ ತುಂಬಿರುವ ಅಧಿಕ ನೀರನ್ನು ಹೊರಗೆ ಸಾಗಿಸಲು ರೈತರು ನಿತ್ಯ ಪ್ರಯಾಸಪಡುತ್ತಿದ್ದಾರೆ.


    ಕಬ್ಬು ಕಟಾವಿಗೆಂದು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನಿಂದ ಇಲ್ಲಿಗೆ ವಲಸೆ ಬಂದಿರುವ ನೂರಕ್ಕೂ ಹೆಚ್ಚು ಕೂಲಿ ಕಾರ್ಮಿಕರ ತಂಡಕ್ಕೆ ಅಧಿಕ ಮಳೆ ಕಬ್ಬು ಕಟಾವಿಗೆ ತೊಡಕು ನೀಡಿದೆ.


    ಇದಲ್ಲದೆ ಸಮೀಪದ ಕುರಬಾಳಹುಂಡಿ ಗ್ರಾಮದ ಬಳಿಯ ಜಮೀನಿನಲ್ಲಿ ತಾತ್ಕಾಲಿಕ ಗುಡಾರ ನಿರ್ಮಿಸಿಕೊಂಡು ಮೂರು ತಿಂಗಳಿಂದ ವಾಸವಿದ್ದ ಇಲ್ಲಿನ ಕಾರ್ಮಿಕರ ಗುಡಾರಗಳಿಗೆ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಗುಡಾರಗಳಲ್ಲಿನ ನೆಲದಲ್ಲಿ ತೇವಾಂಶ ಹೆಚ್ಚಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಗುಡಾರದ ನಿವಾಸಿಗಳು ಭಾನುವಾರ ಬೆಳಗಾಗುತ್ತಲೇ ಸಮೀಪದ ಟಿ.ಬೆಟ್ಟಹಳ್ಳಿ ಗ್ರಾಮದ ಬಳಿಯ ದಡದ ಪ್ರದೇಶಕ್ಕೆ ಗುಡಾರಗಳನ್ನು ಸ್ಥಳಾಂತರಕ್ಕೆ ಮುಂದಾಗಿದ್ದರು.


    ವಾರದಿಂದ ನಿತ್ಯ ಸರಿಯುತ್ತಿರುವ ಭಾರಿ ಮಳೆ ಹೋಬಳಿಯ ಅಚ್ಚುಕಟ್ಟು ರೈತರ ಜನಜೀವನ ಅಸ್ತವ್ಯಸ್ತ ಮಾಡಿದೆ. ಹಳ್ಳದ ಪ್ರದೇಶಗಳಲ್ಲಿ ವಾಸವಿರುವ ನಿವಾಸಿಗಳ ಮನೆ ಸುತ್ತ ನೀರು ನಿಂತು ಸಂಕಷ್ಟ ತಂದೊಡ್ಡಿದೆ. ಟಿ.ಮೇಗಡಹಳ್ಳಿ ಗ್ರಾಮದ ಒಂದು ನಿವಾಸಕ್ಕೆ ಚರಂಡಿ ತುಂಬಿದ ಮಳೆ ನೀರು ನುಸುಳಿದ್ದರಿಂದ ತೊಂದರೆಯಾಗಿದೆ.
    ಮಳೆಯಿಂದಾಗಿ ನೀರು ತುಂಬಿದ ಗದ್ದೆಗಳಲ್ಲಿ ಬೆಳೆ ಪರಿಸ್ಥಿತಿ ಅರಿಯಲು ರೈತರು ತೆರಳಲು ಆಗದಂತೆ ಗದ್ದೆ ರಸ್ತೆಗಳು ಹಾಳಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts