More

    ಗದಗ: 19 ಜಿಪಂ ಕ್ಷೇತ್ರಗಳನ್ನು 25ಕ್ಕೆ ಹೆಚ್ಚಿಸಿದ ಸೀಮಾ ನಿರ್ಣಯ ಆಯೋಗ.

    ಗದಗ:

    ಬಹು ನಿರೀಕ್ಷಿತ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರ ಪುನರ್ವಿಗಂಡಣೆ ಕುರಿತು ರಾಜ್ಯ ಸರ್ಕಾರ ಸೋಮವಾರ ಅ„ಕೃತ ಗೆಜೆಟ್ ಹೊರಡಿಸಿದ್ದು, ಜ.16ರ ಒಳಗಾಗಿ ಆಕ್ಷೇಪಣೆಗಳ ಸಲ್ಲಿಕೆಗೆ ಸೀಮಾ ನಿರ್ಣಯ ಆಯೋಗ ಸೂಚಿಸಿದೆ.
    ಜನಸಂಖ್ಯೆ ಮತ್ತು ಕಾರ್ಯಸಾಧು ಆಧಾರದಲ್ಲಿ ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡಲಾಗಿದೆ. ಈ ಮೊದಲಿದ್ದ 19 ಏಕಸದಸ್ಯ ಜಿಪಂ ಕ್ಷೇತ್ರಗಳನ್ನು 25ಕ್ಕೆ ಹೆಚ್ಚಿಸುರುವ ಆಯೋಗವು, ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು 77ಕ್ಕೆ ಸೀಮಿತಗೊಳಿಸಿದೆ.
    ಅಬ್ಬಿಗೇರಿ ಜಿಲ್ಲಾ ಪಂಚಾಯಿತಿ ಮೊದಲು ರೋಣಕ್ಕೆ ಒಳಪಟ್ಟಿತ್ತು. ಈಗ ಗಜೇಂದ್ರಗಡ ತಾಲೂಕಿಗೆ ಒಳಪಡಿಸಲಾಗಿದೆ. ಅಬ್ಬಿಗೇರಿ ಕ್ಷೇತ್ರದಿಂದ ಸವಡಿ ಹೊಸ ಜಿಪಂ ಕ್ಷೇತ್ರವಾಗಿ ಸೃಷ್ಟಿಯಾಗಿದೆ. ಲಕ್ಕುಂಡಿ ಜಿಪಂ ನಿಂದ ಕೊಟುಮುಚಗಿ, ಸೂಡಿ ಜಿಪಂ ಕ್ಷೇತ್ರದಿಂದ ರಾಜೂರು ಕ್ಷೇತ್ರವನ್ನು ಹೊಸದಾಗಿ ಸೃಷ್ಟಿಸಲಾಗಿದೆ.

    ನೂತನ 6 ಜಿಪಂ ಕ್ಷೇತ್ರಗಳು:

    ಕೋಟುಮುಚಗಿ: ಕಣಗಿನಾಳ, ಕಿರಟಗೇರಿ, ಕೋಟಮುಚಗಿ, ಹುಯಿಲಗೋಳ ಸೇರಿದಂತೆ 11 ಹಳ್ಳಿಗಳು,

    ಯಳವತ್ತಿ : ಯಳವತ್ತಿ, ಯತ್ತಿನಹಳ್ಳಿ, ಮಾಡಳ್ಳಿ ಸೇರಿ 13 ಹಳ್ಳಿಗಳು.

    ಬೆಳವಣಕಿ: ಬೆಳವಣಕಿ, ಮಲ್ಲಾಪುರ, ಸಂದಿಗವಾಡ, ಯಾವಗಲ್, ಯಾ.ಸ ಹಡಗಲಿ, ಕೌಜಗೇರಿ, ಮಾಳವಾಡ, ಹುಲ್ಲೂರು, ಸೋಮನಕಟ್ಟಿ ಸೇರಿದಂತೆ ಒಟ್ಟಾರೆ 15 ಹಳ್ಳಿಗಳು.

    ಸವಡಿ : ಸವಡಿ, ಹೊನ್ನಾಪುರ, ಚಿಕ್ಕಮಣ್ಣೂರು, ಹಿರೇಮಣ್ಣೂರು, ಅರಹುಣಸಿ, ಬಾಸಲಾಪುರ, ಕೊತಬಾಳ, ಮುಗಳಿ, ತಳ್ಳಿಹಾಳ, ಕುರಹಟ್ಟಿ, ಮುದೇನಗುಡಿ, ಹಿರೇಹಾಳ, ಹೊನ್ನಿಗನೂರು, ಮಾಡಲಗೇರಿ, ಯರೇಕುರುಬನಾಳ, ನೈನಾಪುರ

    ರಾಜೂರು: ರಾಜುರು, ಕಾಲಕಾಲೇಶ್ವರ, ಬೈರಾಪುರ ಸೇರಿದಂತೆ 23 ಹಳ್ಳಿಗಳು

    ಸೂರಣಗಿ: ಸೊರಣಗಿ, ಆದರಹಳ್ಳಿ, ಸುವರ್ಣಗಿರಿ, ಸಂಕದಾಳ ಸೇರಿ 10 ಹಳ್ಳಿಗಳು

    ಜಿಪಂ ಕ್ಷೇತ್ರ:
    ಕ್ಷೇತ್ರ- ಈ ಮೊದಲು – ನಂತರ – ಹೊಸ ಕ್ಷೇತ್ರ
    ಮುಂಡರಗಿ – 3 – 4 – ಕಲಕೇರಿ
    ಲಕ್ಷ್ಮೇಶ್ವರ – 0 – 3 – ಸೊರಣಗಿ, ಶಿಗ್ಲಿ, ಯಳವತ್ತಿ(ಹೊಸತಾಲೂಕು)
    ಶಿರಹಟ್ಟಿ – 3 – 3 – 0
    ರೋಣ – 4 – 4 – ಸವಡಿ
    ನರಗುಂದ – 2 – 2 – 0
    ಗಜೇಂದ್ರಗಡ – 0 – 3 – ರಾಜೂರು, ನಿಡಗುಂದಿ, ಸೂಡಿ(ಹೊಸ ತಾಲೂಕು)
    ಗದಗ – 5 – 6 – ಕೊಟುಮುಚಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts